ಭಾರತದೊಂದಿಗಿನ ಸಮಸ್ಯೆಗಳಿಗೆ ಪರಸ್ಪರ ಒಪ್ಪಿಗೆಯ ಪರಿಹಾರ ಬಯಸಿದ ಚೀನಾ

ಚೀನಾದೊಂದಿಗೆ ಭಾರತಕ್ಕೆ ಸಾಕಷ್ಟು ಸಮಸ್ಯೆಗಳಿವೆ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಗೆ ಜಾಣ್ಮೆಯಿಂದಲೇ ಪ್ರತಿಕ್ರಿಯಿಸಿರುವ ಚೀನಾ,...
ಪ್ರಧಾನಿ ಮೋದಿ - ಚೀನಾ ಅಧ್ಯಕ್ಷ ಜಿನ್ ಪಿಂಗ್
ಪ್ರಧಾನಿ ಮೋದಿ - ಚೀನಾ ಅಧ್ಯಕ್ಷ ಜಿನ್ ಪಿಂಗ್
ಬೀಜಿಂಗ್: ಚೀನಾದೊಂದಿಗೆ ಭಾರತಕ್ಕೆ ಸಾಕಷ್ಟು ಸಮಸ್ಯೆಗಳಿವೆ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಗೆ ಜಾಣ್ಮೆಯಿಂದಲೇ ಪ್ರತಿಕ್ರಿಯಿಸಿರುವ ಚೀನಾ, ಭಾರತದೊಂದಿಗಿರುವ ಎಲ್ಲಾ ಸಮಸ್ಯೆಗಳಿಗೂ 'ನ್ಯಾಯೋಚಿತ, ಸಂವೇದನಾಶೀಲ ಮತ್ತು ಪರಸ್ಪರ ಒಪ್ಪಿಗೆಯಿಂದಲೇ' ಪರಿಹಾರ ಕಂಡುಕೊಳ್ಳಲು ಮಾತುಕತೆ ನಡೆಸುತ್ತಿದೆ ಎಂದು ಮಂಗಳವಾರ ಹೇಳಿದೆ.
ಖಾಸಗಿ ಸುದ್ದಿವಾಹಿನಿಯೊಂದರಲ್ಲಿ ಪ್ರಸಾರವಾದ ಮೋದಿ ಅವರ ಸಂದರ್ಶನದ ಬಗ್ಗೆ ಪ್ರತಿಕ್ರಿಯಿಸಿದ ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಹೊಂಗ್ ಲೀ ಅವರು, ಇತ್ತೀಚಿನ ವರದಿಗಳ ಪ್ರಕಾರ, ಸಾಮಾನ್ಯವಾಗಿ ಭಾರತ-ಚೀನಾ ಉತ್ತಮ ಸಂಬಂಧವನ್ನು ಹೊಂದಿವೆ ಎಂದರು.
ಎರಡು ದೇಶಗಳ ನಡುವಿನ ಸಾಮಾನ್ಯ ಆಸಕ್ತಿಗಳಲ್ಲಿ ತುಂಬಾನೇ ವ್ಯತ್ಯಾಸವಿದೆ. ವಿವಿಧ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಂಬಂಧವನ್ನು ಗಟ್ಟಿಗೊಳಿಸಲು ಚೀನಾ ಯತ್ನಿಸುತ್ತದೆ. ಇದಕ್ಕೆ ಭಾರತದ ಕಡೆಯಿಂದಲೂ ಉತ್ತಮ ಪ್ರತಿಕ್ರಿಯೆ ದೊರೆಯಬೇಕು ಎಂದು ಹೊಂಗ್ ಹೇಳಿದ್ದಾರೆ.
ನಿನ್ನೆ ಖಾಸಗಿ ವಾಹಿನಿಯೊಂದಕ್ಕೆ ಸಂದರ್ಶನ ನೀಡಿದ್ದ ಪ್ರಧಾನಿ ಮೋದಿ ಅವರು, ಸಂಬಂಧ ವೃದ್ಧಿಗಾಗಿ ಚೀನಾದೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಯುತ್ತಿದೆ ಮತ್ತು ಅದು ಮುಂದುವರೆಯಲಿದೆ. ಚೀನಾದೊಂದಿಗೆ ನಮ್ಮದು ಒಂದೇ ಸಮಸ್ಯ ಇಲ್ಲ. ಬಹಳಷ್ಟು ಸಮಸ್ಯೆಗಳು ಪರಿಹಾರವಾಗದೇ ಬಾಕಿ ಉಳಿದಿವೆ ಎಂದು ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com