ಮುಲ್ಲಾ ಅಖ್ತರ್ ಮನ್ಸೂರ್‌ ಹತ್ಯೆ; ಪಾಕ್ ಬೆಂಬಲಕ್ಕೆ ನಿಂತ ಚೀನಾ

ತಾಲಿಬಾನ್ ಮುಖಂಡ ಮುಲ್ಲಾ ಅಖ್ತರ್ ಮನ್ಸೂರ್‌ನನ್ನು ಅಮೆರಿಕ ಡ್ರೋನ್ ದಾಳಿಯಿಂದ ಹತ್ಯೆಗೈದ ಸಂಬಂಧ ಅಮೆರಿಕ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿರುವ ವಿಚಾರದಲ್ಲಿ ಚೀನಾ ಪಾಕಿಸ್ತಾನ ಬೆಂಬಲಕ್ಕೆ ನಿಂತಿದೆ...
ಚೀನಾ ವಿದೇಶಾಂಗ ಇಲಾಖೆಯ ವಕ್ತಾರ ಹಾಂಗ್ ಲೀ (ಸಂಗ್ರಹ ಚಿತ್ರ)
ಚೀನಾ ವಿದೇಶಾಂಗ ಇಲಾಖೆಯ ವಕ್ತಾರ ಹಾಂಗ್ ಲೀ (ಸಂಗ್ರಹ ಚಿತ್ರ)

ಬೀಜಿಂಗ್: ತಾಲಿಬಾನ್ ಮುಖಂಡ ಮುಲ್ಲಾ ಅಖ್ತರ್ ಮನ್ಸೂರ್‌ನನ್ನು ಅಮೆರಿಕ ಡ್ರೋನ್ ದಾಳಿಯಿಂದ ಹತ್ಯೆಗೈದ ಸಂಬಂಧ ಅಮೆರಿಕ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿರುವ ವಿಚಾರದಲ್ಲಿ ಚೀನಾ  ಪಾಕಿಸ್ತಾನ ಬೆಂಬಲಕ್ಕೆ ನಿಂತಿದೆ.

ಪಾಕಿಸ್ತಾನದ ಸಾರ್ವಭೌಮತ್ವವನ್ನು ಅಂತಾರಾಷ್ಟ್ರೀಯ ಸಮುದಾಯ ಗೌರವಿಸಬೇಕು ಎಂದು ಹೇಳಿರುವ ಚೀನಾ ಪಾಕಿಸ್ತಾನ ಭಯೋತ್ಪಾದನೆಯನ್ನು ನಿಯಂತ್ರಿಸಲು ಸಾಕಷ್ಟು  ಪರಿಶ್ರಮವಹಿಸಿದೆ ಎಂದು ಹೇಳಿದೆ. ಈ ಬಗ್ಗೆ ಮಾತನಾಡಿರುವ ಚೀನಾ ವಿದೇಶಾಂಗ ಇಲಾಖೆಯ ವಕ್ತಾರ ಹಾಂಗ್ ಲೀ ಅವರು ಭಯೋತ್ಪಾದನೆ ನಿಗ್ರಹ ವಿಚಾರದಲ್ಲಿ ಪಾಕಿಸ್ತಾನದ ಕ್ರಮಗಳು  ನಿಜಕ್ಕೂ ಅಭಿನಂದನಾರ್ಹ. ಹೀಗಾಗಿ ಪಾಕಿಸ್ತಾನದ ಸಾರ್ವಭೌಮತ್ವವನ್ನು ಅಂತಾರಾಷ್ಟ್ರೀಯ ಸಮುದಾಯ ಗೌರವಿಸಬೇಕು ಎಂದು ಹೇಳಿದ್ದಾರೆ.

ಕಳೆದ ಮೇ 21ರಂದು ಬಲೂಚಿಸ್ತಾನದಲ್ಲಿ ತಾಲಿಬಾನ್ ಮುಖಂಡ ಮನ್ಸೂರ್ ಹಾಗೂ ಆತನ ವಾಹನ ಚಾಲಕನನ್ನು ಅಮೆರಿಕದ ಡ್ರೋನ್ ದಾಳಿಯಲ್ಲಿ ಹತ್ಯೆಗೈಯಲಾಗಿತ್ತು. ಇದು ನಮ್ಮ  ಸಾರ್ವಭೌಮತ್ವಕ್ಕೆ ಇದು ಧಕ್ಕೆ ತಂದಿದೆ ಎಂದು ಪಾಕಿಸ್ತಾನ ಆಕ್ಷೇಪ ವ್ಯಕ್ತಪಡಿಸಿತ್ತು. ಪಾಕಿಸ್ತಾನದ ನೆಲದಲ್ಲಿ ಇನ್ನು ಮುಂದೆ ಅಮೆರಿಕ ನಡೆಸುವ ಡ್ರೋನ್ ದಾಳಿ ಉಭಯ ದೇಶಗಳ ಸಂಬಂಧಕ್ಕೆ  ಕುತ್ತು ತಂದೀತು ಎಂದು ಪಾಕಿಸ್ತಾನ ಹೇಳಿದೆ. ಶುಕ್ರವಾರ ಪಾಕಿಸ್ತಾನಕ್ಕೆ ಭೇಟಿ ನೀಡಿದ ಅಮೆರಿಕ ಉನ್ನತ ಮಟ್ಟದ ಸಮಿತಿ ಭೇಟಿ ಮಾಡಿದ ಪಾಕ್ ವಿದೇಶಾಂಗ ಸಚಿವಾಲಯದ ವಕ್ತಾರ  ಸರ್ತಾಜ್ ಅಜೀಜ್, ಮೇ 21ರಂದು ನಡೆಸಿದ ದಾಳಿ ಪಾಕಿಸ್ತಾನದ ಸಾರ್ವಭೌಮತ್ವಕ್ಕೆ ಕುಂದುಂಟು ಮಾಡಿದೆ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com