ನ್ಯೂಯಾರ್ಕ್ ಪಾರ್ಕ್ ನಲ್ಲಿ ಡೊನಾಲ್ಡ್ ಟ್ರಂಪ್ ಬೆತ್ತಲೆ ವಿಗ್ರಹ; ವಿವಾದದ ಬಳಿಕ ಸ್ಥಳಾಂತರ

ಅಮೆರಿಕದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರ ನಗ್ನ ವಿಗ್ರಹವೊಂದು ನ್ಯೂಯಾರ್ಕ್ ನಗರದ ಪಾರ್ಕ್ ನಲ್ಲಿ ತಲೆ ಎತ್ತಿದ್ದು, ವಿಗ್ರಹದ ಬಳಿ ನಿಂತು ನೂರಾರು ಮಂದಿ ಸೆಲ್ಫೆ ತೆಗೆದುಕೊಳ್ಳುತ್ತಿದ್ದಾರೆ.
ವಿಗ್ರಹ ತೆರವುಗೊಳಿಸುತ್ತಿರುವ ಪಾರ್ಕ್ ಸಿಬ್ಬಂದಿ (ರಾಯಿಟರ್ಸ್ ಚಿತ್ರ)
ವಿಗ್ರಹ ತೆರವುಗೊಳಿಸುತ್ತಿರುವ ಪಾರ್ಕ್ ಸಿಬ್ಬಂದಿ (ರಾಯಿಟರ್ಸ್ ಚಿತ್ರ)
Updated on: 

ನ್ಯೂಯಾರ್ಕ್: ಅಮೆರಿಕದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರ ನಗ್ನ ವಿಗ್ರಹವೊಂದು ನ್ಯೂಯಾರ್ಕ್ ನಗರದ ಪಾರ್ಕ್ ನಲ್ಲಿ ತಲೆ ಎತ್ತಿದ್ದು, ವಿಗ್ರಹದ ಬಳಿ ನಿಂತು ನೂರಾರು ಮಂದಿ  ಸೆಲ್ಫೆ ತೆಗೆದುಕೊಳ್ಳುತ್ತಿದ್ದಾರೆ.

ನ್ಯೂಯಾರ್ಕ್ ಮ್ಯಾನ್ ಹಟನ್ ನಲ್ಲಿ ಯೂನಿಯನ್ ಪಾರ್ಕ್ ನಲ್ಲಿ ಈ ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿದ್ದು, "ದ ಎಂಪರರ್ ಹ್ಯಾಸ್ ನೋ ಬಾಲ್ಸ್" ಎಂಬ ಅಡಿಬರಹ ಹೊಂದಿದ್ದ ವಿಗ್ರಹ ಇದೀಗ  ವಿವಾದಕ್ಕೀಡಾಗಿದೆ. ನಗ್ನವಾಗಿರುವ ಈ ವಿಗ್ರಹದಲ್ಲಿ ಗುಪ್ತಾಂಗವೇ ಇಲ್ಲದಂತೆ ಬಿಂಬಿಸಲಾಗಿದ್ದು, ನ್ಯೂಯಾರ್ಕ್ ನಲ್ಲಿ ಈ ವಿಗ್ರಹ ತೀವ್ರ ವಿವಾದಕ್ಕೀಡಾಗಿದೆ. ಕೆಲವರು ಈ ವಿಗ್ರಹದ ಬಳಿ ಬಂದಿ  ಸೆಲ್ಫೆ ತೆಗೆದುಕೊಳ್ಳುತ್ತಿದ್ದರೆ, ಮತ್ತೆ ಕೆಲವರು ಈ ವಿಗ್ರಹವನ್ನು ಅಪಹಾಸ್ಯ ಮಾಡುತ್ತಿದ್ದಾರೆ.

ಟ್ರಂಪ್ ವಿರೋಧಿಗಳಂತೂ ಈ ವಿಗ್ರಹವನ್ನು ಅವರ ಅಧಿಕಾರಕ್ಕೆ ಹೋಲಿಕೆ ಮಾಡುತ್ತಿದ್ದು, ಇದಕ್ಕೆ ಟ್ರಂಪ್ ಬೆಂಬಲಿಗರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಟ್ರಂಪ್ ಅವರನ್ನು ಅಪಹಾಸ್ಯ  ಮಾಡುವ ಉದ್ದೇಶದಿಂದಲೇ ಈ ವಿಗ್ರಹವನ್ನು ಪ್ರತಿಷ್ಟಾಪಿಸಲಾಗಿದೆ ಎಂದು ಟ್ರಂಪ್ ಅಭಿಮಾನಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಮತ್ತೊಂದೆಡೆ ಈ ವಿಗ್ರಹವನ್ನು ತಾವೇ ತಯಾರಿಸಿ  ಪ್ರತಿಷ್ಠಾಪಿಸಿರುವುದಾಗಿ ಕ್ಯಾಲಿಫೋರ್ನಿಯಾ ಮೂಲದ ಇಂಡಿಕ್ಲೈನ್ ಎಂಬ ಸಂಘಟನೆ ಹೇಳಿಕೊಂಡಿದ್ದು, ನ್ಯೂಯಾರ್ಕ ನಲ್ಲಷ್ಟೇ ಅಲ್ಲ ಸ್ಯಾನ್ ಫ್ರಾನ್ಸಿಸ್ಕೋ, ಲಾಸ್ ಎಂಜಲೀಸ್, ಸೀಟ್ಲ್ ಮತ್ತು  ಕ್ಲೀವ್ ಲ್ಯಾಂಡ್ ನಲ್ಲಿ ವಿಗ್ರಹ ವಿಟ್ಟಿರುವುದಾಗಿ ಹೇಳಿದೆ.

ಇನ್ನೂ ಈ ಬಗ್ಗೆ ಟ್ರಂಪ್ ಕಚೇರಿಯಾಗಲಿ ಅಥವಾ ಅವರ ಮಾಧ್ಯಮ ವಕ್ತಾರರಾಗಲಿ ಈ ವರೆಗೂ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ.

ವಿವಾದದ ಬಳಿಕ ವಿಗ್ರಹ ತೆರವು

ಇನ್ನು ಟ್ರಂಪ್ ಅವರ ನಗ್ನ ವಿಗ್ರಹ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಸುದ್ದಿಗಳು ಪ್ರಸಾರವಾಗುತ್ತಿದ್ದಂತೆಯೇ ಎಚ್ಚೆತ್ತುಕೊಂಡಿರುವ ನ್ಯೂಯಾರ್ಕ್ ಉದ್ಯಾನ ಪ್ರಾಧಿಕಾರ  ವಿಗ್ರಹವನ್ನು ತೆರವುಗೊಳಿಸುವುದಾಗಿ ತಿಳಿಸಿದೆ. ಅಲ್ಲದೆ ಪ್ರಾಧಿಕಾರದ ಅನುಮತಿ ಇಲ್ಲದೇ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಲಾಗಿದ್ದು, ಅನುಮತಿ ಇಲ್ಲದ ಯಾವುದೇ ವಿಗ್ರಹ ಅಥವಾ ವಸ್ತುವನ್ನು  ಪಾರ್ಕ್ ನಲ್ಲಿಡಲು ಅವಕಾಶವಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com