
ಕೊಲಂಬೊ: ಶ್ರೀಲಂಕಾದ ತೀರದ ಸಮೀಪದ ನೆಡುಂತೀವು ಬಳಿ ಮೀನುಗಾರಿಕೆ ನಡೆಸುತ್ತಿದ್ದ ವೇಳೆ ತಮಿನಾಡಿನ 11 ಮೀನುಗಾರರನ್ನು ಶ್ರೀಲಂಕಾ ನೌಕಾಪಡೆ ಬಂಧನಕ್ಕೊಳಪಡಿಸಿದೆ ಎಂದು ಅಧಿಕಾರಿಗಳು ಭಾನುವಾರ ಹೇಳಿದ್ದಾರೆ.
ಶ್ರೀಲಂಕಾದ ವಾಯುವ್ಯ ಜಾಫ್ನಾ ಬಳಿಯಿರುವ ಡೆಲ್ಫ್ಟ್ ಐಲೆಟ್ ಕರಾವಳಿ ತೀರದ ಪ್ರದೇಶದಲ್ಲಿ ಅಕ್ರಮವಾಗಿ ಮೀನುಗಾರಿಕೆ ನಡೆಸುತ್ತಿದ್ದಾರೆಂದು ಆರೋಪಿಸಿ ಶ್ರೀಲಂಕಾ ನೌಕಾಪಡೆ ಮೀನುಗಾರರನ್ನು ಬಂಧನಕ್ಕೊಳಪಡಿಸಿದೆ ಎಂದು ಹೇಳಲಾಗುತ್ತಿದೆ.
ಬಂಧಿತ ಮೀನುಗಾರರು ತಮಿಳುನಾಡಿನ ರಾಮೇಶ್ವರ ಮೂಲದವರಾಗಿದ್ದಾರೆಂದು ತಿಳಿದುಬಂದಿದೆ. ಅಂತರರಾಷ್ಟ್ರೀಯ ಜಲಗಡಿ ಉಲ್ಲಂಘನೆ ಮಾಡಿದ್ದಾರೆಂದು ಆರೋಪಿಸಿ ಕೆಲ ದಿನಗಳ ಹಿಂದಷ್ಟೇ ತಮಿಳನಾಡಿನ ಇಬ್ಬರು ಮೀನುಗಾರರನ್ನು ಶ್ರೀಲಂಕಾ ನೌಕಾಪಡೆ ಬಂಧನಕ್ಕೊಳಪಡಿಸಿತ್ತು.
Advertisement