ರಾ ಅಧಿಕಾರಿ ಬಂಧನ: ಪಾಕ್ ಆರೋಪವನ್ನು ತಳ್ಳಿ ಹಾಕಿದ ಇರಾನ್

ಭಾರತದ ವಿದೇಶಿ ಬೇಹುಗಾರಿಕಾ ಸಂಸ್ಥೆ 'ರಾ' ಅಧಿಕಾರಿ ಕುಲಭೂಷಣ್ ಜಾಧವ್ ಬಂಧನದ ಬಗ್ಗೆ ಪಾಕಿಸ್ತಾನ ಮಾಡಿರುವ...
ಇರಾನ್ ಅಧ್ಯಕ್ಷ ಹಸನ್ ರೌಹಾನಿ
ಇರಾನ್ ಅಧ್ಯಕ್ಷ ಹಸನ್ ರೌಹಾನಿ
ಇಸ್ಲಾಮಾಬಾದ್: ಭಾರತದ ವಿದೇಶಿ ಬೇಹುಗಾರಿಕಾ ಸಂಸ್ಥೆ 'ರಾ' ಅಧಿಕಾರಿ ಕುಲಭೂಷಣ್ ಜಾಧವ್ ಬಂಧನದ ಬಗ್ಗೆ ಪಾಕಿಸ್ತಾನ ಮಾಡಿರುವ ಆರೋಪವನ್ನು ಇರಾನ್ ತಳ್ಳಿ ಹಾಕಿದೆ. 
ಪಾಕಿಸ್ತಾನದ ಆರೋಪವನ್ನು ಭಾರತ ವಜಾಗೊಳಿಸಿದ ಬೆನ್ನಲ್ಲೇ, ಇರಾನ್ ಅಧ್ಯಕ್ಷರು, ಇದೊಂದು ವದಂತಿಯಾಗಿದ್ದು, ರಾ ಅಧಿಕಾರಿ ಬಂಧನದಲ್ಲಿ ಬಲುಚಿಸ್ತಾನದ ಪಾತ್ರವಿಲ್ಲ ಎಂದು ಹೇಳಿದ್ದಾರೆ. ನಿವೃತ್ತ ನೌಕಾಪಡೆ ಅಧಿಕಾರಿ ಬಗ್ಗೆ ರಚಿಸಿರುವ ವರದಿಯ ಲೋಪದೋಷಗಳನ್ನು ನೋಡದೆ ಪಾಕಿಸ್ತಾನ ಈ ಸುದ್ದಿಯನ್ನು ಬಹಿರಂಗಗೊಳಿಸಿದೆ ಎಂದು ಅವರು ಹೇಳಿದ್ದಾರೆ. 
ಇರಾನ್ ಅಧ್ಯಕ್ಷ ಹಸನ್ ರೌಹಾನಿ ಅವರನ್ನು ಭೇಟಿ ಮಾಡಿದ ಪಾಕಿಸ್ತಾನ ಸೇನೆ ಮುಖ್ಯಸ್ಥ ಜನರಲ್ ರಾಹೀಲ್ ಷರೀಫ್, ಪಾಕಿಸ್ತಾನದ ಆಂತರಿಕ ವ್ಯವಹಾರಗಳಲ್ಲಿ ಭಾರತದ ರಾ ಮೂಗು ತೂರಿಸುತ್ತಿದೆ ಎಂದು ದೂರಿದ್ದರು. 
ಬಲುಚಿಸ್ತಾನದ ಅಧಿಕಾರಿಗಳು, ರಾ ಅಧಿಕಾರಿಯನ್ನು ಆಫ್ಘಾನಿಸ್ತಾನದ ಚಮನ್ ಗಡಿಯಲ್ಲಿ ಬಂಧಿಸಲಾಗಿದೆ ಎಂದು ವರದಿ ನೀಡಿದ್ದರು. ಆದರೆ, ಇಸ್ಲಾಮಾಬಾದ್ ಅಧಿಕಾರಿಗಳು, ರಾ ಅಧಿಕಾರಿಯನ್ನು ಇರಾನ್ ಗಡಿ ಭಾಗದಲ್ಲಿ ಬಂಧಿಸಲಾಗಿದೆ ಎಂದು ಆರೋಪಿಸಿತ್ತು.
ಕುಲಭೂಷಣ್ ಜಾದವ್ ಅವರು ನಿವೃತ್ತಿ ನಂತರ ಇರಾನ್ ನಲ್ಲಿ ಕಾರ್ಗೋ ಉದ್ಯಮ ನಡೆಸುತ್ತಿದ್ದಾರೆ. ಹಾಗಾಗಿ, ಅವರಿಗೂ ಭಾರತದ ರಾ ಅಧಿಕಾರಿಗಳಿಗೂ ಯಾವುದೇ ಸಂಬಂಧವಿಲ್ಲ ಎಂದು ಭಾರತ ಸರ್ಕಾರ ಹೇಳಿತ್ತು. 
ನಾವು ಪಾಕಿಸ್ತಾನದ ಜೊತೆಗೆ ಉತ್ತಮ ಬಾಂದವ್ಯ ಹೊಂದುತ್ತಿದ್ದಂತೆ ಇಂತಹ ವದಂತಿಗಳು ಹರಡುತ್ತಿರುತ್ತವೆ. ಆದರೆ, ಪಾಕಿಸ್ತಾನ ನಮ್ಮ ಸಹೋದರ ದೇಶದಂತಿದೆ. ಅಷ್ಟೇ ಅಲ್ಲದೇ, ಭಾರತದ ಜೊತೆಗೆ ನಾವು ಉತ್ತಮ ಬಾಂಧವ್ಯ ಹೊಂದಿದ್ದೇವೆ, ಹಾಗಾಗಿ, ರಾ ಅಧಿಕಾರಿಗೆ ಬಲುಚಿಸ್ತಾನ ಬೆಂಬಲಿಸುತ್ತಿತ್ತು ಎಂಬ ಹೇಳಿಕೆಗಳು ವದಂತಿ ಎಂದು ತಿಳಿಸಿದ್ದಾರೆ.
ಬಲೂಚಿಸ್ತಾನದಲ್ಲಿ ಭಯೋತ್ಪಾದನೆ ಹೆಚ್ಚಳಕ್ಕೆ ಗುಮ್ಮಕ್ಕು ನೀಡುತ್ತಿದ್ದ ಹಾಗೂ ಗೂಢಚಾರಿಗೆ ಮಾಡಿದ ಆರೋಪದ ಮೇಲೆ ಭಾರತೀಯ ನೌಕೆ ಹಾಗೂ ಭಾರತೀಯ ಗುಪ್ತಚರ ಸಂಸ್ಥೆ ಸಂಶೋಧನೆ ಮತ್ತು ವಿಶ್ಲೇಷಣೆ ವಿಂಗ್(ರಾ)ನ ಅಧಿಕಾರಿ ಭೂಷಣ್ ಯಾದವ್ ರನ್ನು ಬಂಧಿಸಲಾಗಿದೆ ಎಂದು ಪಾಕಿಸ್ತಾನದ ಗೃಹ ಸಚಿವ ಮಿರ್ ಸರ್ಫರಾಜ್ ಬುಕ್ತಿ ಅವರು ಹೇಳಿದ್ದರು,

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com