ಚೀನಾಗೆ ಜಪಾನ್ ಟಾಂಗ್: ದಕ್ಷಿಣ ಹಿಂದೂ ಮಹಾಸಾಗರದಲ್ಲಿ ಜಪಾನ್ ಯುದ್ಧ ನೌಕೆ

ದಕ್ಷಿಣ ಹಿಂದೂ ಮಹಾಸಾಗರದಲ್ಲಿ ಪಾರುಪತ್ಯ ಮೆರೆಯಲು ಹವಣಿಸುತ್ತಿರುವ ಚೀನಾ ದೇಶಕ್ಕೆ ಜಪಾನ್ ಟಾಂಗ್ ನೀಡಿದ್ದು, ವಿವಾದಿತ ದಕ್ಷಿಣ ಹಿಂದೂ ಮಹಾಸಾಗರದ ಮೂಲಕವಾಗಿ ಫಿಲಿಪ್ಪೈನ್ಸ್ ಗೆ ತನ್ನ ನೌಕಾಪಡೆಯ ಹಡಗನ್ನು ರವಾನಿಸಿದೆ...
ಜಪಾನ್ ಯುದ್ಧ ನೌಕೆ (ಸಂಗ್ರಹ ಚಿತ್ರ)
ಜಪಾನ್ ಯುದ್ಧ ನೌಕೆ (ಸಂಗ್ರಹ ಚಿತ್ರ)

ಬೀಜಿಂಗ್: ದಕ್ಷಿಣ ಹಿಂದೂ ಮಹಾಸಾಗರದಲ್ಲಿ ಪಾರುಪತ್ಯ ಮೆರೆಯಲು ಹವಣಿಸುತ್ತಿರುವ ಚೀನಾ ದೇಶಕ್ಕೆ ಜಪಾನ್ ಟಾಂಗ್ ನೀಡಿದ್ದು, ವಿವಾದಿತ ದಕ್ಷಿಣ ಹಿಂದೂ ಮಹಾಸಾಗರದ ಮೂಲಕವಾಗಿ ಫಿಲಿಪ್ಪೈನ್ಸ್ ಗೆ ತನ್ನ ನೌಕಾಪಡೆಯ ಹಡಗನ್ನು ರವಾನಿಸಿದೆ.

ಅತ್ತ ಜಪಾನ್ ನೌಕಾಪಡೆಯ ಹಡಗು ದಕ್ಷಿಣ ಹಿಂದೂ ಮಹಾಸಾಗರದಲ್ಲಿ ಚಲಿಸುತ್ತಿದ್ದಂತೆಯೇ ವಿವಾದಿತ ಪ್ರದೇಶದಲ್ಲಿ ಪ್ರಚೋದನಾತ್ಮಕ ವಾತಾವರಣ ನಿರ್ಮಾಣವಾಗಿದ್ದು, ಜಪಾನ್ ನೌಕಾಪಡೆಯ ನಡೆಯಿಂದಾಗಿ ಚೀನಾ ಕೆಂಡಾಮಂಡಲವಾಗಿದೆ. ಅಂತೆಯೇ ಪ್ರಕರಣ ಸಂಬಂಧ ಜಪಾನ್ ನಿಂದ ಪ್ರತಿಕ್ರಿಯೆ ಬಯಸಿದೆ. ಇನ್ನು ಚೀನಾ ಸರ್ಕಾರದ ಪ್ರಶ್ನೆಗೆ ಉತ್ತರಿಸಿರುವ ಜಪಾನ್ ಸರ್ಕಾರ ಫಿಲಿಪ್ಪೈನ್ಸ್ ನಲ್ಲಿರುವ ಸ್ಯೂಬಿಕ್ ಕೊಲ್ಲಿಯಲ್ಲಿ ಸೈನಿಕ ತರಬೇತಿ ಕಾರ್ಯಕ್ರಮಕ್ಕಾಗಿ ಮಾತ್ರ ನೌಕಾಪಡೆಯ ಹಡಗು ತೆರಳಿದಿಯೇ ಹೊರತು ಚೀನಾ ಸಮುದ್ರದಲ್ಲಿ ಅಶಾಂತಿ ಹುಟ್ಟಿಸುವ ಉದ್ದೇಶದಿಂದಲ್ಲ ಎಂದು ಸ್ಪಷ್ಟನೆ ನೀಡಿದೆ.

ಇನ್ನು ಕೇವಲ 2 ವಾರದ ಅಂತರದಲ್ಲಿ ಜಪಾನ್ ನೌಕಾಪಡೆ ಎರಡನೇ ಬಾರಿಗೆ ವಿವಾದಿತ ಸಮುದ್ರ ಪ್ರದೇಶದಲ್ಲಿ ಪ್ರಯಾಣ ಮಾಡಿದ್ದು ಚೀನಾದ ಡ್ರ್ಯಾಗನ್ ಸೇನೆಗೆ ಇರಿಸುಮುರುಸು ಉಂಟುಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com