ಕೆಲವು ದಿನಗಳ ಹಿಂದೆ ಬಹಿರಂಗವಾದ ‘ಪನಾಮಾ ಪತ್ರ’ಗಳಲ್ಲಿ ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ಕುಟುಂಬದ ಹೆಸರು ಹಾಗೂ ಮಾಜಿ ಪ್ರಧಾನಿ ಬೆನಜೀರ್ ಭುಟ್ಟೊ ಹೆಸರು ಉಲ್ಲೇಖಗೊಂಡಿತ್ತು. ಬ್ರಿಟಿಷ್ ವರ್ಜಿನ್ ಐಲ್ಯಾಂಡ್ಸ್ನಲ್ಲಿ ನವಾಜ್ ಷರೀಫ್ರ ಇಬ್ಬರು ಪುತ್ರರು, ಪುತ್ರಿ ಕಂಪನಿ ಸ್ಥಾಪಿಸಿದ್ದು, ಈ ಕಂಪನಿ ಲಂಡನ್ನಲ್ಲಿ ಕನಿಷ್ಠ ಆರು ಸ್ವತ್ತುಗಳನ್ನು ಹೊಂದಿದೆ. ಈ ಪೈಕಿ ಕೆಲವನ್ನು ಡಾಯ್ಚ ಬ್ಯಾಂಕ್ಗೆ ಅಡವಿಟ್ಟು 66 ಕೋಟಿ ರುಪಾಯಿ ಪಡೆದಿರುವುದು ಬೆಳಕಿಗೆ ಬಂದಿತ್ತು.