ವಿಯೆನ್ನಾ ಒಪ್ಪಂದ ಉಲ್ಲಂಘನೆ ಮಾಡಿದ್ದೀರ, ಪಾಕ್ ತೊರೆಯಿರಿ: ಭಾರತೀಯ ರಾಯಭಾರಿಗೆ ನೋಟಿಸ್

1961ರ ವಿಯೆನ್ನಾ ಒಪ್ಪಂದವನ್ನು ಉಲ್ಲಂಘನೆ ಮಾಡಲಾಗಿದ್ದು, ಕೂಡಲೇ ಪಾಕಿಸ್ತಾನ ದೇಶವನ್ನು ತೊರೆಯಿರಿ ಎಂದು ಪಾಕಿಸ್ತಾನದಲ್ಲಿರುವ ಭಾರತೀಯ ರಾಯಭಾರಿಗೆ ಅಲ್ಲಿನ ಸರ್ಕಾರ ಗುರುವಾರ ನೋಟಿಸ್ ಜಾರಿ ಮಾಡಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಇಸ್ಲಾಮಾಬಾದ್: 1961ರ ವಿಯೆನ್ನಾ ಒಪ್ಪಂದವನ್ನು ಉಲ್ಲಂಘನೆ ಮಾಡಲಾಗಿದ್ದು, ಕೂಡಲೇ ಪಾಕಿಸ್ತಾನ ದೇಶವನ್ನು ತೊರೆಯಿರಿ ಎಂದು ಪಾಕಿಸ್ತಾನದಲ್ಲಿರುವ ಭಾರತೀಯ ರಾಯಭಾರಿಗೆ ಅಲ್ಲಿನ ಸರ್ಕಾರ ಗುರುವಾರ ನೋಟಿಸ್ ಜಾರಿ ಮಾಡಿದೆ.

ರಕ್ಷಣಾ ಇಲಾಖೆಯ ಗೌಪ್ಯ ಮಾಹಿತಿಗಳನ್ನು ಪಾಕಿಸ್ತಾನಕ್ಕೆ ಬೇಹುಗಾರಿಕೆ ಮಾಡುತ್ತಿದ್ದಾರೆಂದು ಹೇಳಿ ನಿನ್ನೆಯಷ್ಟೇ ದೆಹಲಿ ಪೊಲೀಸರು ಪಾಕಿಸ್ತಾನ ರಾಯಭಾರಿ ಕಚೇರಿಯ ಅಧಿಕಾರಿಗಳನ್ನು ಬಂಧನಕ್ಕೊಳಪಡಿಸಿ ವಿಚಾರಣೆ ನಡೆಸಿತ್ತು. ಅಲ್ಲದೆ ಗೂಡಾಚಾರ ನಡೆಸುತ್ತಿರುವ ಪಾಕಿಸ್ತಾನ ಅಧಿಕಾರಿಗಳು 48 ಗಂಟೆಯೊಳಗಾಗಿ ಭಾರತ ತೊರೆಯುವಂತೆ ಸೂಚನೆ ನೀಡಿತ್ತು.

ಇದರ ಬೆನ್ನಲ್ಲೇ ಸೇಡು ತೀರಿಸಿಕೊಳ್ಳಲು ಮುಂದಾಗಿರುವ ಪಾಕಿಸ್ತಾನ, ಏಟಿಗೆ ಏದುರೇಟು ಎಂಬಂತೆ ಪಾಕಿಸ್ತಾನದಲ್ಲಿರುವ ಭಾರತೀಯ ರಾಯಭಾರಿ ಅಧಿಕಾರಿಗೆ ನೋಟಿಸ್ ಮಾಡಿದೆ. ಪಾಕಿಸ್ತಾನ ಸರ್ಕಾರ ಜಾರಿ ಮಾಡಿರುವ ನೋಟಿಸ್ ನಲ್ಲಿ, ಭಾರತ ಸರ್ಕಾರ 1961ರ ವಿಯೆನ್ನಾ ಒಪ್ಪಂದವನ್ನು ಉಲ್ಲಂಘನೆ ಮಾಡಿದ್ದು, ಕೂಡಲೇ ಭಾರತೀಯ ರಾಯಭಾರಿಗಳು ಪಾಕಿಸ್ತಾನ ತೊರೆಯುವಂತೆ ತಿಳಿಸಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಗೂಡಚಾರ ನಡೆಸುತ್ತಿರುವ ಪಾಕಿಸ್ತಾನ ರಾಯಭಾರಿಗಳಿಗೆ ದೇಶ ತೊರೆಯುವಂತೆ ಗಡುವು ನೀಡುತ್ತಿದ್ದಂತೆಯೇ ಅತ್ತ ಪಾಕಿಸ್ತಾನ ವಿದೇಶಾಂಗ ಕಾರ್ಯದರ್ಶಿ ಐಜಾಜ್ ಅಹ್ಮದ್ ಚೌಧರಿ ಅವರು, ಇಸ್ಲಾಮಾಬಾದ್ ನಲ್ಲಿರುವ ಭಾರತೀಯ ದೂತ ಅಧಿಕಾರಿ ಗೌತಮ್ ಬಂಬಾವಾಲೆಗೆ ನೋಟಿಸ್ ಮಾಡಿದ್ದಾರೆ. ಸುರ್ಜಿತ್ ಸಿಂಗ್ ಅವರು ಪಾಕಿಸ್ತಾನದಲ್ಲಿ ಸ್ವೀಕೃತವಲ್ಲದ ಅಧಿಕಾರಿಯಾಗಿದ್ದು 48 ಗಂಟೆಯೊಳಗಾಗಿ ಪಾಕಿಸ್ತಾನ ತೊರೆಯುವಂತೆ ಸೂಚಿಸಿದ್ದಾರೆಂದು ಹೇಳಲಾಗುತ್ತಿದೆ.

ಪಾಕಿಸ್ತಾನ ರಾಜತಾಂತ್ರಿಕ ಕಚೇರಿ ಮಾಹಿತಿ ನೀಡಿರುವ ಪ್ರಕಾರ ಸುರ್ಜಿತ್ ಸಿಂಗ್ ಅವರ ಮೇಲೆ ಪಾಕಿಸ್ತಾನ ಸರ್ಕಾರ ಬೇಹುಗಾರಿಕೆ ಆರೋಪವನ್ನು ಮಾಡಿದೆ ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com