ಹಿಲರಿ ಕ್ಲಿಂಟನ್ ಅವರು ಅಧ್ಯಕ್ಷರಾದರೆ ಲಿಂಗ ತಾರತಮ್ಯ ಎದುರಿಸಬೇಕಾಗಬಹುದು: ಬರಾಕ್ ಒಬಾಮಾ

ಹಿಲರಿ ಕ್ಲಿಂಟನ್ ಅವರು ದೇಶದ ಮೊದಲ ಮಹಿಳಾ ರಾಷ್ಟ್ರಾಧ್ಯಕ್ಷರಾಗಿ ಆಯ್ಕೆಯಾದರೆ ಅವರ ಕೆಲವು...
ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮಾ (ಸಂಗ್ರಹ ಚಿತ್ರ)
ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮಾ (ಸಂಗ್ರಹ ಚಿತ್ರ)
ವಾಷಿಂಗ್ಟನ್: ಹಿಲರಿ ಕ್ಲಿಂಟನ್ ಅವರು ದೇಶದ ಮೊದಲ ಮಹಿಳಾ ರಾಷ್ಟ್ರಾಧ್ಯಕ್ಷರಾಗಿ ಆಯ್ಕೆಯಾದರೆ ಅವರ ಕೆಲವು ವಿರೋಧಿಗಳು ಭಾವೋದ್ವೇಕಕ್ಕೆ ಒಳಗಾಗಿ ಅವರನ್ನು ಕೀಳಾಗಿ ನೋಡಬಹುದು ಎಂದು ಅಧ್ಯಕ್ಷ ಬರಾಕ್ ಒಬಾಮಾ ಭವಿಷ್ಯ ನುಡಿದಿದ್ದಾರೆ. 
ತಾವು ಅಧ್ಯಕ್ಷರಾದಾಗ ಕೆಲವರು ತಮ್ಮನ್ನು ಅಮೆರಿಕದಲ್ಲಿ ಹುಟ್ಟಿದವನಲ್ಲ ಎಂದು ಟೀಕೆ ಮಾಡಿದ್ದರು. ಅದೇ ರೀತಿ ಕ್ಲಿಂಟನ್ ಅವರು ಆಯ್ಕೆಯಾದರೆ ಲಿಂಗ ತಾರತಮ್ಯ ಎದುರಿಸಬೇಕಾಗಬಹುದು ಎಂದು ಹೇಳಿದ್ದಾರೆ. ಅವರು ''ಫುಲ್ ಫ್ರಂಟಲ್ ವಿತ್ ಸಮಂತ ಬಿ'' ಎಂಬ ಸಂದರ್ಶನದಲ್ಲಿ ಭಾಗವಹಿಸಿದ್ದರು.
ಕ್ಲಿಂಟನ್ ಅವರಿಗೆ ಸಮನಾದುದು ಎಂದರೆ ಅವರು ತುಂಬಾ ಆಯಾಸಗೊಂಡಿದ್ದಾರೆ, ಅವರು ಮೂಡಿಯಾಗಿದ್ದು,  ತುಂಬಾ ಉದ್ವೇಗಿ ಎಂದು ಸಂದೇಶದಲ್ಲಿ ಹೇಳಿದ್ದಾರೆ. ರಾಜಕೀಯದಲ್ಲಿ ಎರಡು ಮುಖಗಳಿದ್ದು, ಇಲ್ಲಿ ಪುರುಷರು ಮಹಾತ್ವಾಕಾಂಕ್ಷಿಗಳಾಗಿದ್ದರೆ ಅವರನ್ನು ಹೊಗಳುತ್ತಾರೆ, ಅದೇ ಮಹಿಳೆಯರನ್ನು ತೆಗಳುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.
ತಮ್ಮ 18 ವರ್ಷದ ಪುತ್ರಿ ಮಲಿಯಾ ಒಬಾಮಾ ಇದೇ ಮೊದಲ ಬಾರಿಗೆ ಚುನಾವಣೆಯಲ್ಲಿ ಮತ ಚಲಾಯಿಸಿದ್ದಾಳೆ. ಆದರೆ ರಿಪಬ್ಲಿಕನ್ ಪಕ್ಷದವರು ಜನರು ಮತ ಹಾಕುವುದನ್ನು ಅದರಲ್ಲೂ ಯುವಕರು ಮತ ಚಲಾಯಿಸುವುದನ್ನು ತಡೆಯುವುದು ತಮಗೆ ಸಿಟ್ಟು ತರಿಸುತ್ತದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com