ಭಾರತ-ಪಾಕ್ ಮಾತುಕತೆಗೆ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಕರೆ

ಸದ್ಯದಲ್ಲೇ ಅವಧಿಪೂರ್ಣಗೊಳಿಸಲಿರುವ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಬಾನ್ ಕಿ-ಮೂನ್ ಭಾರತ-ಪಾಕಿಸ್ತಾನದ ಮಾತುಕತೆಗೆ ಕರೆ ನೀಡಿದ್ದಾರೆ.
ಭಾರತ-ಪಾಕ್ ಮಾತುಕತೆಗೆ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಕರೆ
ಭಾರತ-ಪಾಕ್ ಮಾತುಕತೆಗೆ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಕರೆ
ವಿಶ್ವಸಂಸ್ಥೆ: ಸದ್ಯದಲ್ಲೇ ಅವಧಿಪೂರ್ಣಗೊಳಿಸಲಿರುವ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಬಾನ್ ಕಿ-ಮೂನ್ ಭಾರತ-ಪಾಕಿಸ್ತಾನದ ಮಾತುಕತೆಗೆ ಕರೆ ನೀಡಿದ್ದಾರೆ. 
ಗಡಿ ನಿಯಂತ್ರಣ ರೇಖೆಯಲ್ಲಿ ಹೆಚ್ಚುತ್ತಿರುವ ಪ್ರಕ್ಷುಬ್ಧ ವಾತಾವರಣದ ಬಗ್ಗೆಯೂ ಬಾನ್ ಕಿ-ಮೂನ್ ಆತಂಕ ವ್ಯಕ್ತಪಡಿಸಿದ್ದು, ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಬೇಕೆಂದು ಕರೆ ನೀಡಿದ್ದಾರೆ. 
ಬಾನ್ ಕಿ-ಮೂನ್ ಅವರ ಉಪವಕ್ತಾರ ಫರಾನ್ ಹಕ್ ಪಾಕಿಸ್ತಾನದ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸುತ್ತಾ ಬಾನ್ ಕಿ-ಮೂನ್ ಕಾಶ್ಮೀರ ವಿಷಯವನ್ನು ನಿರ್ಲಕ್ಷಿಸಿಲ್ಲ. ಕಾಶ್ಮೀರ ವಿಷಯವನ್ನೂ ಒಳಗೊಂಡಂತೆ ಭಾರತ-ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ಸಂಬಂಧದ ಬಗ್ಗೆ ಹೇಳಿಕೆ ನೀಡಿದ್ದಾರೆ ಎಂದು ಹಕ್ ತಿಳಿಸಿದ್ದಾರೆ. ಕಾಶ್ಮೀರ ವಿಚಾರದಲ್ಲಿ ತಟಸ್ಥವಾಗಿದ್ದ ಬಾನ್ ಕಿ-ಮೂನ್ ವಿವಾದ ಇತ್ಯರ್ಥಕ್ಕೆ ವಿಶ್ವಸಂಸ್ಥೆ ಸಹಕರಿಸಲಿದೆ ಎಂದಷ್ಟೇ ಹೇಳಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com