ಮಹಾರಾಜಗಂಜ್: ಉತ್ತರ ಪ್ರದೇಶದ ಭಾರತ-ನೇಪಾಳದ ಗಡಿಯಲ್ಲಿ ಇಸ್ರೇಲ್ ನಾಗರಿಕನೊಬ್ಬನನ್ನು ಬಂಧಿಸಲಾಗಿದೆ. .ಪಾಸ್ ಪೋರ್ಟ್ ಇಲ್ಲದೇ ಅಕ್ರಮವಾಗಿ ಭಾರತದೊಳಗೆ ನುಸುಳುತ್ತಿದ್ದ ಇಸ್ರೇಲ್ ನಾಗರಿಕ ರ್ಯಾನ್ ರೋಸೆನೆಜ್ವೀ ನನ್ನು ಬಂಧಿಸಲಾಗಿದೆ..ನಿನ್ನೆ ಸಂಜೆ ಸೊನೌಲಿ ಬಸ್ ನಿಲ್ದಾಣದಲ್ಲಿ ಅನುಮಾನಸ್ಪದವಾಗಿ ಓಡಾಡುತ್ತಿದ್ದ ಈತ, ಕಠ್ಮಂಡುವಿನಿಂದ ಭಾರತಕ್ಕೆ ಬರುತ್ತಿದ್ದನು. .ಸೊನೌಲಿ ಪ್ರದೇಶದಲ್ಲಿ ಸಶಸ್ತ್ರ ಸೀಮಾ ಬಲ(ಎಸ್ ಎಸ್ ಬಿ) ಇಸ್ರೇಲ್ ನಾಗರಿಕನನ್ನು ಬಂಧಿಸಿದೆ ಎಂದು ಕಮ್ಯಾಂಡೆಂಟ್ ಕೆಎಸ್ ಬಂಕೋಟಿ ತಿಳಿಸಿದ್ದಾರೆ..ಆತನ ವಿರುದ್ಧ ಪ್ರಕರಣ ದಾಖಲಿಸಿದ್ದು, ಗುಪ್ತಚರ ಇಲಾಖೆ ಮಾಹಿತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ..Follow KannadaPrabha channel on WhatsApp Subscribe to KannadaPrabha YouTube Channel and watch Videos Download the KannadaPrabha News app to follow the latest news updates Subscribe and Receive exclusive content and updates on your favorite topics