ದುಬಾರಿ ಬೆಲೆ ನೋಟಿನ ಮೇಲೆ ನಿಷೇಧ: ಪ್ರಧಾನಿ ಮೋದಿ ನಡೆಗೆ ಐಎಂಎಫ್ ಬೆಂಬಲ

ರು.500 ಹಾಗೂ 1,000 ಮುಖಬೆಲೆಯ ನೋಟಿನ ಮೇಲೆ ನಿಷೇಧ ಹೇರುವ ಮೂಲಕ ಕಠಿಣ ನಿರ್ಧಾರ ತೆಗೆದುಕೊಂಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನಡೆಗೆ ವಿಶ್ವ ಹಣಕಾಸು ನಿಧಿ...
ಪ್ರಧಾನಮಂತ್ರಿ ನರೇಂದ್ರ ಮೋದಿ
ಪ್ರಧಾನಮಂತ್ರಿ ನರೇಂದ್ರ ಮೋದಿ
Updated on

ವಾಷಿಂಗ್ಟನ್: ರು.500 ಹಾಗೂ 1,000 ಮುಖಬೆಲೆಯ ನೋಟಿನ ಮೇಲೆ ನಿಷೇಧ ಹೇರುವ ಮೂಲಕ ಕಠಿಣ ನಿರ್ಧಾರ ತೆಗೆದುಕೊಂಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನಡೆಗೆ ವಿಶ್ವ ಹಣಕಾಸು ನಿಧಿ ಶುಕ್ರವಾರ ಬೆಂಬಲವನ್ನು ಸೂಚಿಸಿದೆ.

ದುಬಾರಿ ಬೆಲೆಯ ನೋಟಿನ ಮೇಲೆ ಪ್ರಧಾನಿ ಮೋದಿಯವರು ನಿಷೇಧ ಹೇರಿರುವ ಕುರಿತಂತೆ ಪ್ರತಿಕ್ರಿಯೆ ನೀಡಿರುವ ವಿಶ್ವ ಹಣಕಾಸು ನಿಧಿ ವಕ್ತಾರ ಗೆರ್ರಿ ರೈಸ್ ಅವರು, ಭಾರತದಲ್ಲಿರುವ ಭ್ರಷ್ಟಾಚಾರ ಹಾಗೂ ಅಕ್ರಮ ಹಣ ಸಂಗ್ರಹದ ವಿರುದ್ಧ ಪ್ರಧಾನಿ ಮೋದಿಯವರು ತೆಗೆದುಕೊಂಡಿರುವ ನಿರ್ಧಾರವನ್ನು ವಿಶ್ವ ಸಮುದಾಯ ಬೆಂಬಲಿಸುತ್ತದೆ ಎಂದು ಹೇಳಿದ್ದಾರೆ.

ಇದೇ ವೇಳೆ ಕೇಂದ್ರ ಸರ್ಕಾರ ಈ ಕಠಿಣ ನಿರ್ಧಾರದಿಂದಾಗಿ ಸಾರ್ವಜನಿಕರು ಅನುಭವಿಸುತ್ತಿರುವ ಸಂಕಷ್ಟದ ಕುರಿತಂತೆ ಮಾತನಾಡಿರುವ ಅವರು, ಭಾರತದ ಆರ್ಥಿಕತೆಯಲ್ಲಿ ದಿನನಿತ್ಯ ಜೀವನದಲ್ಲಿ ದೊಡ್ಡ ಪ್ರಮಾಣದಲ್ಲಿ ಹಣಕಾಸು ವ್ಯವಹಾರಗಳು ನಡೆಯುತ್ತಿರುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು ಸಮಯೋಚಿತವಾಗಿ ನಿರ್ಧಾರಕೈಗೊಳ್ಳಬೇಕಿತ್ತು ಎಂದು ತಿಳಿಸಿದ್ದಾರೆ.

ಕಠಿಣ ನಿರ್ಧಾರದಿಂದಾಗಿ ಜನರು ಪಡುತ್ತಿರುವ ಕಷ್ಟದ ಕುರಿತಂತೆ ನಿನ್ನೆಯಷ್ಟೇ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿದ್ದ ಪ್ರಧಾನಿ ಮೋದಿಯವರು, ಕಠಿಣ ನಿರ್ಧಾರದಿಂದ ಸಂಕಷ್ಟ ಎದುರಾಗಿದ್ದು, ಮುಂದೆ ಒಳ್ಳೆಯ ದಿನಗಳು ಬರುವುದೆಂದು ಜನರು ಕಷ್ಟವನ್ನು ಪ್ರೀತಿಯಿಂದ ಸ್ವೀಕರಿಸಿದ್ದಾರೆ. ಜನರ ಪ್ರೀತಿ, ಉತ್ಸಾಹ ಹಾಗೂ ತಾಳ್ಮೆಯನ್ನು ನೋಡುತ್ತಿದ್ದರೆ ಹೃದಯ ತುಂಬಿ ಬರುತ್ತಿದೆ. ಭಾರತವನ್ನು ಭ್ರಷ್ಟಾಚಾರ ಮುಕ್ತ ರಾಷ್ಟ್ರವಾಗಿಸುಲು ನಮ್ಮ ಶ್ರಮವನ್ನು ಮುಂದುವರೆಸಲಾಗುತ್ತದೆ. ದೇಶದ ಅಭಿವೃದ್ಧಿ ಪ್ರತಿಯೊಬ್ಬ ನಾಗರೀಕರನಿಗೂ ತಲುಪುವಂತೆ ಮಾಡಲಾಗುತ್ತದೆ ಎಂದು ಹೇಳಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com