ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ತನ್ನ ನಾಗರಿಕರ ಹಕ್ಕು ಕಾಪಾಡುವ ಜವಾಬ್ದಾರಿ ಭಾರತಕ್ಕಿದೆ: ಅಮೆರಿಕ

ಮಾನವ ಹಕ್ಕುಗಳನ್ನು ಉಲ್ಲಂಘನೆ ಮಾಡದ ರೀತಿ ನೋಡಿಕೊಳ್ಳುವುದು ಭಾರತ ಜವಾಬ್ದಾರಿ ಎಂದು ಅಮೆರಿಕದ...
ವಾಷಿಂಗ್ಟನ್: ಮಾನವ ಹಕ್ಕುಗಳನ್ನು ಉಲ್ಲಂಘನೆ ಮಾಡದ ರೀತಿ ನೋಡಿಕೊಳ್ಳುವುದು ಭಾರತ ಜವಾಬ್ದಾರಿ ಎಂದು ಅಮೆರಿಕದ ಸೆನೆಟರ್ ಹೇಳಿದ್ದಾರೆ. 
ಭಾರತದಲ್ಲಿ ನಡೆಯುತ್ತಿರುವ ಮಾನವ ಹಕ್ಕು ಉಲ್ಲಂಘನೆ, ಧಾರ್ಮಿಕ ಅಸಹಿಷ್ಣುತೆ ಮತ್ತು ನ್ಯಾಯಾಬಾಹಿರ ಹತ್ಯೆಗಳ ಕುರಿತು ಮಾತನಾಡಿದ ಅಮೆರಿಕದ ಸೆನೆಟರ್ ಬೆನ್ ಕಾರ್ಡಿನ್, ತನ್ನ ನಾಗರಿಕರ ಹಕ್ಕುಗಳನ್ನು ರಕ್ಷಣೆ ಮಾಡುವುದು ಭಾರತದ ಜವಾಬ್ದಾರಿಯಾಗಿರುತ್ತದೆ ಎಂದು ಹೇಳಿದ್ದಾರೆ. 
ಮಾಹಾತ್ಮ ಗಾಂಧಿ ಜೀವಂತವಾಗಿದ್ದರೆ ದೇಶದ ಪ್ರಗತಿ ನೋಡಿ ಸಂತಸ ಪಡುತ್ತಿದ್ದರು, ಆದರೆ ತೃಪ್ತಿ ಪಡುತ್ತಿರಲಿಲ್ಲ ಎಂದು ಅವರು ತಿಳಿಸಿದ್ದಾರೆ. 
ಪ್ರಜಾಪ್ರಭುತ್ವದ ದೇಶ ಮುನ್ನಗ್ಗಬೇಕು. ಆದರೆ, ನಮಗೆ ಇರುವಂತಹ ಕೆಲವು ಜವಾಬ್ದಾರಿಗಳನ್ನು ನಿರ್ವಹಿಸಬೇಕಾಗುತ್ತದೆ. ಜನರು ಎಲ್ಲಾ ಸೌಲಭ್ಯಗಳನ್ನು ಪಡೆಯುವಂತೆ ಮಾಡಬೇಕು ಎಂದಿದ್ದಾರೆ. 
ಭಾರತದ ಮಾನವ ಕಳ್ಳ ಸಾಗಣೆ ತಡೆ ಕಾನೂನನ್ನು ಸ್ವಾಗತಿಸಿದ ಅವರು, ಕೇವಲ ಕಾನೂನು ರಚಿಸಿ ಸುಮ್ಮನಾಗದೇ, ಅದು ಕಾರ್ಯಪ್ರವೃತ್ತಿಗೆ ಬರುವಂತೆ ಮಾಡುವುದು ಅಗತ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ. 
ಮಾಹಾತ್ಮ ಗಾಂಧಿ ಅವರು ಜೀವಂತವಾಗಿದ್ದರೆ ದೇಶದ ಪ್ರಗತಿ ನೋಡಿ ಸಂತಸ ಪಡುತ್ತಿದ್ದರು, ಆದರೆ ತೃಪ್ತಿಪಡುತ್ತಿರಲಿಲ್ಲ. ಅದೇ ರೀತಿ ಮಾರ್ಟಿನ್ ಲೂಥರ್ ಕಿಂಗ್ ಅವರು ಜೀವಂತವಾಗಿದ್ದರೆ ಅಮೆರಿಕದ ಪ್ರಗತಿ ನೋಡಿ ಸಂತಸ ಪಡುತ್ತಿದ್ದರು, ಆದರೆ ತೃಪ್ತಿ ಪಡುತ್ತಿರಲಿಲ್ಲ. ಏಕೆಂದರೆ ಎರಡು ದೇಶಗಳಲ್ಲಿ ಪ್ರಜಾಪ್ರಭುತ್ವದ ಹಕ್ಕನ್ನು ಇನ್ನಷ್ಟು ಬಲ ಪಡಿಸುವ ಅಗತ್ಯವಿದೆ. ಅಮೆರಿಕ ಮತ್ತು ಭಾರತ ಎರಡು ಪ್ರಜಾಪ್ರಭುತ್ವ ದೇಶಗಳಾಗಿದ್ದು, ಮಾನವ ಹಕ್ಕುಗಳನ್ನು ಕಾಪಾಡುವುದು ನಮ್ಮ ಜವಾಬ್ದಾರಿಯಾಗಿರುತ್ತದೆ ಎಂದು ಅವರು ಹೇಳಿದ್ದಾರೆ. 
ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕಾಗೆ ಭೇಟಿ ನೀಡುವುದನ್ನು ನಾವು ಎದುರು ನೋಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com