

ಜೆರುಸಲೇಮ್: ಹಮಾಸ್ ಪಡೆ ವಿರುದ್ಧ ಮತ್ತೊಮ್ಮೆ ಯುದ್ಧ ನಡೆಯುವ ಸಾಧ್ಯತೆ ಇದ್ದು ಇಸ್ರೇಲ್ ಸಿದ್ಧವಾಗಿದೆ ಎಂದು ಇಸ್ರೇಲ್ ನ ರಕ್ಷಣಾ ಸಚಿವ ಮೋಶೆ ಯಾಲನ್ ತಿಳಿಸಿದ್ದಾರೆ.
ಹೈಫಾದಲ್ಲಿ ಅಮೆರಿಕನ್ ಯುದ್ಧನೌಕೆ ಯುಎಸ್ಎಸ್ ಕಾರ್ನೆಯೊಂದಿಗೆ ಇಸ್ರೇಲ್ ತಾಲೀಮು ನಡೆಸುತ್ತಿದ್ದು, ಈ ಬಗ್ಗೆ ಮಾತನಾಡಿರುವ ಮೋಶೆ ಯಾಲೋನ್, ಸದ್ಯಕ್ಕೆ ಇಸ್ರೇಲ್ ಅಭೂತಪೂರ್ವ ಪ್ರಶಾಂತ ವಾತಾವರಣ ಅನುಭವಿಸುತ್ತಿದೆ. ಈ ವರೆಗೂ ಗಾಜಾಪಟ್ಟಿಯಲ್ಲಿರುವ ಹಮಾಸ್ ಒಂದೇ ಒಂದು ಗುಂಡನ್ನೂ ಹಾರಿಸಿಲ್ಲ ಎಂದು ಹೆಳಿದ್ದಾರೆ.
ಇದೇ ವೇಳೆ ಹಮಾಸ್ ಪಡೆಯ ಶಕ್ತಿ ಹೆಚ್ಚುತ್ತಿರುವುದನ್ನು ಒಪ್ಪಿಕೊಂಡಿರುವ ಮೋಶೆ ಯಾಲೋನ್ ಹಮಾಸ್ ಕ್ಷಿಪಣಿಗಳ ಮೂಲಕ ಶಸ್ತ್ರಸಜ್ಜಿತವಾಗಲು ಯತ್ನಿಸುತ್ತಿದೆ. ಕ್ಷಿಪಣಿಗಳ ಪರೀಕ್ಷೆ ನಡೆಸುತ್ತಿರುವ ಹಮಾಸ್ಮ್ ಇಸ್ರೇಲ್ ಮೇಲೆ ದಾಳಿ ನಡೆಸಲು ಟನಲ್ ಗಳನ್ನು ನಿರ್ಮಿಸುತ್ತಿದೆ. ಇದರಿಂದ ಪ್ರಾರಂಭವಾಗಬಹುದಾದ ಹೋರಾಟಕ್ಕೆ ಇಸ್ರೇಲ್ ಸಿದ್ಧವಿದೆ ಎಂದು ಹೇಳಿದ್ದಾರೆ.
ಗಾಜಾ ಪಟ್ಟಿಯಲ್ಲಿರುವ ಇಸ್ಲಾಮಿಕ್ ಪಡೆಗಳು 2014 ರಲ್ಲಿ ಇಸ್ರೇಲ್ ವಿರುದ್ಧ ದಾಳಿ ಮಾಡಿದ್ದರ ಪರಿಣಾಮ 70 ಕ್ಕೂ ಹೆಚ್ಚು ಇಸ್ರೇಲಿಗಳು ಮೃತಪಟ್ಟಿದ್ದರು, ಇಸ್ರೇಲ್ ನ ಪ್ರತಿ ದಾಳಿಗೆ 2 ,000 ಕ್ಕೂ ಹೆಚ್ಚು ಪ್ಯಾಲೆಸ್ಟೀನಿಯನ್ ಗಳು ಸಾವನ್ನಪ್ಪಿದ್ದರು.