ಬಿಲ್ ಗೇಟ್ಸ್ ವಿಶ್ವದ ಧನಿಕ

ವಿಶ್ವದ 50 ಭಾರಿ ಶ್ರೀಮಂತರ ಪಟ್ಟಿಯಲ್ಲಿ ಭಾರತದ ಮುಖೇಶ್ ಅಂಬಾನಿ, ಅಜಿಂ ಪ್ರೇಮ್ ಜಿ ಮತ್ತು ದಿಲೀಪ್ ಸಾಂಘ್ವಿ...
ಬಿಲ್ ಗೇಟ್ಸ್
ಬಿಲ್ ಗೇಟ್ಸ್
ನವದೆಹಲಿ: ವಿಶ್ವದ 50 ಭಾರಿ ಶ್ರೀಮಂತರ ಪಟ್ಟಿಯಲ್ಲಿ ಭಾರತದ ಮುಖೇಶ್ ಅಂಬಾನಿ, ಅಜಿಂ ಪ್ರೇಮ್ ಜಿ ಮತ್ತು ದಿಲೀಪ್ ಸಾಂಘ್ವಿ ಸ್ಥಾನ ಪಡೆದಿದ್ದಾರೆ.
ಬಿಸಿನೆಸ್ ಇನ್ ಸೈಡರ್ ಸಹಯೋಗದಲ್ಲಿ ವೆಲ್ತ್ ಎಕ್ಸ್ ಸಮೀಕ್ಷೆ ನಡೆಸಿದ್ದು ಬಿಲ್ ಗೇಟ್ಸ್ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಸ್ಪಾನಿಷ್ ಉದ್ಯಮಿ ಅಮಾನ್ಸಿಯೊ ಒರ್ಟೆಗಾ ಮತ್ತು ವಾರೆನ್ ಬಫೆಟ್ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿದ್ದಾರೆ. ಫೇಸ್ ಬುಕ್ ನ ಸಹ ಸಂಸ್ಥಾಪಕ ಮಾರ್ಕ್ ಜುಕರ್ ಬರ್ಗ್ ಈ ಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದ್ದು ಅತಿ ಕಿರಿ ವಯಸ್ಸಿನ ಉದ್ಯಮಿಯಾಗಿದ್ದಾರೆ.
2,480 ಕೋಟಿ ಡಾಲರ್ ಗಳೊಂದಿಗೆ ಮುಖೇಶ್ ಅಂಬಾನಿ ಈ ಪಟ್ಟಿಯಲ್ಲಿ 27ನೇ ಸ್ಥಾನದಲ್ಲಿದ್ದರೆ, ಅಜೀಂ ಪ್ರೇಮ್ ಜಿ 1,650 ಕೋಟಿ ಡಾಲರ್ ನೊಂದಿಗೆ 43 ಮತ್ತು 1,640 ಕೋಟಿ ಡಾಲರ್ ನೊಂದಿಗೆ ದಿಲೀಪ್ ಸಾಂಘ್ವಿ 45ನೇ ಸ್ಥಾನದಲ್ಲಿದ್ದಾರೆ. ಈ 50 ಶ್ರೀಮಂತರ ಒಟ್ಟಾರೆ ಸಂಪತ್ತಿನ ಮೌಲ್ಯ 1.45 ಲಕ್ಷ ಕೋಟಿ ಡಾಲರ್.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com