ಭಾರತದ ಎನ್‏ಎಸ್‏ಜಿ ಸದಸ್ಯತ್ವ ತಡೆಗೆ ಜಾಗತಿಕ ಮಟ್ಟದಲ್ಲಿ ನೀರಸ ಬೆಂಬಲ; ಚೀನಾ ಅಧಿಕಾರಿಯ ತಲೆದಂಡ!

ಭಾರತದ ಎನ್ ಎಸ್ ಜಿ ಸದಸ್ಯತ್ವಕ್ಕೆ ಕೊಕ್ಕೆ ಹಾಕುವಲ್ಲಿ ಮೇಲ್ನೋಟಕ್ಕೆ ಯಶಸ್ವಿಯಾಗಿರುವ ಚೀನಾಗೆ ಜಾಗತಿಕ ಮಟ್ಟದಲ್ಲಿ ತನ್ನ ನಿರೀಕ್ಷೆ ಸುಳ್ಳಾದ ಪರಿಣಾಮ ಚೀನಾ ವಿದೇಶಾಂಗ ಇಲಾಖೆ ಅಧಿಕಾರಿಯನ್ನು ಸ್ಥಾನದಿಂದ ವಜಾಗೊಳಿಸಿದೆ.
ಭಾರತದ ಎನ್ ಎಸ್ ಜಿ ಸದಸ್ಯತ್ವ ತಡೆಗೆ ಜಾಗತಿಕ ಮಟ್ಟದಲ್ಲಿ ನೀರಸ ಬೆಂಬಲ: ಚೀನಾ ಅಧಿಕಾರಿಯ ತಲೆದಂಡ!
ಭಾರತದ ಎನ್ ಎಸ್ ಜಿ ಸದಸ್ಯತ್ವ ತಡೆಗೆ ಜಾಗತಿಕ ಮಟ್ಟದಲ್ಲಿ ನೀರಸ ಬೆಂಬಲ: ಚೀನಾ ಅಧಿಕಾರಿಯ ತಲೆದಂಡ!

ಹಾಂಕ್ ಕಾಂಗ್: ಭಾರತದ ಎನ್ ಎಸ್ ಜಿ ಸದಸ್ಯತ್ವಕ್ಕೆ ಕೊಕ್ಕೆ ಹಾಕುವಲ್ಲಿ ಮೇಲ್ನೋಟಕ್ಕೆ ಯಶಸ್ವಿಯಾಗಿರುವ ಚೀನಾಗೆ ಜಾಗತಿಕ ಮಟ್ಟದಲ್ಲಿ ತನ್ನ ನಿರೀಕ್ಷೆ ಸುಳ್ಳಾದ ಪರಿಣಾಮ ಮರ್ಮಾಘಾತವಾಗಿದೆ. ಪರಿಣಾಮ ಚೀನಾ ನಿಲುವಿಗೆ ಉಳಿದ ಎನ್ ಎಸ್ ಜಿ ರಾಷ್ಟ್ರಗಳ ಬೆಂಬಲ ಪಡೆಯುವ ಜವಾಬ್ದಾರಿ ಹೊತ್ತಿದ್ದ ತನ್ನ ವಿದೇಶಾಂಗ ಇಲಾಖೆ ಅಧಿಕಾರಿಯನ್ನು  ಚೀನಾ ವಜಾಗೊಳಿಸಿದೆ.  
ಭಾರತದ ಎನ್ ಎಸ್ ಜಿ ಸದಸ್ಯತ್ವ ವಿರೋಧಿಸುತ್ತಿದ್ದ ಚೀನಾ ನಿಲುವಿಗೆ ಎನ್ ಎಸ್ ಜಿ ಸದಸ್ಯ ರಾಷ್ಟ್ರಗಳಲ್ಲಿ ಕನಿಷ್ಠ 15 ರಾಷ್ಟ್ರಗಳು ಬೆಂಬಲ ನೀಡುತ್ತದೆ ಎಂದು ಚೀನಾದ ವಿದೇಶಾಂಗ ಇಲಾಖೆ ಅಧಿಕಾರಿ ವಾಂಗ್ ಕೂನ್ ಚೀನಾ ದೇಶವನ್ನು ನಂಬಿಸಿದ್ದರು. ಅಧಿಕಾರಿಯ ಮಾತನ್ನು ನಂಬಿದ್ದ ಚೀನಾ ಭಾರತದ ಎನ್ ಎಸ್ ಜಿ ಸದಸ್ಯತ್ವವನ್ನು ವಿರೋಧಿಸಿದರೆ ತನ್ನ ನಿಲುವನ್ನು ಎನ್ ಎಸ್ ಜಿ ಯ ಮೂರನೇ ಒಂದರಷ್ಟು ರಾಷ್ಟ್ರಗಳು ಬೆಂಬಲಿಸಲಿವೆ ಎಂಬ ಊಹೆಯಲ್ಲಿತ್ತು. ಆದರೆ ಸಿಯೋಲ್ ನಲ್ಲಿ ನಡೆದ ಸಭೆಯಲ್ಲಿ ಭಾರತದ ಸದಸ್ಯತ್ವಕ್ಕೆ ಚೀನಾ ಜೊತೆಗೆ ಕೇವಲ ನಾಲ್ಕು ರಾಷ್ಟ್ರಗಳು ಮಾತ್ರ ವಿರೋಧ ವ್ಯಕ್ತಪಡಿಸಿದ್ದು ಚೀನಾಗೆ ಮರ್ಮಾಘಾತ ಉಂಟು ಮಾಡಿದೆ. ಪರಿಣಾಮ ಈಗ ಚೀನಾ ಅಧಿಕಾರಿಯ ತಲೆದಂಡವಾಗಿದೆ.

ಎನ್ ಎಸ್ ಜಿ ಸದಸ್ಯತ್ವ ತಡೆದಿದ್ದಕ್ಕೆ ಚೀನಾಗೆ ಶುರುವಾಗಿದೆ ನಡುಕ!  

ಚೀನಾಗೆ ತನ್ನ ನಿರೀಕ್ಷೆ ಸುಳ್ಳಾದ ಮರ್ಮಾಘಾತ ಒಂದೆಡೆಯಾದರೆ, ಮತ್ತೊಂದೆಡೆ ಭಾರತದ ಎನ್ ಎಸ್ ಜಿ ಸದಸ್ಯತ್ವಕ್ಕೆ ತಡೆಯೊಡ್ಡಿದ್ದಕ್ಕೆ ಒಳಗೊಳಗೇ ನಡುಕವೂ ಉಂಟಾಗಿದೆ. ಇದಕ್ಕೆ ಕಾರಣವಾಗಿರುವುದು ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾ ನಡೆಸುತ್ತಿರುವ ಚಟುವಟಿಕೆಗೆ ಸಂಬಂಧಿಸಿದಂತೆ ಯುಎನ್ ಸಿಎಲ್ ಒಎಸ್ ನಲ್ಲಿ ಫಿಲಿಪೈನ್ಸ್ ಹೂಡಿರುವ ದಾವೆಯ ತೀರ್ಪು!

ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾ ನಡೆಸುತ್ತಿರುವ ಚಟುವಟಿಕೆಗಳನ್ನು ವಿರೋಧಿಸಿ ಫಿಲಿಪೈನ್ಸ್ ವಿಶ್ವಸಂಸ್ಥೆಯ ಅಂಗವಾಗಿರುವ ಯುಎನ್ ಸಿಎಲ್ ಒಎಸ್ ನಲ್ಲಿ ದಾವೆ ಹೂಡಿದ್ದು ಇದಕ್ಕೆ ಸಂಬಂಧಿಸಿದಂತೆ ನೆದರ್ಲ್ಯಾಂಡ್ ನ ಹೇಗ್ ನಲ್ಲಿರುವ ನ್ಯಾಯಾಲಯ ಅಂತಿಮ ತೀರ್ಪು ಪ್ರಕಟಿಸಲಿದೆ. ಆದರೆ ಈ ದಾವೆಯನ್ನೇ ಚೀನಾ ಕಾನೂನು ಬಾಹಿರ ಎಂದು ಜಾಗತಿಕ ಸಮುದಾಯವನ್ನು ಮನವೊಲಿಸಲು ಯತ್ನಿಸುತ್ತಿದೆ. ಒಂದು ವೇಳೆ ತೀರ್ಪು ತನ್ನ ವಿರುದ್ಧ ಪ್ರಕಟವಾದರೆ, ಜಾಗತಿಕ ಮಟ್ಟದಲ್ಲಿ ತನಗೆ ಬೆಂಬಲ ಸಿಗದೇ ಇರುವ ಆತಂಕ ಎದುರಿಸುತ್ತಿದೆ ಚೀನಾ. ಅಷ್ಟೇ ಅಲ್ಲದೆ ಇದನ್ನೇ ಅವಕಾಶವಾಗಿ ಬಳಸಿಕೊಂಡು ಭಾರತ ತನ್ನ ವಿರುದ್ಧದ ತೀರ್ಪಿನ ಪರ ನಿಲ್ಲುವ ಮೂಲಕ ಸೇಡು ತೀರಿಸಿಕೊಳ್ಳುವ ಭಯವು ಚೀನಾಗೆ ಕಾಡುತ್ತಿದೆ.

ಒಂದು ವೇಳೆ ಯುಎನ್ ಸಿಎಲ್ ಒಎಸ್ ನ ತೀರ್ಪು ತನ್ನ ವಿರುದ್ಧವಾಗಿ ಬಂದರೆ ದಕ್ಷಿಣ ಚೀನಾ ಸಮುದ್ರಕ್ಕೆ ಸಂಬಂಧಿಸಿದ ವಿವಾದಿತ ಪ್ರದೇಶವನ್ನು ಚೀನಾ ಫಿಲಿಪೈನ್ಸ್ ಗೆ ಬಿಟ್ಟುಕೊಡಬೇಕಾಗುತ್ತದೆ. ಅಷ್ಟೇ ಅಲ್ಲದೆ ವಿಶ್ವಸಂಸ್ಥೆಯ ಅಂಗವಾಗಿರುವ ಯುಎನ್ ಸಿಎಲ್ ಒಎಸ್ ಸದಸ್ಯತ್ವವನ್ನು ಕಳೆದುಕೊಳ್ಳುವ ಅಪಾಯ ಸ್ಥಿತಿಯಲ್ಲಿದೆ. ತೀರ್ಪು ತನ್ನ ವಿರುದ್ಧ ಬಂದದ್ದೇ ಆದಲ್ಲಿ ಜಾಗತಿಕ ಮಟ್ಟದಲ್ಲಿ ತಾನು ಭಾರತದ ಎನ್ ಎಸ್ ಜಿ ಸದಸ್ಯತ್ವ ತಡೆಯಲು ರೂಪಿಸಿದ ತಂತ್ರವನ್ನೇ ಭಾರತ ತನ್ನ ಮೇಲೂ ಪ್ರಯೋಗಿಸಲಿದೆ ಎಂಬ ಭಯ ಸದ್ಯಕ್ಕೆ ಚೀನಾವನ್ನು ಕಾಡುತ್ತಿದ್ದು, ಈಗ ಭಾರತದ ಎನ್ ಎಸ್ ಜಿ ಸದಸ್ಯತ್ವಕ್ಕಿಂತ ಚೀನಾದ ಗಮನ ದಕ್ಷಿಣ ಚೀನಾ ಸಮುದ್ರ ವಿಷಯಕ್ಕೆ ಸಂಬಂಧಿಸಿದಂತೆ ಯುಎನ್ ಸಿಎಲ್ ಒಎಸ್ ನೀಡುವ ತೀರ್ಪಿನ ಮೇಲೆ ಕೇಂದ್ರೀಕೃತವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com