ಟೆಕ್ಸಾಸ್ ನ ದಲ್ಲಾಸ್ ನಲ್ಲಿ ಶೂಟೌಟ್: 4 ಪೊಲೀಸರ ಸಾವು, 7 ಮಂದಿಗೆ ಗಾಯ

ಅಮೆರಿಕಾದ ಟೆಕ್ಸಾಸ್ ರಾಜ್ಯದ ದಲ್ಲಾಸ್ ನಗರದಲ್ಲಿ ಕಳೆದ ರಾತ್ರಿ ಇಬ್ಬರು ದುಷ್ಕರ್ಮಿಗಳು ನಡೆಸಿದ ಶೂಟೌಟ್ ನಲ್ಲಿ ನಾಲ್ವರು
ದಲ್ಲಾಸ್ ಪೊಲೀಸರು ಟ್ವಿಟ್ಟರ್ ನಲ್ಲಿ ಬಿಡುಗಡೆ ಮಾಡಿರುವ ಶಂಕಿತನ ಫೋಟೋ
ದಲ್ಲಾಸ್ ಪೊಲೀಸರು ಟ್ವಿಟ್ಟರ್ ನಲ್ಲಿ ಬಿಡುಗಡೆ ಮಾಡಿರುವ ಶಂಕಿತನ ಫೋಟೋ
ದಲ್ಲಾಸ್: ಅಮೆರಿಕಾದ ಟೆಕ್ಸಾಸ್ ರಾಜ್ಯದ ದಲ್ಲಾಸ್ ನಗರದಲ್ಲಿ ಕಳೆದ ರಾತ್ರಿ ಇಬ್ಬರು ದುಷ್ಕರ್ಮಿಗಳು ನಡೆಸಿದ ಶೂಟೌಟ್ ನಲ್ಲಿ ನಾಲ್ವರು ಅಧಿಕಾರಿಗಳು ಸಾವನ್ನಪ್ಪಿ ಇತರ ಏಳು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರತಿಭಟನೆ ನಡೆಸುತ್ತಿದ್ದ ವೇಳೆ ಈ ಕುಕೃತ್ಯ ಎಸಗಲಾಗಿದೆ.
ಶಂಕಾಸ್ಪದ ವ್ಯಕ್ತಿಗಳಿಬ್ಬರು ಗ್ಯಾರೇಜ್ ಹಿಂದೆ ಅವಿತು ಕುಳಿತು ಹೊಂಚುಹಾಕಿ ಪೊಲೀಸ್ ಅಧಿಕಾರಿಗಳೆಡೆಗೆ ಗುಂಡು ಹಾರಿಸಿದರು ಎಂದು ಪೊಲೀಸ್ ಮುಖ್ಯಸ್ಥ ಡೇವಿಡ್ ಒ ಬ್ರೌನ್ ತಿಳಿಸಿದ್ದಾರೆ.
ಕಳೆದ ರಾತ್ರಿ 8.45ರ ಸುಮಾರಿಗೆ ಈ ಘಟನೆ ಸಂಭವಿಸಿದೆ. ಪ್ರತಿಭಟನಾಕಾರರು ಪ್ರತಿಭಟನೆ ಮಾಡಿಕೊಂಡು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಶೂಟೌಟ್ ನಡೆದಿದೆ. ಆರೋಪಿಗಳ ಬಂಧನಕ್ಕೆ ವ್ಯಾಪಕ ಹುಡುಕಾಟ ನಡೆಯುತ್ತಿದೆ. ಇದುವರೆಗೆ ಯಾರನ್ನೂ ಬಂಧಿಸಿಲ್ಲ. 
ದಲ್ಲಾಸ್ ಪೊಲೀಸರು ಮೊದಲು ಶಂಕಿತನೊಬ್ಬನ ಛಾಯಾಚಿತ್ರವನ್ನು   ಟ್ವಿಟ್ಟರ್ ನಲ್ಲಿ ಬಿಡುಗಡೆ ಮಾಡಿದ್ದರು, ನಂತರ ಆ ವ್ಯಕ್ತಿಯಲ್ಲ ಎಂಬುದು ಗೊತ್ತಾಯಿತು. ಇದೀಗ ಮತ್ತೊಬ್ಬ ಶಂಕಿತನಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ. 
ಬುಧವಾರ ಮಿನ್ನಸೊಟಾದಲ್ಲಿ ಪೊಲೀಸ್ ಅಧಿಕಾರಿಯ ಹತ್ಯೆ ಖಂಡಿಸಿ ಪ್ರತಿಭಟನೆ ನಡೆಸಲಾಗುತ್ತಿತ್ತು.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com