ವಾಷಿಂಗ್ಟನ್: ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಸೂಪರ್‌ಸೋನಿಕ್ ಪ್ಯಾಸೆಂಜರ್ ಜೆಟ್ ನಿರ್ಮಾಣಕ್ಕೆ ಸಿದ್ಧತೆ ನಡೆಸಿದೆ. ಇದಕ್ಕಾಗಿ ಪ್ರಾಥಮಿಕ ವಿನ್ಯಾಸಗಳನ್ನು ಈಗಾಗಲೇ ರಚಿಸಿಯಾಗಿದೆ ಎಂದು ನಾಸಾ ಹೇಳಿದೆ.
ಸೂಪರ್‌ಸೋನಿಕ್ ಪ್ಯಾಸೆಂಜರ್ ಜೆಟ್‌ನ ಪ್ರಾಥಮಿಕ ವಿನ್ಯಾಸವನ್ನು ರಚಿಸಲು ಅಮೆರಿಕದ ಲಾಕ್‌ಹೀಡ್ ಮಾರ್ಟಿನ್ ಕಂಪನಿಯೊಂದಿಗೆ 2 ಕೋಟಿ ಡಾಲರ್‌ನ ಒಪ್ಪಂದ ಮಾಡಲಾಗಿದೆ ಎಂದು ನಾಸಾ ವ್ಯವಸ್ಥಾಪಕ ಚಾರ್ಲ್ಸ್ ಬೋಲ್ಡನ್ ಹೇಳಿದ್ದಾರೆ.
ಸಾಮಾನ್ಯವಾಗಿ ಜೆಟ್ ಇಂಜಿನ್‌ಗಳು ಅಧಿಕ ಸದ್ದು ಹೊರಡಿಸುತ್ತವೆ. ಆದರೆ ಇಲ್ಲಿ ಕಡಿಮೆ ಸದ್ದು ಮಾಡುವ ಇಂಜಿನ್‌ಗಳನ್ನು ರಚಿಸಲಾಗುತ್ತಿದೆ. ಮಾಲಿನ್ಯ ಕಡಿಮೆ ಮಾಡಿ, ಮೈಲೇಜ್ ಹೆಚ್ಚು ಮಾಡುವ ರೀತಿಯಲ್ಲಿ ಈ ಜೆಟ್ ನಿರ್ಮಾಣ ಮಾಡಲಾಗುತ್ತದೆ.
ಈ ವಿಮಾನವನ್ನು ಪರಿಸರ ಸ್ನೇಹಿಯನ್ನಾಗಿ ಮಾಡಲು ನಾಸಾ ತೀರ್ಮಾನಿಸಿದೆ ಎಂದು ನಾಸಾ ಹೇಳಿದೆ.