ಸಲಿಂಗಿತನ ಮರೆಮಾಚಲು ಮಾರಣ ಹೋಮ ನಡೆಸಿದ ಮತೀನ್?

ಸಲಿಂಗಿ ಕ್ಲಬ್ ಮೇಲೆ ದಾಳಿ ಮಾಡಿ ಬರೋಬ್ಬರಿ 49 ಮಂದಿಯ ಮಾರಣ ಹೋಮಕ್ಕೆ ಕಾರಣನಾಗಿದ್ದ ಮತೀನ್ ಸ್ವತಃ ಸಲಿಂಗಿಯಾಗಿದ್ದ ವಿಚಾರವನ್ನು ಸ್ವತಃ ಆತನ ಮಾಜಿ ಪತ್ನಿ ಬಹಿರಂಗ ಗೊಳಿಸಿದ್ದಾರೆ...
ದಾಳಿಕೋರ ಮತೀನ್ (ಸಂಗ್ರಹ ಚಿತ್ರ)
ದಾಳಿಕೋರ ಮತೀನ್ (ಸಂಗ್ರಹ ಚಿತ್ರ)
Updated on: 

ಫ್ಲೋರಿಡಾ: ಸಲಿಂಗಿ ಕ್ಲಬ್ ಮೇಲೆ ದಾಳಿ ಮಾಡಿ ಬರೋಬ್ಬರಿ 49 ಮಂದಿಯ ಮಾರಣ ಹೋಮಕ್ಕೆ ಕಾರಣನಾಗಿದ್ದ ಮತೀನ್ ಸ್ವತಃ ಸಲಿಂಗಿಯಾಗಿದ್ದ ವಿಚಾರವನ್ನು ಸ್ವತಃ ಆತನ ಮಾಜಿ ಪತ್ನಿ ಬಹಿರಂಗಗೊಳಿಸಿದ್ದಾರೆ.

ಒರ್ಲಾಂಡೋದ ಸಲಿಂಗಿ ನೈಟ್ ಕ್ಲಬ್ ನಲ್ಲಿ ನಡೆದಿದ್ದ ಹತ್ಯಾಕಾಂಡ ಪ್ರಕರಣ ಸಂಬಂಧ ತನಿಖೆ ತೀವ್ರಗೊಳಿಸಿರುವ ಎಫ್ ಬಿಐ ಅಧಿಕಾರಿಗಳು ಮತೀನ್ ಮಾಜಿ ಪತ್ನಿ ಸಿಟೋರಾ  ಎಂಬುವವರನ್ನು ವಿಚಾರಣೆ ಮಾಡಿದ್ದು, ಈ ವೇಳೆ ಮತೀನ್ ಸಲಿಂಗಿಯಾಗಿರುವ ಸಾಧ್ಯತೆಗಳನ್ನು ಸಿಟೋರಾ ಅಲ್ಲಗಳೆದಿಲ್ಲ. ಅಂತೆಯೇ ಮತೀನ್ ತನ್ನ ನಿಜವಾದ ಗುರುತನ್ನು ಮರೆಮಾಚುವ  ಸಲುವಾಗಿ ಈ ಮಾರಣಹೋಮ ನಡೆಸಿರಬಹುದು ಎಂದು ಆಕೆ ಶಂಕೆ ವ್ಯಕ್ತಪಡಿಸಿದ್ದಾರೆ.

ಮತೀನ್ ಹಾಗೂ ಸಿಟೋರಾ ಅವರು 2005ರಲ್ಲಿ ಪರಸ್ಪರ ಅಂತರ್ಜಾಲದಲ್ಲಿ ಪರಿಚತರಾಗಿ ಬಳಿಕ 2009ರಲ್ಲಿ ವಿವಾಹಗಿದ್ದರು. ಮತೀನ್ ಮದುವೆಗೂ ಮುನ್ನವೇ ನೈಟ್ ಕ್ಲಬ್ ಗೆ ನಿಯಮಿತವಾಗಿ  ಹೋಗುತ್ತಿದ್ದನಾದರೂ ಅದು ಸಲಿಂಗಿ ಕ್ಲಬ್ ಎಂದು ಹೇಳಿರಲಿಲ್ಲ. ಮದುವೆ ಬಳಿಕ ಕೆಲಸದಿಂದ ಬರುತ್ತಿದ್ದ ಮತೀನ್ ತನ್ನ ಕೆಲಸದ ಒತ್ತಡವನ್ನು ತನ್ನನ್ನು ಥಳಿಸುವ ಮೂಲಕ ತೀರಿಸಿಕೊಳ್ಳುತ್ತಿದ್ದ.  ಇದೇ ಕಾರಣಕ್ಕೆ ನಾವು ಮದುವೆಯಾಗಿ ಅತ್ಯಲ್ಪ ಅವಧಿಯಲ್ಲಿಯೇ ವಿಚ್ಚೇದನ ಪಡೆದುಕೊಂಡೆವು ಎಂದು ಸಿಟೋರಾ ಹೇಳಿದ್ದಾರೆ.

ಇನ್ನು 2006ರಲ್ಲಿ ಮತೀನ್ ಪೊಲೀಸ್ ಇಲಾಖೆ ಸೇರಲು ಬಯಸಿದ್ದ. ಇದೇ ಕಾರಣಕ್ಕೆ ಒಮ್ಮೆ ಸ್ನೇಹಿತರೊಂದಿಗೆ ಸೇರಿ ಅಕಾಡೆಮಿ ತರಗತಿಗೆ ತೆರಳಿದ್ದ ವೇಳೆ ಆತನ ಸ್ನೇಹಿತ ಈತನ ಸಲಿಂಗಿ  ತನದ ಕುರಿತು ಪ್ರಶ್ನಿಸಿದಾಗ ಈತ ಸಿಟ್ಟುಗೊಂಡು ಹೊರಬಂದಿದ್ದ ಎಂದು ಆತನ ಸ್ನೆಹಿತರೊಬ್ಬರು ತಿಳಿಸಿದ್ದಾರೆ.

ದಾಳಿಕೋರ ಮತೀನ್ ಸಲಿಂಗಿ ಡೇಟಿಂಗ್ ಆ್ಯಪ್ ಬಳಕೆ ಮಾಡುತ್ತಿದ್ದ ಎಂದು ಪತ್ರಿಕೆಯೊಂದು ಮಾಡಿರುವ ವರದಿಯಾಧರಿಸಿ ಎಫ್ ಬಿಐ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ಈಗಾಗಲೇ ಕ್ಲಬ್  ನಲ್ಲಿ ಈ ಬಗ್ಗೆ ವಿಚಾರಿಸಿದ್ದಾರೆ. ಕ್ಲಬ್ ನ ದಾಖಲೆಗಳ ಪ್ರಕಾರ ಮತೀನ್ ಹಲವು ಬಾರಿ ಸಲಿಂಗಿ ಕ್ಲಬ್ ಗೆ ಆಗಮಿಸಿರುವುದು ದೃಢಪಟ್ಟಿದೆ. ಸುಮಾರು 12ಕ್ಕೂ ಹೆಚ್ಚು ಬಾರಿ ಮತೀನ್ ಕ್ಲಬ್ ಗೆ ಭೇಟಿ  ನೀಡಿದ್ದ ಎಂದು ಕ್ಲಬ್ ಆಡಳಿತ ಮಂಡಳಿ ತಿಳಿಸಿದೆ.

ಉಗ್ರರೊಂದಿಗೆ ಸಂಪರ್ಕ
ಇದೇ ವೇಳೆ 2014ರಲ್ಲಿ ಸಿರಿಯಾದಲ್ಲಿ ಸ್ಫೋಟಕ ತುಂಬಿದ್ದ ಟ್ರಕ್ ಅನ್ನು ರೆಸ್ಟೋರೆಂಟ್ ಗೆ ನುಗ್ಗಿಸಿ ಹಲವರ ಸಾವಿಗೆ ಕಾರಣನಾಗಿದ್ದ ಅಮೆರಿಕ ಮೂಲದ ಉಗ್ರ ಮೊನೆರ್ ಮೊಹಮದ್ ಅಬು  ಸಲ್ಫಾಗೂ ಮತ್ತು ಮತೀನ್ ಗೂ ಪರಿಚಯವಿರುವ ಸಾಧ್ಯತೆಯನ್ನು ತನಿಖಾಧಿಕಾರಿಗಳು ಶಂಕಿಸಿದ್ದಾರೆ. ಪತ್ರಿಕೊಂದರ ವರದಿಯಾಧರಿಸಿ ಅಧಿಕಾರಿಗಳು ಈ ಶಂಕೆ ವ್ಯಕ್ತಪಡಿಸಿದ್ದು, ಈ ಬಗ್ಗೆ ತನಿಖೆ  ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com