ಪಾಕ್ ಪರಿಸರಕ್ಕೆ ಅನುಗುಣವಾಗಿ ಪ್ರಜಾಪ್ರಭುತ್ವವಿಲ್ಲ: ಫರ್ವೇಜ್ ಮುಷರಫ್

ಪಾಕಿಸ್ತಾನ ಆಡಳಿತದಲ್ಲಿ ಸೇನೆಗೆ ಮಹತ್ತರ ಪಾತ್ರವಿದ್ದು, ಇಲ್ಲಿನ ಪರಿಸರಕ್ಕೆ ಅನುಗುಣವಾಗಿ ಪ್ರಜಾಪ್ರಭುತ್ವವಿಲ್ಲ ಎಂದು ಪಾಕಿಸ್ತಾನ ಮಾಜಿ ಅಧ್ಯಕ್ಷ ಫರ್ವೇಜ್ ಮುಷರಫ್ ಹೇಳಿದ್ದಾರೆ.
ಪಾಕ್ ಮಾಜಿ ಅಧ್ಯಕ್ಷ ಫರ್ವೇಜ್ ಮುಷರಫ್ (ಸಂಗ್ರಹ ಚಿತ್ರ)
ಪಾಕ್ ಮಾಜಿ ಅಧ್ಯಕ್ಷ ಫರ್ವೇಜ್ ಮುಷರಫ್ (ಸಂಗ್ರಹ ಚಿತ್ರ)
Updated on

ವಾಷಿಂಗ್ಟನ್: ಪಾಕಿಸ್ತಾನ ಆಡಳಿತದಲ್ಲಿ ಸೇನೆಗೆ ಮಹತ್ತರ ಪಾತ್ರವಿದ್ದು, ಇಲ್ಲಿನ ಪರಿಸರಕ್ಕೆ ಅನುಗುಣವಾಗಿ ಪ್ರಜಾಪ್ರಭುತ್ವವಿಲ್ಲ ಎಂದು ಪಾಕಿಸ್ತಾನ ಮಾಜಿ ಅಧ್ಯಕ್ಷ ಫರ್ವೇಜ್ ಮುಷರಫ್  ಹೇಳಿದ್ದಾರೆ.

ವಾಷಿಂಗ್ಟನ್ ನಲ್ಲಿ ನಡೆದ ಐಡಿಯಾಸ್ ಫೋರಂನಲ್ಲಿ ಪಾಲ್ಗೊಂಡು ಖಾಸಗಿ ಸುದ್ದಿವಾಹಿನಿಯೊಂದಿಗೆ ಮಾತನಾಡಿರುವ ಮುಷರಫ್ ಪಾಕಿಸ್ತಾನದ ಪರಿಸರಕ್ಕೆ ಅನುಗುಣವಾಗಿ ಪ್ರಜಾಪ್ರಭುತ್ವವಿಲ್ಲ  ಎಂದು ಹೇಳಿದ್ದಾರೆ.

ಉರಿ ಉಗ್ರದಾಳಿ ಬಳಿಕ ಭಾರತ ಪಿಒಕೆಯಲ್ಲಿ ನಡೆಸಿದ ಸೀಮಿತ ದಾಳಿ ಹಿನ್ನಲೆಯಲ್ಲಿ ಪಾಕಿಸ್ತಾನದಲ್ಲಿ ಸೇನೆ ವಿರುದ್ಧ ವ್ಯಕ್ತವಾಗುತ್ತಿರುವ ಆಕ್ರೋಶಕ್ಕೆ ಸಂಬಂಧಿಸಿದಂತೆ ಪರೋಕ್ಷವಾಗಿ  ಮಾತನಾಡಿರುವ ಮುಷರಫ್, ಪಾಕ್ ಸೇನೆಯ ಬೆಂಬಲಕ್ಕೆ ನಿಂತಿದ್ದಾರೆ.

"ಪಾಕಿಸ್ತಾನದ ಆಡಳಿತ ಪ್ರಕ್ರಿಯೆಯಲ್ಲಿ ಪಾಕ್ ಸೇನೆ ಮಹತ್ತರ ಪಾತ್ರ ನಿರ್ವಹಿಸುತ್ತಿದೆ. ಕೆಲ ವಿಚಾರಗಳಲ್ಲಿ ಸರ್ಕಾರಕ್ಕಿಂತಲೂ ಹೆಚ್ಚಿನ ಅಧಿಕಾರವನ್ನು ಸೇನೆ ಹೊಂದಿದ್ದು, ಜನರಿಂದ  ಆಯ್ಕೆಯಾಗಿ ಬಂದ ಅದೆಷ್ಟೋ ಸರ್ಕಾರಗಳು ತಮ್ಮ ಕರ್ತವ್ಯ ಪಾಲನೆಯಲ್ಲಿ ವಿಫಲವಾದಾಗ ಅಥವಾ ತಮ್ಮ ಕರ್ತವ್ಯಕ್ಕೆ ಚ್ಯುತಿ ತಂದಾಗ ಸೇನೆ ದೇಶದ ಆಡಳಿತವನ್ನು ವಹಿಸಿಕೊಂಡಿದೆ.  ಆದರೆ ಇಂತಹ ದೇಶದ ಪರಿಸರಕ್ಕೆ ಅನುಗುಣವಾಗಿ ಪ್ರಜಾಪ್ರಭುತ್ವವಿಲ್ಲ ಎಂದು ಮುಷರಫ್ ಹೇಳಿದ್ದಾರೆ.

ಇದು ಪಾಕಿಸ್ತಾನದ ದೊಡ್ಡ ದೌರ್ಬಲ್ಯ ಕೂಡ ಹೌದು. ದುರ್ಬಲ ಆಡಳಿತದಿಂದಾಗಿ ಪಾಕಿಸ್ತಾನದ ಅಸ್ತಿತ್ವಕ್ಕೆ ಕುಂದು ಬರುತ್ತಿದೆ ಎಂದಾಗ ಜನ ಪಾಕಿಸ್ತಾನ ಸೇನೆಯ ಮೊರೆ ಹೋಗುತ್ತಾರೆ. ಆಗ ಸೇನೆ  ದೇಶದ ಆಡಳಿತವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತದೆ. ಇದೇ ಕಾರಣಕ್ಕೆ ಪಾಕಿಸ್ತಾನ ಜನತೆ ಪಾಕ್ ಸೇನೆಯನ್ನು ಪ್ರೀತಿಸುತ್ತಾರೆ. ನಾನು ಕೂಡ ಪಾಕಿಸ್ತಾನ ಸೇನೆಯಲ್ಲಿ 40 ವರ್ಷಗಳ ಕಾಲ  ಸೇವೆ ಸಲ್ಲಿಸಿದ್ದೇನೆ. ಹಲವು ಯುದ್ಧಗಳಲ್ಲಿ ಪಾಲ್ಗೊಂಡಿದ್ದೇನೆ. ಹೀಗಾಗಿ ನನ್ನ ಕ್ಷೇತ್ರ ಯಾವುದು ಎಂದು ನನಗೆ ಸ್ಪಷ್ಟವಾಗಿ ತಿಳಿದಿದೆ. ಯಾವುದೇ ಕಾರಣಕ್ಕೂ ಪಾಕ್ ಸೇನೆಯನ್ನು ಲಘುವಾಗಿ  ಪರಿಗಣಿಸುವುದು ಬೇಡ ಎಂದು ಮುಷರಫ್ ಹೇಳಿದ್ದಾರೆ.

ಭಾರತಕ್ಕೆ ತಕ್ಕ ತಿರುಗೇಟು ನೀಡಬೇಕು
ಇದೇ ವೇಳೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಾರತ ನಡೆಸಿದ ಸೀಮಿತ ದಾಳಿ ಕುರಿತಂತೆ ಪ್ರತಿಕ್ರಿಯಿಸಿದ ಮುಷರಫ್, ಭಾರತಕ್ಕೆ ಪಾಕಿಸ್ತಾನ ಸೇನೆ ಶೀಘ್ರದಲ್ಲೇ ತಕ್ಕ ಉತ್ತರ ನೀಡಬೇಕು  ಎಂದು ಹೇಳಿದ್ದಾರೆ. ಪಿಒಕೆಯಲ್ಲಿ ಆಕ್ರಮಣ ಮಾಡುವ ಮೂಲಕ ಭಾರತ ಪಾಕಿಸ್ತಾನವನ್ನು ಬೆದರಿಸುವ ಕೆಲಸಕ್ಕೆ ಮುಂದಾಗಿದೆ. ಆ ದೇಶಕ್ಕೆ ಅದರದೇ ಹಾದಿಯಲ್ಲಿ ನಾವು ಉತ್ತರ ನೀಡಬೇಕು.  ಭಾರತೀಯ ಗಡಿಯಲ್ಲಿ ಅದರದೇ ಸೈನಿಕರಿಗೆ ತಕ್ಕ ಉತ್ತರ ನೀಡುವ ಮೂಲಕ ಪಾಕಿಸ್ತಾನ ತನ್ನ ಶಕ್ತಿ ಪ್ರದರ್ಶನ ಮಾಡಬೇಕು ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com