
ಲಂಡನ್: ಬ್ರಿಟನ್ ಯುವರಾಜ ವಿಲಿಯಂ ಮತ್ತು ಅವರ ಪತ್ನಿ ಕೇಟ್ ಮಿಡ್ಲಟನ್ ಅವರು ಏ.10ರಂದು 6 ದಿನಗಳ ಕಾಲ ಭಾರತಕ್ಕೆ ಆಗಮಿಸಲಿದ್ದಾರೆಂದು ಹೇಳಲಾಗುತ್ತಿದೆ.
ಭಾರತದ ಜೊತೆ ಉತ್ತಮ ಸಂಬಂಧ ಹೊಂದುವ ನಿಟ್ಟಿನಲ್ಲಿ ಭೇಟಿ ನೀಡುತ್ತಿರುವ ದಂಪತಿ ಏ. 10 ರಂದು ಮುಂಬೈಗೆ ಆಗಮಿಸುತ್ತಿದ್ದಾರೆ. ಮುಂಬೈ ಭೇಟಿ ನಂತರ ಮತ್ತೆ ರಾಜಧಾನಿ ದೆಹಲಿ ಪ್ರಯಾಣ ಬೆಳಸಲಿದ್ದಾರೆಂದು ತಿಳಿದುಬಂದಿದೆ.
ನಂತರ ಆಗ್ರಾದ ತಾಜ್ ಮಹಲ್ ಗೆ ದಂಪತಿ ಭೇಟಿ ನೀಡಲಿದ್ದು, ಭಾರತೀಯ ಯುವ ಸಮೂಹದ ಜೊತೆ ಸಂವಾದ ನಡೆಸಲಿದ್ದಾರೆ. ಭಾರತಕ್ಕೆ ಭೇಟಿ ನೀಡಿದ ನಂತರ ದಂಪತಿಗಳು ಭೂತಾನ್ ಪ್ರವಾಸ ಕೈಗೊಳ್ಳಲಿದ್ದಾರೆಂದು ಎನ್ನಲಾಗುತ್ತಿದೆ.
Advertisement