ಭಾರತದ ಚಿತ್ರಕ್ಕಿಲ್ಲ ಸ್ಥಾನ, ಕನ್ನಡದ ರಂಗಿತರಂಗ, ಫುಟ್‍ಪಾತ್2 ಹೊರಕ್ಕೆ

ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಯ ಅಂತಿಮ ಸುತ್ತಿನ ನಾಮನಿರ್ದೇಶನ ಪಟ್ಟಿ ಹೊರಬಿದ್ದಿದ್ದು, ಹಾಲಿವುಡ್ ನಟ ಲಿಯನಾರ್ಡೊ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಲಾಸ್‍ಏಂಜಲೀಸ್: ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಯ ಅಂತಿಮ ಸುತ್ತಿನ ನಾಮನಿರ್ದೇಶನ ಪಟ್ಟಿ ಹೊರಬಿದ್ದಿದ್ದು, ಹಾಲಿವುಡ್ ನಟ ಲಿಯನಾರ್ಡೊ ಡಿಕ್ಯಾಪ್ರಿಯೊ, ಸಿಲ್ವೆಸ್ಟರ್ ಸ್ಟಲ್ಲೋನ್ ಹಾಗೂ ಜೆನ್ನಿಫರ್ ಲಾರೆನ್ಸ್ ಅತಿ ಹೆಚ್ಚು ವಿಭಾಗಗಳಲ್ಲಿ ಪ್ರಶಸ್ತಿಯ ಹೊಸ್ತಿಲಲ್ಲಿದ್ದಾರೆ.
ಸಿನಿಮಾಗಳ ಪೈಕಿ, ಅತ್ಯುತ್ತಮ ಸಿನಿಮಾ, ಅತ್ಯುತ್ತಮ ನಿರ್ದೇಶನ ಸೇರಿ 12 ವಿಭಾಗಗಳಲ್ಲಿ ನಾಮನಿದೇರ್ಶನದೊಂದಿಗೆ `ದ ರೆವೆನಂಟ್' ಮೊದಲ ಸ್ಥಾನದಲ್ಲಿದ್ದರೆ, ನಿರ್ದೇಶಕ ಅಲೆಕ್ಸಾಂಡ್ರೋ ಇನರಿಟು ಸತತ 2ನೇ ಬಾರಿಗೆ ನಾಮನಿರ್ದೇಶನ ಗೊಂಡಿದ್ದಾರೆ. 10 ವಿಭಾಗಗಳಿಗೆ ನಾಮನಿರ್ದೇಶನದ ಮೂಲಕ `ಮ್ಯಾಡ್ ಮಾಕ್ಸ್; ಫ್ಯಾರಿ ರೋಡ್' ಎರಡನೇ ಸ್ಥಾನದಲ್ಲಿದೆ.
ಭಾರತಕ್ಕೆ ನಿರಾಸೆ: ವಿದೇಶೀ ಭಾಷಾ ವಿಭಾಗಕ್ಕೆ ಭಾರತದಿಂದ ಅಧಿಕೃತ ಪ್ರವೇಶ ಪಡೆದಿದ್ದ ಬಹು ನಿರೀಕ್ಷಿತ ಮರಾಠಿ ಸಿನಿಮಾ `ಕೋರ್ಟ್' ಅಂತಿಮ ನಾಮನಿರ್ದೇಶನದಲ್ಲಿ ಸ್ಥಾನ ಪಡೆಯಲಿಲ್ಲ. ನೇರ ಪ್ರವೇಶ ವರ್ಗದಲ್ಲಿದ್ದ ಕನ್ನಡದ `ರಂಗಿತರಂಗ', `ಫುಟ್‍ಪಾತ್2' ಸಿನಿಮಾಗಳೂ ಪ್ರಶಸ್ತಿ ಸುತ್ತಿನಿಂದ ಹೊರಬಿದ್ದಿವೆ.
ಆದರೆ, ಭಾರತೀಯ ಮೂಲದ ಸಂಜಯ್ ಪಟೇಲ್‍ರ `ಸಂಜಯ್ಸ್ ಸೂಪರ್ ಟೀಮ್' ಕಿರುಚಿತ್ರ ಬೆಸ್ಟ್ ಆ್ಯನಿಮೇಟೆಡ್ ಶಾರ್ಟ್ ಫಿಲಂ ವಿಭಾಗದಲ್ಲಿ ನಾಮನಿರ್ದೇಶನಗೊಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com