
ಬ್ರಸೆಲ್ಸ್: ಭಯೋತ್ಪಾದನೆ ಪಿಡುಗನ್ನು ಹೋಗಲಾಡಿಸಬೇಕೆಂದರೆ ಭಯೋತ್ಪಾದನೆ ವಿರುದ್ಧ ಎಲ್ಲಾ ರಾಷ್ಟ್ರಗಳು ಸಾಂಘಿಕವಾಗಿ ಹೋರಟ ನಡೆಸಬೇಕಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬುಧವಾರ ಹೇಳಿದ್ದಾರೆ.
13ನೇ ಭಾರತ - ಐರೋಪ್ಯ ಒಕ್ಕೂಟ ಶೃಂಗ ಸಭೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಬ್ರಸೆಲ್ಸ್ ಗೆ ಭೇಟಿ ನೀಡಿರುವ ಮೋದಿಯವರು, ಈ ಸಂದರ್ಭದಲ್ಲಿ ಬ್ರಸೆಲ್ ಮೇಲಿನ ಉಗ್ರ ದಾಳಿಯಲ್ಲಿ ಮೃತಪಟ್ಟವರ ಸ್ಮಾರಕಕ್ಕೆ ಪುಷ್ಟ ಗುಚ್ಛ ಇರಿಸುವ ಮೂಲಕ ಶ್ರದ್ಧಾಂಜಲಿ ಅರ್ಪಿಸಿದರು.
ನಂತರ ಭೋಜನಕೂಟ ಸಭೆಯಲ್ಲಿ ಮಾತನಾಡಿರುವ ಅವರು, ಭಾರತ ಭಯೋತ್ಪಾದನೆ ವಿರುದ್ಧ ಕಳೆದ 40 ವರ್ಷಗಳಿಂದಲೂ ಹೋರಾಟ ನಡೆಸಿಕೊಂಡು ಬಂದಿದೆ. ಇಂದು ವಿಶ್ವದಲ್ಲಿ ಭಯೋತ್ಪಾದನೆಯನ್ನು ಹೋಗಲಾಡಿಸಬೇಕಾದರೆ ಎಲ್ಲಾ ರಾಷ್ಟ್ರಗಳು ಒಗ್ಗೂಡಿ ಸಾಂಘಿಕವಾಗಿ ಹೋರಾಟ ನಡೆಸಬೇಕಿದೆ ಎಂದು ಹೇಳಿದ್ದಾರೆ.
ಇಂದು ನಾವು ಪರಸ್ಪರಾವಲಂಬಿತ ಜಗತ್ತಿನಲ್ಲಿ ಬದುಕುತ್ತಿದ್ದೇವೆ. ಮಾರುಕಟ್ಟೆಯಲ್ಲಿ ಅಲ್ಲದೆಯೇ ಇನ್ನಿತರೆ ಕ್ಷೇತ್ರಗಳಲ್ಲೂ ಭಾರತ ಸಾಕಷ್ಟು ಅವಕಾಶನ್ನು ನೀಡುತ್ತಿದೆ. ಭಾರತ ಬಂದರು ವಲಯದಲ್ಲಿ ದೊಡ್ಡ ಮಟ್ಟದಲ್ಲಿ ಅಭಿವೃದ್ಧಿ ಸಾಧಿಸುತ್ತಿದೆ. ಬೆಲ್ಜಿಯಂನೊಂದಿಗೆ ನಮ್ಮ ರಕ್ತಸಂಬಂಧವಿದೆ. 100 ವರ್ಷದ ಹಿಂದೆ ಭಾರತದ 130,000 ಯೋಧರು ಬೆಲ್ಜಿಯಂನಲ್ಲಿ ಹೋರಾಡಿದ್ದಾರೆ. ತಮ್ಮ ಪ್ರಾಣ ತ್ಯಾಗ ಮಾಡಿದ್ದಾರೆಂದು ಹೇಳಿದ್ದಾರೆ.
Advertisement