ಭಾರತ 26/11 ದಾಳಿಯ ಸಾಕ್ಷಿಗಳನ್ನು ಕಳಿಸುತ್ತಿಲ್ಲ: ಪಾಕಿಸ್ತಾನ

ಮುಂಬೈ 26/11 ರ ದಾಳಿ ಪ್ರಕರಣದ ವಿಚಾರಣೆಗಾಗಿ ಸಾಕ್ಷಿಗಳನ್ನು ಕಳಿಸಲು ಮಾಡಲಾಗಿರುವ ಮನವಿಗೆ ಭಾರತ ಸ್ಪಂದಿಸುತ್ತಿಲ್ಲ ಎಂದು ಪಾಕಿಸ್ತಾನದ "ಭಯೋತ್ಪಾದನಾ ನಿಗ್ರಹ ನ್ಯಾಯಾಲಯಕ್ಕೆ ಪಾಕ್ ಅಭಿಯೋಜಕರು ಹೇಳಿದ್ದಾರೆ.
ಭಾರತ 26/11 ದಾಳಿಯ ಸಾಕ್ಷಿಗಳನ್ನು ಕಳಿಸುತ್ತಿಲ್ಲ: ಪಾಕಿಸ್ತಾನ
ಭಾರತ 26/11 ದಾಳಿಯ ಸಾಕ್ಷಿಗಳನ್ನು ಕಳಿಸುತ್ತಿಲ್ಲ: ಪಾಕಿಸ್ತಾನ
Updated on: 

ಲಾಹೋರ್: ಮುಂಬೈ 26/11 ರ ದಾಳಿ ಪ್ರಕರಣದ ವಿಚಾರಣೆಗಾಗಿ ಸಾಕ್ಷಿಗಳನ್ನು ಕಳಿಸಲು ಮಾಡಲಾಗಿರುವ ಮನವಿಗೆ ಭಾರತ ಸ್ಪಂದಿಸುತ್ತಿಲ್ಲ ಎಂದು ಪಾಕಿಸ್ತಾನದ "ಭಯೋತ್ಪಾದನಾ ನಿಗ್ರಹ ನ್ಯಾಯಾಲಯಕ್ಕೆ ಪಾಕ್ ಅಭಿಯೋಜಕರು ಹೇಳಿದ್ದಾರೆ.

ಪಾಕ್ ನ್ಯಾಯಾಲಯದಲ್ಲಿ ಮುಂಬೈ 26/11 ರ ದಾಳಿ ಕುರಿತು ವಿಚಾರಣೆ ನಡೆಯುತ್ತಿದ್ದು, ಭಾರತಕ್ಕೆ ಸಾಕ್ಷಿಗಳನ್ನು ಕಳಿಸುವಂತೆ ಮನವಿ ಮಾಡಿಕೊಳ್ಳಲಾಗಿದ್ದರು ಸಹ ಅದಕ್ಕೆ ಪ್ರತಿಕ್ರಿಯೆ ನೀಡಿಲ್ಲ ಎಂದು ಪಾಕ್ ಅಭಿಯೋಜಕರು ಪಾಕಿಸ್ತಾನದ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಪಾಕ್ ವಿದೇಶಾಂಗ ಸಚಿವಾಲಯ ಹಲವು ತಿಂಗಳ ಹಿಂದೆಯೇ ಭಾರತಕ್ಕೆ ಸಾಕ್ಷಿಗಳನ್ನು ಪಾಕ್ ಗೆ ಕಲಿಸಿಕೊಡಲು ಮನವಿ ಮಾಡಿತ್ತು, ಇದಾದ ಬಳಿಕ ದಕ್ಷಿಣ ಏಷ್ಯಾದ ವ್ಯವಹಾರಗಳನ್ನು ಗಮನಿಸುವ ಪಾಕಿಸ್ತಾನದ ಪ್ರಧಾನ ನಿರ್ದೇಶಕರು, ಪ್ರಕರಣದ ವಿಚಾರಣೆಯನ್ನು ತ್ವರಿತವಾಗಿ ಮುಕ್ತಾಯಗೊಳಿಸಲು ಸಹಕಾರಿಯಾಗುವ 24 ಸಾಕ್ಷಿಗಳನ್ನು ಕಳಿಸುವಂತೆ ಭಾರತಕ್ಕೆ ಮನವಿ ಮಾಡಿದ್ದರು. ಆದರೆ ಇದ್ಯಾವುದಕ್ಕೂ ಸಹ ಭಾರತ ಸ್ಪಂದಿಸಿಲ್ಲ ಎಂದು ಕೋರ್ಟ್ ಗೆ ತಿಳಿಸಲಾಗಿದ್ದು, ಅಲ್ಲಿನ ನ್ಯಾಯಾಲಯ ವಿಚಾರಣೆಯನ್ನು ನ.2 ಕ್ಕೆ ಮುಂದೂಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com