ಭಾರತದ ಕಟ್ಟುಕಥೆಗಳನ್ನು ವಿಶ್ವ ಸಮುದಾಯ ಖಂಡಿಸಬೇಕು: ಪಾಕಿಸ್ತಾನ ಸೇನಾ ಮುಖ್ಯಸ್ಥ

ಕಾಶ್ಮೀರ ಹಾಗೂ ಎಲ್ಒಸಿ ವಿಚಾರ ಕುರಿತಂತೆ ಕಟ್ಟುಕಥೆಗಳನ್ನು ಹೇಳುತ್ತಿರುವ ಭಾರತ ವಿರುದ್ಧ ವಿಶ್ವ ಸಮುದಾಯ ಖಂಡನೆ ವ್ಯಕ್ತಪಡಿಸಬೇಕೆಂದು ಪಾಕಿಸ್ತಾನ ಸೇನಾ ಮುಖ್ಯಸ್ಥ ಗುರುವಾರ...
ಪಾಕಿಸ್ತಾನ ಸೇನಾ ಮುಖ್ಯ ಜನರಲ್ ರಹೀಲ್ ಶರೀಫ್
ಪಾಕಿಸ್ತಾನ ಸೇನಾ ಮುಖ್ಯ ಜನರಲ್ ರಹೀಲ್ ಶರೀಫ್

ಕರಾಚಿ: ಕಾಶ್ಮೀರ ಹಾಗೂ ಎಲ್ಒಸಿ ವಿಚಾರ ಕುರಿತಂತೆ ಕಟ್ಟುಕಥೆಗಳನ್ನು ಹೇಳುತ್ತಿರುವ ಭಾರತ ವಿರುದ್ಧ ವಿಶ್ವ ಸಮುದಾಯ ಖಂಡನೆ ವ್ಯಕ್ತಪಡಿಸಬೇಕೆಂದು ಪಾಕಿಸ್ತಾನ ಸೇನಾ ಮುಖ್ಯಸ್ಥ ಗುರುವಾರ ಆಗ್ರಹಿಸಿದ್ದಾರೆ.

ಪಾಕಿಸ್ತಾನ ಸೇನಾ ಮುಖ್ಯ ಜನರಲ್ ರಹೀಲ್ ಶರೀಫ್ ಅವರ ಹೇಳಿಕೆ ಕುರಿತಂತೆ ಡಾನ್ ವರದಿ ಮಾಡಿದ್ದು, ವರದಿಯಲ್ಲಿ ಕಾಶ್ಮೀರ ಹಾಗೂ ಎಲ್ಒಸಿ ವಿಚಾರ ಕುರಿತಂತೆ ಕಟ್ಟುಕಥೆಗಳನ್ನು ಹೇಳುತ್ತಿರುವ ಭಾರತದ ವಿರುದ್ಧ ವಿಶ್ವ ಸಮುದಾಯ ಖಂಡನೆ ವ್ಯಕ್ತಪಡಿಸಬೇಕೆಂದು ಹೇಳಿದ್ದಾರೆಂದು ಹೇಳಿಕೊಂಡಿದೆ.

ವಿಶ್ವದಲ್ಲಿ ಭಯೋತ್ಪಾದನೆ ವಿರುದ್ಧ ಯಾವುದೇ ಕೊಡುಗೆಯನ್ನು ಕೊಡದ ದೇಶ ಪಾಕಿಸ್ತಾನದ ವಿರುದ್ಧ ಆರೋಪಗಳನ್ನು ಮಾಡುತ್ತಿದ್ದು, ಇಲ್ಲಸಲ್ಲದ ಕಟ್ಟುಕಥೆಗಳನ್ನು ಹೇಳುತ್ತಿದೆ. ಹೀಗಾಗಿ ವಿಶ್ವ ಸಮುದಾಯ ಭಾರತದ ವಿರುದ್ಧ ಖಂಡನೆ ವ್ಯಕ್ತಪಡಿಸಬೇಕಿದೆ ಎಂದು ಹೇಳಿದ್ದಾರೆ.

ಬಹಿರಂಗ ಅಥವಾ ಆಂತರಿಕ ಬೆದರಿಕೆಗಳಿಗೆ ಉತ್ತರ ನೀಡಲು ಪಾಕಿಸ್ತಾನ ಸೇನೆ ಸಂಪೂರ್ಣವಾಗಿ ಸಿದ್ಧವಿದೆ. ಪಾಕಿಸ್ತಾನ ದೇಶವೊಂದು ಜವಾಬ್ದಾರಿಯುತ ದೇಶವಾಗಿದ್ದು, ಇತರೆ ದೇಶಗಳಂತೆಯೇ ಸ್ನೇಹ ನೀತಿ ಹಾಗೂ ಪರಸ್ಪರ ಗೌರವ ಪಾಲನೆಗಳಿಗೆ ಬದ್ಧವಾಗಿದೆ. ಉದ್ದೇಶ ಪೂರ್ವಕವಾಗಿ ಆಕ್ರಮಣ ಮಾಡಿದರೆ ಅದನ್ನು ಪಾಕಿಸ್ತಾನ ಸಹಿಸುವುದಿಲ್ಲ. ಅಂತಹವರಿಗೆ ಶಿಕ್ಷೆ ನೀಡದೆ ಬಿಡುವುದಿಲ್ಲ ಎಂದು ಹೇಳಿಕೊಂಡಿದ್ದಾರೆಂದು ಡಾನ್ ವರದಿ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com