ಸಾಕು ನಾಯಿ ರಕ್ಷಣೆಗಾಗಿ ಕಾಂಗರೂಗೆ ಪಂಚ್ ಕೊಟ್ಟ!: ವಿಡಿಯೋ ವೈರಲ್

ತನ್ನ ಸಾಕು ನಾಯಿಯನ್ನು ಹಿಡಿದುಕೊಂಡಿದೆ ಎಂಬ ಕಾರಣಕ್ಕೆ ನಾಯಿ ಮಾಲೀಕನೊಬ್ಬ ಕಾಂಗರೂ ಮುಖಕ್ಕೆ ಪಂಚ್ ಕೊಟ್ಟ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಪ್ಲೋಡ್ ಆದ ಕೇವಲ 4 ದಿನಗಳಲ್ಲಿ ಈ ವಿಡಿಯೋವನ್ನು ಬರೊಬ್ಬರಿ 23 ಮಿಲಿಯನ್ ಮಂದಿ ವೀಕ್ಷಣೆ ಮಾಡಿದ್ದಾರೆ.
ಕಾಂಗರೂಗೆ ಪಂಚ್ ಕೊಟ್ಟ ಗ್ರೇಗ್ ಟಾನ್ಕಿನ್ಸ್ (ಯೂಟ್ಯೂಬ್ ಚಿತ್ರ)
ಕಾಂಗರೂಗೆ ಪಂಚ್ ಕೊಟ್ಟ ಗ್ರೇಗ್ ಟಾನ್ಕಿನ್ಸ್ (ಯೂಟ್ಯೂಬ್ ಚಿತ್ರ)

ಮೆಲ್ಬೋರ್ನ್: ತನ್ನ ಸಾಕು ನಾಯಿಯನ್ನು ಹಿಡಿದುಕೊಂಡಿದೆ ಎಂಬ ಕಾರಣಕ್ಕೆ ನಾಯಿ ಮಾಲೀಕನೊಬ್ಬ ಕಾಂಗರೂ ಮುಖಕ್ಕೆ ಪಂಚ್ ಕೊಟ್ಟ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಪ್ಲೋಡ್ ಆದ  ಕೇವಲ 4 ದಿನಗಳಲ್ಲಿ ಈ ವಿಡಿಯೋವನ್ನು ಬರೊಬ್ಬರಿ 23 ಮಿಲಿಯನ್ ಮಂದಿ ವೀಕ್ಷಣೆ ಮಾಡಿದ್ದಾರೆ.

ವಿಡಿಯೋದಲ್ಲಿರುವ ಮಾಹಿತಿಯಂತೆ ಈ ಘಟನೆ ಸಂಭವಿಸಿರುವುದು ಕಾಂಗರೂಗಳ ನಾಡು ಆಸ್ಟ್ರೇಲಿಯಾದಲ್ಲಿ. ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್ ನಲ್ಲಿ. ಕಳೆದ ಜೂನ್ ತಿಂಗಳಲ್ಲಿ ಈ ವಿಡಿಯೋವನ್ನು ತೆಗೆಯಲಾಗಿದ್ದು, ಕ್ಯಾನ್ಸರ್  ಪೀಡಿತ ರೋಗಿಯೊಬ್ಬನ ಆಸೆ ಪೂರೈಸಲು ಬೇಟೆಗಾರರ ತಂಡವೊಂದು ಕಾಡುಹಂದಿಯನ್ನು ಭೇಟೆಯಾಡಲು ಸೌತ್ ವೇಲ್ಸ್ ಕಾಡಿಗೆ ತೆರಳಿರುತ್ತದೆ. ಕಾಡು ಹಂದಿ ಹುಡುಕಾಟಕ್ಕಾಗಿ ತರಬೇತಿ ನೀಡಿದ ನಾಯಿಗಳನ್ನು ಕೂಡ  ತಮ್ಮೊಂದಿಗೆ ಕರೆದುಕೊಂಡು ಹೋಗಿರುತ್ತಾರೆ.

ಕಾಡು ಹಂದಿಗಾಗಿ ಶೋಧ ನಡೆಸುತ್ತಿದ್ದಾಗ, ಒಂದು ನಾಯಿ ಆಕಸ್ಮಿಕವಾಗಿ ಕಾಂಗರೂ ದಾಳಿಗೊಳಗಾಗುತ್ತದೆ. ನೋಡ ನೋಡುತ್ತಿದ್ದಂತೆಯೇ ಕಾಂಗರೂ ನಾಯಿಯನ್ನು ಬಲವಾಗಿ ಹಿಡಿದುಕೊಳ್ಳುತ್ತದೆ. ನಾಯಿ ಕಾಂಗರೂ ಹಿಡಿತದಿಂದ  ಬಿಡಿಸಿಕೊಳ್ಳಲಾಗದೇ ಒದ್ದಾಡುತ್ತಿರುತ್ತದೆ. ಇದನ್ನು ಗಮನಿಸಿದ ನಾಯಿ ಮಾಲೀಕ ಗ್ರೇಗ್ ಟಾನ್ಕಿನ್ಸ್ ಕಾರಿನಿಂದ ಇಳಿದು ಓಡಿಬಂದು ಕಾಂಗರೂ ಜೊತೆಗೆ ಕಾಳಗಕ್ಕೆ ನಿಲ್ಲುತ್ತಾನೆ. ಆತ ಆಗಮಿಸುತ್ತಿದ್ದಂತೆಯೇ ಕಂಗಾಲಾದ ಕಾಂಗರೂ  ನಾಯಿಯನ್ನು ಬಿಟ್ಟು ಆತನ ಮೇಲೆ ದಾಳಿ ಮಾಡಲು ಸಜ್ಜಾಗುತ್ತದೆ. ಈ ಹಂತದಲ್ಲಿ ಆ ವ್ಯಕ್ತಿ ಕಾಂಗರೂ ಮುಖಕ್ಕೆ ಬಲವಾದ್ ಪಂಚ್ ನೀಡುತ್ತಾನೆ.

ನಾಯಿ ಮಾಲೀಕ ನೀಡಿದ ಪಂಚ್ ಗೆ ಸುಸ್ತಾದ ಕಾಂಗರೂ ನೋಡ ನೋಡುತ್ತಿದ್ದಂತೆಯೇ ಅಲ್ಲಿಂದ ಕಾಲ್ಕೀಳುತ್ತದೆ. ನಾಯಿ ತಪ್ಪಿಸಿಕೊಳ್ಳುತ್ತಿದ್ದಂತೆಯೇ ಅದರ ಮಾಲೀಕ ಕೂಡ ಬೇಟೆಗಾಗಿ ಹೊರಡುತ್ತಾನೆ. ಈ ವಿಡಿಯೋ ಇದೀಗ  ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಪ್ಲೋಡ್ ಆದ ನಾಲ್ಕು ದಿನಗಳಲ್ಲೇ ಬರೊಬ್ಬರಿ 23 ಮಿಲಿಯನ್ ಮಂದಿ ವೀಕ್ಷಿಸಿದ್ದಾರೆ.

ಕಾಂಗರೂಗೆ ಪಂಚ್ ನೀಡಿದ ಗ್ರೇಗ್ ಟಾನ್ಕಿನ್ಸ್ ಗೆ ಪ್ರಾಣಿ ಪ್ರಿಯರಿಂದ ಬೆದರಿಕೆ

ಇನ್ನು ಈ ವಿಡಿಯೋ ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕಾಂಗರೂಗೆ ಪಂಚ್ ನೀಡಿದ ಗ್ರೇಗ್ ಟಾನ್ಕಿನ್ಸ್ ಗೆ ಆಸ್ಟ್ರೇಲಿಯಾದ ಪ್ರಾಣಿ ಪ್ರಿಯರು ಬೆದರಿಕೆ ಒಡ್ಡುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಕಾಂಗರೂವನ್ನು ಹೊಡೆದ ನಿನ್ನ  ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವುದಾಗಿ ಕೆಲವರು ದೂರವಾಣಿ ಕರೆ ಮಾಡಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಸ್ಥಳೀಯ ವಾಹಿನಿಯೊಂದು ವರದಿ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com