ಚೀನಾದಲ್ಲಿ ಭೂಕುಸಿತ: 22 ಮಂದಿ ಸಾವು, 15 ಕ್ಕೂ ಹೆಚ್ಚು ಮಂದಿ ಗಂಭೀರ

ಚೀನಾದಲ್ಲಿ ಸುರಿಯುತ್ತಿರುವ ಸತತ ಮಳೆಯಿಂದಾಗಿ ಚೀನಾದಲ್ಲಿ ಭೂಕುಸಿತ ಉಂಟಾಗಿದ್ದು, ಘಟನೆಯಲ್ಲಿ ಬರೊಬ್ಬರಿ 22 ಮಂದಿ ಸಾವಿಗೀಡಾಗಿದ್ದಾರೆ ಎಂದು ತಿಳಿದುಬಂದಿದೆ...
ಚೀನಾದಲ್ಲಿ ಭೂಕುಸಿತ (ರಾಯಿಟರ್ಸ್ ಚಿತ್ರ)
ಚೀನಾದಲ್ಲಿ ಭೂಕುಸಿತ (ರಾಯಿಟರ್ಸ್ ಚಿತ್ರ)
Updated on: 

ಬೀಜಿಂಗ್: ಚೀನಾದಲ್ಲಿ ಸುರಿಯುತ್ತಿರುವ ಸತತ ಮಳೆಯಿಂದಾಗಿ ಚೀನಾದಲ್ಲಿ ಭೂಕುಸಿತ ಉಂಟಾಗಿದ್ದು, ಘಟನೆಯಲ್ಲಿ ಬರೊಬ್ಬರಿ 22 ಮಂದಿ ಸಾವಿಗೀಡಾಗಿದ್ದಾರೆ ಎಂದು ತಿಳಿದುಬಂದಿದೆ.

ಚೀನಾದ ಫುಜಿಯಾನ್ ಪ್ರದೇಶದಲ್ಲಿ ಭೂಕುಸಿತ ಉಂಟಾದ ಪರಿಣಾಮ 22 ಮಂದಿ ಮೃತಪಟ್ಟು, 25ಕ್ಕೂ ಹೆಚ್ಚು ಮಂದಿ ನಾಪತ್ತೆಯಾದ ಘಟನೆ ನಡೆದಿದೆ. ಅಲ್ಲದೆ ಘಟನೆಯಲ್ಲಿ 13ಕ್ಕೂ ಹೆಚ್ಚು  ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ನಿರ್ಮಾಣ ಹಂತದಲ್ಲಿದ್ದ ಜಲ ವಿದ್ಯುತ್ ಘಟಕವು ಭೂಕುಸಿತದಿಂದ ನಾಶಗೊಂಡಿದ್ದು, ಅಲ್ಲಿದ್ದ ಕಟ್ಟಡ ಕಾಮಗಾರಿ  ಕಾರ್ಮಿಕರೂ ಕೂಡ ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನು ಅವಶೇಷಗಳಡಿಯಲ್ಲಿ ಸಿಲುಕಿರುವ ಮೃತರ ದೇಹಕ್ಕಾಗಿ ಕಾರ್ಯಾಚರಣೆ ಬರದಿಂದ ಸಾಗಿದೆ.

ಇನ್ನು ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲು ಮಾಡಲಾಗುತ್ತಿದ್ದು, ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಕಳೆದ 24 ಗಂಟೆಯಲ್ಲಿ ಕನಿಷ್ಠ  24 ಸೆಂಟಿ ಮೀಟರ್ ಮಳೆ  ಸುರಿದಿದ್ದು, ಫುಜಿಯಾನ್ ಪ್ರಾಂತ್ಯದ ತೈನಿಂಗ್ ಪ್ರದೇಶದಲ್ಲಿ ಭೂಕುಸಿತ ಸಂಭಿವಿಸಿದೆ. ಮಣ್ಣಿನ ರಾಶಿಯಿಂದ ಈವರೆಗೂ 22 ದೇಹಗಳನ್ನು ಹೊರ ತೆಗೆಯಲಾಗಿದೆ. ಪ್ರವಾಹ ಭೀತಿಯಿಂದ  ಪ್ರವಾಸಿ ತಾಣಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ.

ಇನ್ನು ಭೂಕುಸಿತ ಸಂಬಂಧ ಮಾಧ್ಯಮಗಳೊಂದಿಗೆ ಮಾಹಿತಿ ಹಂಚಿಕೊಂಡಿರುವ ಸ್ಥಳೀಯರು, ಪರ್ವತಗಳು ಬಲವಾಗಿ ಕಂಪಿಸುತ್ತಿದ್ದಾಗ ನಾವು ನಿದ್ರಾವಸ್ಥೆಯಲ್ಲಿದ್ದೆವು. ಏನಾಗುತ್ತಿದೆ ಎಂದು  ತಿಳಿಯುವ ಮೊದಲೇ ಮರಳು, ಕೆಸರು ನಮ್ಮ ಕೋಣೆಯೊಳಗೆ ನುಗ್ಗಿ ಬಂತು ಎಂದು ಸಂತ್ರಸ್ಥರೊಬ್ಬರು ಪ್ರತಿಕ್ರಿಯಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com