ಲಂಡನ್ ನಲ್ಲಿ ಶಂಕಿತ ಉಗ್ರನ ಅಟ್ಟಹಾಸ; ಸಿಕ್ಕಸಿಕ್ಕವರಿಗೆ ಚಾಕುವಿನಿಂದ ಇರಿತ, ಮಹಿಳೆ ಸಾವು

ಬ್ರಿಟನ್ ರಾಜಧಾನಿ ಲಂಡನ್ ನಲ್ಲಿ ಶಂಕಿತ ಉಗ್ರನೋರ್ವ ಅಟ್ಟಹಾಸ ಮೆರೆದಿದ್ದು, ಹರಿತವಾದ ಚಾಕುವಿನಿಂದ ಸಿಕ್ಕಸಿಕ್ಕವರ ಮೇಲೆ ಹಲ್ಲೆ ನಡೆಸಿದ್ದಾನೆ. ಪರಿಣಾಮ ಹಲ್ಲೆಗೊಳಗಾದವರ ಪೈಕಿ ಓರ್ವ ಮಹಿಳೆ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಚಾಕು ದಾಳಿ ನಡೆದ ಕಾರ್ಡನ್ ಆಫ್ ಪ್ರದೇಶ (ಎಪಿ ಚಿತ್ರ)
ಚಾಕು ದಾಳಿ ನಡೆದ ಕಾರ್ಡನ್ ಆಫ್ ಪ್ರದೇಶ (ಎಪಿ ಚಿತ್ರ)

ಲಂಡನ್: ಬ್ರಿಟನ್ ರಾಜಧಾನಿ ಲಂಡನ್ ನಲ್ಲಿ ಶಂಕಿತ ಉಗ್ರನೋರ್ವ ಅಟ್ಟಹಾಸ ಮೆರೆದಿದ್ದು, ಹರಿತವಾದ ಚಾಕುವಿನಿಂದ ಸಿಕ್ಕಸಿಕ್ಕವರ ಮೇಲೆ ಹಲ್ಲೆ ನಡೆಸಿದ್ದಾನೆ. ಪರಿಣಾಮ  ಹಲ್ಲೆಗೊಳಗಾದವರ ಪೈಕಿ ಓರ್ವ ಮಹಿಳೆ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಲಂಡನ್ ನ ರಸೆಲ್ ಸ್ಕ್ವೇರ್ ಸಮೀಪದ ಬ್ರಿಟೀಷ್ ಮ್ಯೂಸಿಯಂ ಬಳಿಯ ಕಾರ್ಡನ್ ಆಫ್ ಸಮೀಪ ಕಳೆದ ರಾತ್ರಿ ಈ ಘಟನೆ ನಡೆದಿದ್ದು ಶಂಕಿತ ವ್ಯಕ್ತಿ ತನ್ನ ಬಳಿ ಇದ್ದ ಹರಿತವಾದ ಚಾಕುವಿನಿಂದ  ಬರೊಬ್ಬರಿ ಆರು ಮಂದಿಯ ಮೇಲೆ ಹಲ್ಲೆ ನಡೆಸಿದ್ದಾನೆ. ಇದನ್ನು ತಡೆಯಲು ಹೋದವರ ಮೇಲೂ ಆತ ಹಲ್ಲೆ ಮಾಡಿದ್ದು, ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಓರ್ವ ಮಹಿಳೆ  ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾಳೆ ಎಂದು ಲಂಡನ್ ಮೆಟ್ರೋ ಪಾಲಿಟನ್ ಪೊಲೀಸರು ತಿಳಿಸಿದ್ದಾರೆ.

ಭಾರೀ ಕೋಪೋದ್ರಿಕ್ತನಾಗಿದ್ದ ವ್ಯಕ್ತಿಯನ್ನು ಟೇಸರ್ ಸ್ಟನ್ ಗನ್ ಬಳಸಿ ಪೊಲೀಸರು ಬಂಧಿಸಿದ್ದಾರೆ. ದಾಳಿ ಹಿಂದೆ ಭಯೋತ್ಪಾದನೆಯ ಕುಮಕ್ಕು ಇರಬಹುದು ಅಥವಾ ದಾಳಿ ನಡೆಸಿದ ವ್ಯಕ್ತಿ ಮಾನಸಿಕ ಅಸ್ವಸ್ಥನಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಪ್ರಸ್ತುತ ಪ್ರಕರಣ ದಾಖಲಿಸಿಕೊಂಡಿರುವ ಮೆಟ್ರೋ ಪಾಲಿಟನ್ ಪೊಲೀಸರು ಬಂಧಿತ ವ್ಯಕ್ತಿಯನ್ನು ತೀವ್ರ ತನಿಖೆಗೊಳಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com