ಭಾರತಕ್ಕೆ ಪ್ರಾಚೀನ ಕಲಾಕೃತಿಗಳ ಹಸ್ತಾಂತರ: ಅಮೆರಿಕಾಗೆ ಮೋದಿ ಧನ್ಯವಾದ

ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಮೆರಿಕ ಕಂಚಿನ ಗಣೇಶ, ಬಾಹುಬಲಿ ಸೇರಿದಂತೆ 200 ಕ್ಕೂ ಹೆಚ್ಚು ಅಪರೂಪದ ಕಲಾಕೃತಿಗಳನ್ನು ಹಸ್ತಾಂತರಿಸಿದೆ.
ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ
ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ
Updated on: 

ವಾಷಿಂಗ್ ಟನ್: ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಮೆರಿಕ ಕಂಚಿನ ಗಣೇಶ, ಬಾಹುಬಲಿ ಸೇರಿದಂತೆ 200 ಕ್ಕೂ ಹೆಚ್ಚು ಅಪರೂಪದ ಕಲಾಕೃತಿಗಳನ್ನು ಹಸ್ತಾಂತರಿಸಿದೆ.

ಸ್ವಾಗತ ಸಮಾರಂಭದ ಭಾಗವಾಗಿ ಭಾರತದ ಅತಿ ಪುರಾತನ, ಅಪರೂಪದ ಕಲಾಕೃತಿಗಳನ್ನು ವಾಪಸ್ ನೀಡಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಅಮೆರಿಕಾಗೆ ಧನ್ಯವಾದ ಅರ್ಪಿಸಿದ್ದಾರೆ. ನಮ್ಮ ಸಂಸ್ಕೃತಿಯ ಭಾಗವಾಗಿದ್ದ ವಸ್ತುಗಳನ್ನು ವಾಪಸ್ ನೀಡಿರುವುದಕ್ಕೆ ಅಮೇರಿಕ ಸರ್ಕಾರ ಹಾಗೂ ಅಮೇರಿಕ ಅಧ್ಯಕ್ಷರಿಗೆ ಅಭಾರಿಯಾಗಿದ್ದೇವೆ, ಪುರಾತನ, ಅಪರೂಪದ ಕಲಾಕೃತಿಗಳು ಭಾರತದ ಭವಿಷ್ಯಕ್ಕೆ ಸ್ಪೂರ್ತಿದಾಯಕವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

ಸಾಮಾನ್ಯವಾಗಿ ವರ್ತಮಾನದ ವಿಷಯಗಳು ಎರಡು ದೇಶಗಳನ್ನು ಹತ್ತಿರ ಮಾಡುತ್ತವೆ. ಆದರೆ ಕೆಲವೊಮ್ಮೆ ಪಾರಂಪರಿಕ ವಿಷಯಗಳು ಎರಡು ರಾಷ್ಟ್ರಗಳನ್ನು ಮತ್ತಷ್ಟು ಹತ್ತಿರವಾಗಿಸುತ್ತವೆ. ಕಳೆದ ಎರಡು ವರ್ಷಗಳಲ್ಲಿ ಹಲವು ರಾಷ್ಟ್ರಗಳು ಭಾರತದಿಂದ ಕಳುವಾಗಿದ್ದ ಪಾರಂಪರಿಕ ವಸ್ತುಗಳು, ಕಲಾಕೃತಿಗಳನ್ನು ವಾಪಸ್ ನೀಡುತ್ತಿವೆ ಎಂದು ಮೋದಿ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com