ನವದೆಹಲಿ: ಖಡ್ಗಕ್ಕಿಂತ ಲೇಖನಿ ಹರಿತ ಎಂಬ ಮಾತು ಮಾಧ್ಯಮ ಲೋಕದ ಶಕ್ತಿಯನ್ನು ಹೇಳುತ್ತದೆ. ಮಾಧ್ಯಮಗಳು ವ್ಯವಸ್ಥೆಯನ್ನು ಸರಿಮಾಡಲೂಬಹುದು ಇಲ್ಲವೇ ಹಾಳುಮಾಡಬಹುದು.
ಇಂತಹದ್ದೊಂದು ಅಪವಾದ ಇದೀಗ ಭಾರತ-ಚೀನಾ ಮಧ್ಯೆ ಕೇಳಿಬರುತ್ತಿದೆ. ಭಾರತ ಮತ್ತು ಚೀನಾ ಮಧ್ಯೆ ಭಿನ್ನಾಭಿಪ್ರಾಯ ಬೆಳೆಯಲು ವಿದೇಶಿ ಮಾಧ್ಯಮ ಕಾರಣವಾಗಿದೆ. ಅದು ಎರಡು ದೇಶಗಳ ಮಧ್ಯೆ ಹಗೆತನ ಮೂಡಿಸಲು ಮತ್ತು ಹೆಚ್ಚಿಸಲು ಕಾರಣವಾಗಿದೆ ಎಂದು ಚೀನಾದ ಗ್ಲೋಬಲ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ.
ದಕ್ಷಿಣ ಚೀನಾ ಸಮುದ್ರವನ್ನು ರಕ್ಷಿಸಿಕೊಳ್ಳಲು ಇಂಡಿಯನ್ ಸಮುದ್ರದವನ್ನು ಗುರಿಯಾಗಿಟ್ಟುಕೊಳ್ಳುವುದು ಚೀನಾದ ದುರುದ್ದೇಶವಾಗಿದೆ ಎಂದು ಪತ್ರಿಕೆಯಲ್ಲಿ ಪ್ರಕಟಗೊಂಡಿರುವ ಲೇಖನ ತಿಳಿಸುತ್ತದೆ ಎಂದು ಹೇಳಿದೆ.
ಎರಡು ದೇಶಗಳ ಗಡಿ ವಿವಾದವಾದ ಹಿಮಾಲಯ ಮತ್ತು ಮಿಲಿಟರಿ ಹಾಗೂ ರಕ್ಷಣೆ ವಿಚಾರದಲ್ಲಿ ಎರಡೂ ದೇಶಗಳ ಮಧ್ಯೆ ವಿವಾದ ತಂದಿಡಲು ಕಾರಣವಾಗಿದೆ. ಅದು ಎರಡು ದೇಶಗಳ ನಡುವಿನ ಸಾಧನೆ ಮತ್ತು ಆರ್ಥಿಕ ಸಹಕಾರವನ್ನು ಮರೆಮಾಚಿದೆ ಎಂದು ಪತ್ರಿಕೆ ವರದಿ ಮಾಡಿರುವುದಾಗಿ ಇಂಗ್ಲಿಷ್ ದೈನಿಕವೊಂದು ಹೇಳಿದೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಚೀನಾದ ಬೆಲ್ಟ್ ಮತ್ತು ರೋಡ್ ಇನಿಶಿಯೇಟಿವ್ ಬಗ್ಗೆ ಬದಲಾದ ಮನೋವೃತ್ತಿ ತೋರಿಸಿದ್ದಾರೆ ಎಂದು ಲೇಖನದಲ್ಲಿ ಹೇಳಲಾಗಿದೆ.