ಭಾರತದ ಅಭಿವೃದ್ಧಿ ನೆರೆ ರಾಷ್ಟ್ರಕ್ಕೂ ಪ್ರಯೋಜನ ಆಗುವಂತಾಗಬೇಕು: ಮೋದಿ
ಕೊಲಂಬೋ: ಭಾರತದ ಆರ್ಥಿಕ ಬೆಳವಣಿಗೆ ನೆರೆರಾಷ್ಟ್ರಕ್ಕೂ ಪ್ರಯೋಜನೆವಾಗುವಂತೆ ಮಾಡಬೇಕೆಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶನಿವಾರ ಹೇಳಿದ್ದಾರೆ.
ಜಾಫ್ನಾದಲ್ಲಿ ಭಾರತದ ಸಹಭಾಗಿತ್ವದೊಂದಿಗೆ ಪುನರ್ ನಿರ್ಮಾಣಗೊಂಡ ದೊರೈಯಪ್ಪ ಕ್ರೀಡಾಂಗಣವನ್ನು ಉದ್ಘಾಟಿಸಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿರುವ ಅವರು, ಪ್ರಗತಿಯಲ್ಲಿ ತನ್ನದೇ ಸ್ವಂತ ಹಾದಿಯಲ್ಲಿ ಸಾಗುತ್ತಿರುವ ಶ್ರೀಲಂಕಾದೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ಮುನ್ನಡೆಯಲು ಭಾರತ ಸಿದ್ಧವಿದೆ ಎಂದು ಹೇಳಿದ್ದಾರೆ.
ಉಭಯ ರಾಷ್ಟ್ರಗಳ ಸಂಬಂಧ ಸರ್ಕಾರದ ಮಟ್ಟಕ್ಕೆ ಮಾತ್ರ ಸೀಮಿತವಾಗಿಲ್ಲ. ನಮ್ಮ ಇತಿಹಾಸ, ಸಂಸ್ಕೃತಿ, ಭಾಷೆ, ಕಲೆ, ಭೌಗೋಳಿಕಗಳಲ್ಲಿಯೂ ನಮ್ಮ ಸಂಬಂಧ ಬೆಸೆದಿವೆ. ಭಾರತದ ಆರ್ಥಿಕ ಅಭಿವೃದ್ಧಿಯು ನೆರೆ ರಾಷ್ಟ್ರಕ್ಕೂ ಪ್ರಯೋಜನವಾಗಬೇಕೆಂದು ನಾವು ನಂಬಿಕ್ಕೇವೆ.
20 ವರ್ಷಗಳ ಬಳಿಕ ದೊರೈಯಪ್ಪ ಕ್ರೀಡಾಂಗಣದ ಮೂಲಕ ಮತ್ತೆ ಎರಡು ರಾಷ್ಟ್ರಗಳು ಸಂತಸದಲ್ಲಿರುವಂತೆ ಮಾಡಿದೆ. ಸಾವಿರದಷ್ಟು ದೂರದಲ್ಲಿ ನಾವು ದೆಹಲಿಯಲ್ಲಿದ್ದರೂ, ಜಫ್ನಾದ ವಾತಾವರಣದಲ್ಲಿ ಕೊಂಚ ಏರುಪೇರಾದರೂ ನಮ್ಮ ನಾಡಿಗೆ ಅದರ ಸ್ಪಂದನೆ ಕೇಳಿಸುತ್ತಿರುತ್ತದೆ.
ದೊರೈಯಪ್ಪ ಕ್ರೀಡಾಂಗಣ ಕೇವಲ ಕಲ್ಲು, ಇಟ್ಟಿಗೆಯ ಕಟ್ಟಡವಲ್ಲ. ಇದು ಆರ್ಥಿಕ ಅಭಿವೃದ್ಧಿಯ ಸಂಕೇತವಾಗಿದೆ. ಕಳೆದ ವರ್ಷ ಜಾಫ್ನಾಗೆ ಭೇಟಿ ನೀಡಿದಾಗ ಪಡೆದ ಪ್ರೀತಿ ಮತ್ತು ಆತ್ಮೀಯತೆ ಈಗಲೂ ಮರೆಯಾಗದಂತೆ ಅಚ್ಛಳಿಯಂತೆ ಉಳಿದಿದೆ ಎಂದು ಹೇಳಿದ್ದಾರೆ.
ಇದೇ ವೇಳೆ ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರು ಸ್ಟೇಡಿಯಂ ಪುನರ್ ನಿರ್ಮಾಣಕ್ಕೆ ಸಹಾಯ ಮಾಡಿದ ಭಾರತಕ್ಕೆ ಧನ್ಯವಾದ ಸಲ್ಲಿಸಿದ್ದಾರೆ. ಅಲ್ಲದೆ, ಭಾರತ ಮತ್ತು ಶ್ರೀಲಂಕಾದ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸಿರುವ ಐತಿಹಾಸಿಕ ಸಮಾರಂಭ ಇದಾಗಿದೆ ಎಂದು ಬಣ್ಣಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ