ಪ್ರವಾಹಕ್ಕೆ ಸಿಲುಕಿ ಬಾಂಗ್ಲಾಗೆ ತೆರಳಿದ್ದ ಭಾರತದ ಆನೆ "ಬಂಗಬಹದ್ದೂರ್" ಸಾವು!

ಕಳೆದ ವಾರ ಅಸ್ಸಾಂನಲ್ಲಿ ಸಂಭವಿಸಿದ ಭಾರಿ ಪ್ರವಾಹದ ನೀರಿನಲ್ಲಿ ಸಿಲುಕಿ ಭಾರತದಿಂದ ಬಾಂಗ್ಲಾದೇಶಕ್ಕೆ ತೆರಳಿದ್ದ ಬಂಗಬಹದ್ದೂರ್ ಎಂಬ ಭಾರತದ ಆನೆ ಮಂಗಳವಾರ ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿದೆ.
ಹೃದಯಾಘಾತಕ್ಕೆ ಒಳಗಾಗಿ ಸಾವನ್ನಪ್ಪಿದ ದೈತ್ಯ ಬಂಗಬಹದ್ದೂರ್ ಆನೆ (ಎಪಿ ಚಿತ್ರ)
ಹೃದಯಾಘಾತಕ್ಕೆ ಒಳಗಾಗಿ ಸಾವನ್ನಪ್ಪಿದ ದೈತ್ಯ ಬಂಗಬಹದ್ದೂರ್ ಆನೆ (ಎಪಿ ಚಿತ್ರ)
Updated on: 

ಢಾಕಾ: ಕಳೆದ ವಾರ ಅಸ್ಸಾಂನಲ್ಲಿ ಸಂಭವಿಸಿದ ಭಾರಿ ಪ್ರವಾಹದ ನೀರಿನಲ್ಲಿ ಸಿಲುಕಿ ಭಾರತದಿಂದ ಬಾಂಗ್ಲಾದೇಶಕ್ಕೆ ತೆರಳಿದ್ದ ಬಂಗಬಹದ್ದೂರ್ ಎಂಬ ಭಾರತೀಯ ಆನೆ ಮಂಗಳವಾರ  ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿದೆ.

ಬಾಂಗ್ಲಾದೇಶದ ಜಮಾಲ್ ಪುರದ ಶರಿಶಬರಿಯಲ್ಲಿ ಇಂದು ಬೆಳಗ್ಗೆ ಸುಮಾರು 6.30ರಲ್ಲಿ ದೈತ್ಯ ಆನೆ ಬಂಗಬಹದ್ದೂರ್ ಗೆ ಹೃದಯಾಘಾತವಾಗಿ ಸಾವನ್ನಪ್ಪಿದೆ ಎಂದು ತಿಳಿದುಬಂದಿದೆ. ಆನೆ  ಹೃದಯಾಘಾತದಿಂದ ಸಾವನ್ನಪ್ಪಿರುವ ವಿಚಾರವನ್ನು ಬಾಂಗ್ಲಾದೇಶದ ಬಂಗಬಂಧು ರಾಷ್ಟ್ರೀಯ ಉದ್ಯಾನವನದ ವೈದ್ಯ ಮುಸ್ತಫಿಜುರ್ ರೆಹಮಾನ್ ಅವರು ಸ್ಪಷ್ಟಪಡಿಸಿದ್ದಾರೆ. ಶರಿಶಬರಿಯ  ಕೊಯ್ರಾ ಗ್ರಾಮದಲ್ಲಿ ಆನೆ ಹೃದಯಾಘಾತವಾಗಿ ಕುಸಿದಿದ್ದು, ಇದನ್ನು ಗಮನಿಸಿದ ಸ್ಥಳೀಯರು ಅರಣ್ಯ ಇಲಾಖೆಗೆ ಸುದ್ದಿ ಮುಟ್ಟಿಸಿದ್ದಾರೆ.

ಕೂಡಲೇ ವೈದ್ಯರು ಸ್ಥಳಕ್ಕಾಗಮಿಸಿದರಾದರೂ ಅಷ್ಟು ಹೊತ್ತಿಗಾಗಲೇ ಆನೆ ಬಂಗಬಹದ್ದೂರ್ ಸಾವನ್ನಪ್ಪಿತ್ತು ಎಂದು ತಿಳಿದುಬಂದಿದೆ.

ಕಳೆದ ಜೂನ್ 27ರಂದು ಅಸ್ಸಾಂನಲ್ಲಿ ಸಂಭವಿಸಿದ ಭಾರಿ ಮಳೆಯಿಂದಾಗಿ ಬ್ರಹ್ಮಪುತ್ರ ನದಿಯಲ್ಲಿ ಉಂಟಾದ ಭಾರಿ ಪ್ರವಾಹದಿಂದಾಗಿ ದೈತ್ಯ ಆನೆ ಬಂಗಬಹದ್ದೂರ್ ಅಸ್ಸಾಂನಿಂದ  ಬಾಂಗ್ಲಾದೇಶಕ್ಕೆ ಕೊಚ್ಚಿಕೊಂಡು ಹೋಗಿತ್ತು. ಅಸ್ಸಾಂ ಮತ್ತು ಬಾಂಗ್ಲಾದೇಶದ ಗಡಿಯಲ್ಲಿರುವ ಕುರಿಗ್ರಾಮ್ ಜಿಲ್ಲೆಯ ನದಿ ತಟದಲ್ಲಿ ಆನೆ ಇದ್ದಾಗ ದಿಢೀರ್ ನುಗ್ಗಿದ ಪ್ರವಾಹಕ್ಕೆ ಸಿಲುಕಿ ಆನೆ  ರೌಮಾರಿ ಗಡಿ ಮೂಲಕ ಆನೆ ಬಾಂಗ್ಲಾದೇಶ ಪ್ರವೇಶಿಸಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರವಾಹ ನೀರಿನಲ್ಲಿ ಕೊಚ್ಚಿಕೊಂಡು ಬಂದಿದ್ದ ಆನೆಯನ್ನು ಬಾಂಗ್ಲಾದೇಶದ ಅರಣ್ಯಾಧಿಕಾರಿಗಳು ರಕ್ಷಿಸಿ ಕಾಡಿಗೆ ಅಟ್ಟಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com