ಬೀಜಿಂಗ್: ಈ ವಾರ ವಿಯೆನ್ನಾದಲ್ಲಿ ಎನ್ ಎಸ್ ಜಿ ಸಂಬಂಧ ಸಭೆ ನಡೆಯಲಿದೆ. ಇದೇ ವೇಳೆ ಭಾರತಕ್ಕೆ ಎನ್ಎಸ್ ಜಿ ಸದಸ್ಯತ್ವ ನೀಡುವುದನ್ನು ವಿರೋಧಿಸುತ್ತಿರುವ ಚೀನಾ ಈಗಲೂ ತನ್ನ ನಿಲುವಿಗೆ ಬದ್ಧವಾಗಿರುವುದಾಗಿ ತಿಳಿಸಿದೆ.
ನವೆಂಬರ್ 11-12 ರಂದು ವಿಯೆನ್ನಾದಲ್ಲಿ ಎನ್ ಎಸ್ ಜಿ ಅಧಿವೇಶನ ನಡೆಯಲಿದೆ. ಎನ್ ಎಸ್ ಜಿ ಸದಸ್ಯತ್ವಕ್ಕೆ ಭಾರತ ಮತ್ತು ಪಾಕಿಸ್ತಾನಗಳು ಅರ್ಜಿ ಸಲ್ಲಿಸಿವೆ. ಆದರೆ ಈ ಎರಡು ದೇಶಗಳು
ಪರಮಾಣು ಪ್ರಸರಣ-ಮಾಡದಿರುವ ಒಪ್ಪಂದಕ್ಕೆ ಸಹಿ ಹಾಕದಿರುವ ಕಾರಣ ಚೀನಾ ಭಾರತ ಮತ್ತು ಪಾಕಿಸ್ತಾನಕ್ಕೆ ಎನ್ ಎಸ್ ಜಿ ಸದಸ್ಯತ್ವ ನೀಡಲು ವಿರೋಧ ವ್ಯಕ್ತ ಪಡಿಸಿದೆ.
ವಿಯೆನ್ನಾ ಎನ್ ಎಸ್ ಜಿ ಸಭೆಯಲ್ಲಿ 48 ರಾಷ್ಟ್ರಗಳು ಭಾಗವಹಿಸಲಿವೆ. ಕಳೆದ ವಾರ ಹೈದರಾಬಾದ್ ನಲ್ಲಿ ಚೀನಾ ಮತ್ತು ಭಾರತ ಮತ್ತೊಂದು ಸುತ್ತಿನ ಮಾತುಕತೆ ನಡೆಸಿದ್ದು, ಈ ವೇಳೆ ಪರಮಾಣು ಪ್ರಸರಣ-ಮಾಡದಿರುವ ಒಪ್ಪಂದಕ್ಕೆ ಮೊದಲು ಸಹಿ ಹಾಕಬೇಕೆಂದು ಭಾರತಕ್ಕೆ ಚೀನಾ ತಿಳಿಸಿದೆ.
Advertisement