ಭವಿಷ್ಯದಲ್ಲಿ ಬ್ರಿಟನ್ ಮತ್ತಷ್ಟು ಬಲಿಷ್ಠ ರಾಷ್ಟ್ರವಾಗಲಿದೆ: ನಿರ್ಗಮಿತ ಪ್ರಧಾನಿ ಕೆಮರಾನ್

ಬ್ರೆಕ್ಸಿಟ್ ಜನಮತಾಭಿಪ್ರಾಯದದ ಬಳಿಕ ಬ್ರಿಟನ್ ಪ್ರಧಾನಿ ಹುದ್ದೆಯಿಂದ ಕೆಳಗಿಳಿಯುತ್ತಿರುವ ಡೇವಿಡ್ ಕೆಮರೂನ್ ಅವರು ಪ್ರಧಾನಿಯಾಗಿ ತಮ್ಮ ಕೊನೆಯ ಭಾಷಣ ಮಾಡಿದ್ದು, ಭವಿಷ್ಯದಲ್ಲಿ ಬ್ರಿಟನ್ ರಕ್ಷಣಾತ್ಮಕವಾಗಿ ಮತ್ತು ಆರ್ಥಿಕವಾಗಿ ಮತ್ತಷ್ಟು ಬಲಿಷ್ಟವಾಗುವ ವಿಶ್ವಾಸ ತಮಗಿದೆ ಎಂದು ಹೇಳಿದ್ದಾರೆ...
ಬ್ರಿಟನ್ ನಿರ್ಗಮಿತ ಪ್ರಧಾನಿ ಕೆಮರಾನ್ (ಸಂಗ್ರಹ ಚಿತ್ರ)
ಬ್ರಿಟನ್ ನಿರ್ಗಮಿತ ಪ್ರಧಾನಿ ಕೆಮರಾನ್ (ಸಂಗ್ರಹ ಚಿತ್ರ)

ಲಂಡನ್: ಬ್ರೆಕ್ಸಿಟ್ ಜನಮತಾಭಿಪ್ರಾಯದದ ಬಳಿಕ ಬ್ರಿಟನ್ ಪ್ರಧಾನಿ ಹುದ್ದೆಯಿಂದ ಕೆಳಗಿಳಿಯುತ್ತಿರುವ ಡೇವಿಡ್ ಕೆಮರೂನ್ ಅವರು ಪ್ರಧಾನಿಯಾಗಿ ತಮ್ಮ ಕೊನೆಯ ಭಾಷಣ ಮಾಡಿದ್ದು,  ಭವಿಷ್ಯದಲ್ಲಿ ಬ್ರಿಟನ್ ರಕ್ಷಣಾತ್ಮಕವಾಗಿ ಮತ್ತು ಆರ್ಥಿಕವಾಗಿ ಮತ್ತಷ್ಟು ಬಲಿಷ್ಟವಾಗುವ ವಿಶ್ವಾಸ ತಮಗಿದೆ ಎಂದು ಹೇಳಿದ್ದಾರೆ.

ಬ್ರಿಟನ್ ಪ್ರಧಾನಿ ಹುದ್ದೆಗೆ ಕೆಮರಾನ್ ಇಂದು ರಾಜಿನಾಮೆ ನೀಡಿದ್ದು, ಬ್ರಿಟನ್ ಖ್ಯಾತ ಪತ್ರಿಕೆ ಡೇಲಿ ಟೆಲಿಗ್ರಾಫ್ ನಲ್ಲಿ ತಮ್ಮ ವಿದಾಯದ ಭಾಷಣ ಮಾಡಿದರು. ಈ ವೇಳೆ "ಬ್ರಿಟನ್ ಗೆ  ಪ್ರಧಾನಿಯಾಗಿ ಸೇವೆಸಲ್ಲಿಸಿರುವುದು ನನ್ನ ಪಾಲಿನ ಅತೀ ದೊಡ್ಡ ಗೌರವ ಎಂದು ಭಾವಿಸಿದ್ದೇನೆ. ನಾನು ಪ್ರಧಾನಿ ಹುದ್ದೆಯಿಂದ ಕೆಳಗಿಳಿಯುತ್ತಿದ್ದು, ಭವಿಷ್ಯದಲ್ಲಿ ದೇಶದ ನಾಯಕರು ದೇಶವನ್ನು  ಮತ್ತಷ್ಟು ಬಲಿಷ್ಟವಾಗಿಸಲಿದ್ದಾರೆ ಎಂಬ ವಿಶ್ವಾಸ ತಮ್ಮಲ್ಲಿದೆ ಎಂದು ಹೇಳಿದರು.

ಪ್ರಧಾನಿಯಾಗಿ ತಮ್ಮ ವಿದಾಯದ ಭಾಷಣ ಮಾಡಿದ ಕೆಮರಾನ್ ಈ ವೇಳೆ ತಮ್ಮ ಸರ್ಕಾರದ ಅಭಿವೃದ್ಧಿ ಕಾರ್ಯಗಳ ಮೆಲುಕು ಹಾಕಿದರು. ವಿದೇಶಾಂಗ ನೀತಿ ಸುಧಾರಣೆ ಸೇರಿದಂತೆ ಈಡೀ  ವಿಶ್ವವೇ ನಿಬ್ಬೆರಗಾಗಿ ನೋಡಿದ ಸಲಿಂಗ ವಿವಾಹ ಕಾನೂನು ಮಾನ್ಯತೆ ತಮ್ಮ ಸರ್ಕಾರದ ಹೆಗ್ಗಳಿಕೆ ಎಂದು ಕೆಮರಾನ್ ಹೇಳಿದರು. ಈ ವೇಳೆ ಕೆಮರಾನ್ ರೊಂದಿಗೆ ಅವರ ಪತ್ನಿ ಸಮಂತಾ  ಕೂಡ ಅವರೊಂದಿಗೆ ಇದ್ದದ್ದು ವಿಶೇಷವಾಗಿತ್ತು.

ರಾಜಿನಾಮೆಗೂ ಮುನ್ನವೇ ಕಚೇರಿ ತ್ಯಜಿಸಿದ ಕೆಮರಾನ್
ಸೆಪ್ಚೆಂಬರ್ 9ರಂದು ತಮ್ಮ ಪದವಿಗೆ ರಾಜಿನಾಮೆ ಸಲ್ಲಿಸುವುದಾಗಿ ಈ ಹಿಂದೆ ಘೋಷಣೆ ಮಾಡಿದ್ದ ಕೆಮರಾನ್ ಅದಕ್ಕೂ ಮುನ್ನವೇ ತಮ್ಮ ಸ್ಥಾನವನ್ನು ತ್ಯಜಿಸಿದ್ದು, ಬುಧವಾರ ಹೌಸ್ ಆಫ್ ಕಾಮರ್ಸ್ ನಲ್ಲಿ ಸಭೆ ಸೇರಿ ಅಲ್ಲಿ೦ದ ಬಕಿ೦ಗ್‍ಹ್ಯಾಮ್ ಅರಮನೆಗೆ ತೆರಳಿ ರಾಣಿ ಎಲಿಜಬೆತ್ ಅವರನ್ನು ಭೇಟಿಯಾಗಿ ರಾಜೀನಾಮೆ ಸಲ್ಲಿಸುವುದಾಗಿ ಘೋಷಿಸಿದ್ದಾರೆ. ಪ್ರಧಾನಿ ಹುದ್ದೆ ತ್ಯಜಿಸುವ  ಒ೦ದು ದಿನ ಮು೦ಚಿತವಾಗಿ ಡೌನಿ೦ಗ್ ಸ್ಟ್ರೀಟ್‍-10ನೇ ನ೦ಬರಿನ ಕಚೇರಿ ಹಾಗೂ ನಿವಾಸವನ್ನು ಖಾಲಿ ಮಾಡಿ ಸ್ವ೦ತ ನಿವಾಸಕ್ಕೆ ಕೆಮರಾನ್ ತೆರಳಿದ್ದಾರೆ ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com