ಭಾರತ-ನೇಪಾಳ ನಡುವಿನ ವಿಚಾರದಲ್ಲಿ ಚೀನಾ ಹಸ್ತಕ್ಷೇಪ ಬೇಡ: ಚೀನಾ ಪತ್ರಿಕೆ

ಚೀನಾ ನೇಪಾಳದ ವಿಷಯದಲ್ಲಿ ಎಚ್ಚರಿಕೆಯಿಂದರಬೇಕು, ಭಾರತ-ನೇಪಾಳ ನಡುವಿನ ವಿಚಾರಗಳಲ್ಲಿ ಚೀನಾ ಹಸ್ತಕ್ಷೇಪ ಮಾಡಬಾರದು ಎಂದು ಚೀನಾದ ಪತ್ರಿಕೆಯೊಂದು ಎಚ್ಚರಿಕೆ ನೀಡಿದೆ.
ಚೀನಾ ಪತ್ರಿಕೆ ಗ್ಲೋಬಲ್ ಟೈಮ್ಸ್(ಸಂಗ್ರಹ ಚಿತ್ರ)
ಚೀನಾ ಪತ್ರಿಕೆ ಗ್ಲೋಬಲ್ ಟೈಮ್ಸ್(ಸಂಗ್ರಹ ಚಿತ್ರ)
Updated on

ಬೀಜಿಂಗ್: ಚೀನಾ ನೇಪಾಳದ ವಿಷಯದಲ್ಲಿ ಎಚ್ಚರಿಕೆಯಿಂದರಬೇಕು, ಭಾರತ-ನೇಪಾಳ ನಡುವಿನ ವಿಚಾರಗಳಲ್ಲಿ ಚೀನಾ ಹಸ್ತಕ್ಷೇಪ ಮಾಡಬಾರದು ಎಂದು ಚೀನಾದ ಪತ್ರಿಕೆಯೊಂದು ಎಚ್ಚರಿಕೆ ನೀಡಿದೆ.

ಜವಾಬ್ದಾರಿಯುತ ರಾಷ್ಟ್ರವಾಗಿದ್ದುಕೊಂಡು ನೇಪಾಳಕ್ಕೆ ಚೀನಾ ಅಗತ್ಯ ಸಹಾಯ ಮಾಡಲಿ, ಆದರೆ ಅದು ತನ್ನ ಲಾಭವನ್ನು ಬಲಿಕೊಡುವುದು ಸೂಕ್ತವಲ್ಲ ಎಂದು ಸರ್ಕಾರಿ ಸ್ವಾಮ್ಯದ ಗ್ಲೋಬಲ್ ಟೈಮ್ಸ್ ನ ಲೇಖನವೊಂದು ಹೇಳಿದೆ. 'ಲಿಪು- ಲೇಖ್ ಪಾಸ್‌ ಹಾಗೂ ನೇಪಾಳದ ನೂತನ ಸಂವಿಧಾನದ ಬಗ್ಗೆ ಉಂಟಾಗಿರುವ ವಿವಾದದ ಬಗ್ಗೆ ಗ್ಲೋಬಲ್ ಟೈಮ್ಸ್ ಸಲಹೆ ನೀಡಿದ್ದು, ಭಾರತ- ನೇಪಾಳದ ನಡುವೆ ಚೀನಾ ಮಧ್ಯಸ್ಥಿಕೆ ವಹಿಸಬೇಕು ಎಂದು ಅಭಿಪ್ರಾಯಪಟ್ಟಿದೆ.
ಅನಿಲ ಕೊರತೆ ಎದುರಿಸುತ್ತಿರುವ ನೇಪಾಳಕ್ಕೆ ಚೀನಾ ತಾತ್ಕಾಲಿಕವಾಗಿ ಚೀನಾ ತೈಲ ಪೂರೈಕೆ ಮಾಡುತ್ತಿದ್ದು, ಒಂದೆಡೆ ನೇಪಾಳಕ್ಕೆ ಸಹಾಯ ಮಾಡುವುದು ಹಾಗೂ ಮತ್ತೊಂದೆಡೆ ರಾಷ್ಟ್ರದ ಹಿತಾಸಕ್ತಿ ಕಾಪಾಡಿಕೊಳ್ಳುವುದು ಮುಖ್ಯವಾಗಿದೆ, ನೇಪಾಳಕ್ಕೆ ಸಹಾಯ ಮಾಡುವ ಭರದಲ್ಲಿ ರಾಷ್ಟ್ರದ ಹಿತಾಸಕ್ತಿ ಬಲಿಕೊಡುವುದು ಸೂಕ್ತವಲ್ಲ ಎಂದು ಗ್ಲೋಬಲ್ ಟೈಮ್ಸ್ ಅಭಿಪ್ರಾಯಪಟ್ಟಿದೆ. 
ಲಿಪು- ಲೇಖ್ ಪಾಸ್  ಬಗ್ಗೆ ಕಠ್ಮಂಡು ಹಾಗೂ ನವದೆಹಲಿ ಮಧ್ಯೆ ಹಲವು ವರ್ಷಗಳಿಂದ ವಿವಾದ ಬಗೆಹರಿಯದೆ ಉಳಿದಿದೆ. ಭಾರತ-ಚೀನಾ ಜಂಟಿ ಹೇಳಿಕೆಯಲ್ಲಿ ಲಿಪು-ಲೇಖ್ ಪಾಸ್ ಬಗ್ಗೆ ಉಲ್ಲೇಖ ಮಾಡಿರುವುದು ನೇಪಾಳದ ಪ್ರತಿಭಟನೆಯನ್ನು ಮತ್ತಷ್ಟು ತೀವ್ರಗೊಳಿಸಿದೆ. ಆದ್ದರಿಂದ ಚೀನಾ ಭಾರತ-ನೇಪಾಳದ ವಿಷಯಗಳಲ್ಲಿ ಹಸ್ತಕ್ಷೇಪ ಮಾಡುವುದು ಸೂಕ್ತ ಅಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com