ಪಾಕ್ ಜೈಲಿನಲ್ಲಿದ್ದ 220 ಮಂದಿ ಭಾರತೀಯ ಮೀನುಗಾರರ ಬಿಡುಗಡೆ!

ಸಮುದ್ರಗಡಿಯನ್ನು ದಾಟಿ ಮೀನುಗಾರಿಕೆ ನಡೆಸುತ್ತಿದ್ದ ಆರೋಪದ ಮೇರೆಗೆ ಬಂಧತರಾಗಿದ್ದ ಸುಮಾರು 220 ಮಂದಿ ಭಾರತೀಯ ಮೀನುಗಾರರನ್ನು ಪಾಕಿಸ್ತಾನ ಸರ್ಕಾರ ಭಾನುವಾರ ಬಿಡುಗಡೆ ಮಾಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಇಸ್ಲಾಮಾಬಾದ್: ಸಮುದ್ರಗಡಿಯನ್ನು ದಾಟಿ ಮೀನುಗಾರಿಕೆ ನಡೆಸುತ್ತಿದ್ದ ಆರೋಪದ ಮೇರೆಗೆ ಬಂಧತರಾಗಿದ್ದ ಸುಮಾರು 220 ಮಂದಿ ಭಾರತೀಯ ಮೀನುಗಾರರನ್ನು ಪಾಕಿಸ್ತಾನ ಸರ್ಕಾರ ಭಾನುವಾರ ಬಿಡುಗಡೆ ಮಾಡಿದೆ.

ಪಠಾಣ್ ಕೋಟ್ ಉಗ್ರದಾಳಿ, ಉರಿ ಉಗ್ರ ದಾಳಿ ಬಳಿಕ ಉಭಯ ದೇಶಗಳ ನಡುವಿನ ಸಂಬಂಧ ತೀರಾ ಹಳಸಿತ್ತು. ಹೀಗಾಗಿ ಉಭಯ ದೇಶಗಳ ನಡುವಿನ ಸಂಬಂಧ ಉತ್ತಮಗೊಳಿಸುವ ಪ್ರಯತ್ನವಾಗಿ ಪಾಕಿಸ್ತಾನ ಸರ್ಕಾರ ವಿವಿಧ  ಜೈಲುಗಳಲ್ಲಿದ್ದ ಸುಮಾರು 220 ಮಂದಿ ಭಾರತೀಯ ಮೀನುಗಾರರನ್ನು ಬಿಡುಗಡೆ ಮಾಡಿದೆ. ಇನ್ನು ಭಾರತದಲ್ಲಿಯೂ ಪಾಕಿಸ್ತಾನದ ಸುಮಾರು ಮೀನುಗಾರರನ್ನು ಬಂಧಿಸಲಾಗಿದ್ದು, ಪಾಕ್ ಸರ್ಕಾರದ ಕ್ರಮದ ಬಳಿಕ ಭಾರತ ಕೂಡ  ತನ್ನ ವಶದಲ್ಲಿರುವ ಮೀನುಗಾರರನ್ನು ಬಿಡುಗಡೆಗೊಳಿಸುವ ಸಾಧ್ಯತೆ ಇದೆ.

ಡಿಸೆಂಬರ್ 25 ಪಾಕಿಸ್ತಾನದ ಮಟ್ಟಿಗೆ ವಿಶೇಷವಾಗಿದ್ದು, ಇಂದು ಕ್ರಿಸ್ ಮಸ್ ಹಾಗೂ ಪಾಕಿಸ್ತಾನದ ರಾಷ್ಟ್ರಪಿತಾ ಮಹಮದ್ ಅಲಿ ಜಿನ್ನಾ ಅವರ ಜನ್ಮದಿನವಾಗಿದೆ. ವಿಶೇಷವೆಂದರೆ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಅವರ  ಜನ್ಮದಿನ ಕೂಡ ಇಂದೇ. ಹೀಗಾಗಿ ಬೆಳಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಟ್ವಿಟರ್ ನಲ್ಲಿ ನವಾಜ್ ಷರೀಫ್ ಅವರಿಗೆ ಶುಭಾಶಯ ಕೋರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com