
ಕಾಬೂಲ್: ತಾಲಿಬಾನಿ ಉಗ್ರರ ಜೊತೆ ಶಾಮೀಲಾದ ಪೊಲೀಸ್ ಪೇದೆಯೊಬ್ಬ ತನ್ನ ಸಹೋದ್ಯೋಗಿಗಳ ಮೇಲೆ ಗುಂಡಿನ ದಾಳಿ ನಡೆಸಿದ್ದು, ಇದರಲ್ಲಿ 10 ಮಂದಿ ಪೊಲೀಸರು ಬಲಿಯಾಗಿದ್ದಾರೆ.
ತಾಲಿಬಾನಿ ಉಗ್ರರ ಜತೆ ಪೊಲೀಸರು ಶಾಮೀಲಾಗಿ ನಡೆಸಿರುವ ಎರಡನೇ ದಾಳಿ ಇದಾಗಿದೆ. ಹತ್ಯಾಕಾಂಡದ ಬಳಿಕ ತಾಲಿಬಾನ್ ನಸುಳುಕೋರರು ಮೃತ ಪೊಲೀಸರ ಬಳಿ ಇದ್ದ ಶಸ್ತ್ರಾಸ್ತ್ರಗಳನ್ನು ಕದ್ದು ಪರಾರಿಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉರುಝುಗಾನ್ ಪ್ರಾಂತದ ಚಿನಾರ್ಟೊ ಜಿಲ್ಲೆಯ ಪೊಲೀಸ್ ಹೊರ ಠಾಣೆಯಲ್ಲಿ ಈ ದಾಳಿ ಸಂಭವಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಪೊಲೀಸ್ ಪೇದೆ ತಾಲಿಬಾನ್ ಜೊತೆ ಷಾಮೀಲಾಗಿದ್ದ ಎಂಬುದನ್ನು ನಮ್ಮ ತನಿಖೆಗಳು ತಿಳಿಸಿವೆ. ಆತ ಸಹೋದ್ಯೋಗಿಗಳಿಗೆ ಮಾದಕ ದ್ರವ್ಯ ನೀಡಿ ಅವರು ಅಮಲಿನಲ್ಲಿ ಪ್ರಜ್ಞೆ ಕಳೆದುಕೊಂಡಿದ್ದಾಗ ಅವರ ಮೇಲೆ ಗುಂಡು ಹಾರಿಸಿದ್ದಾನೆ ಎಂದು ತಿಳಿದುಬಂದಿದೆ.
Advertisement