ಭಾರತದ ಜೊತೆಗೆ ಗಟ್ಟಿಯಾದ ಸಂಬಂಧ ಬೆಳೆಸಲು ಚೀನಾ ಬದ್ಧ: ಕ್ಸಿ ಜಿನ್ ಪಿಂಗ್

ಬಾಂಧವ್ಯದ ವೃದ್ಧಿಗೆ, ದ್ವಿಪಕ್ಷೀಯ ಸಹಕಾರ ಸಂಬಂಧ ಸುಧಾರಣೆಗೆ ಭಾರತದ ಜೊತೆ ಕೆಲಸ ಮಾಡಲು ಚೀನಾ ಬದ್ಧವಾಗಿದೆ ಎಂದು ಚೀನಾ ಪ್ರಧಾನಿ...
ಚೀನಾದ ಹಾಂಗ್ ಝೌ ನಲ್ಲಿ ನಡೆದ ದ್ವಿಪಕ್ಷೀಯ ಸಭೆಯಲ್ಲಿ ಭಾರತ ಪ್ರಧಾನಿ ನರೇಂದ್ರ ಮೋದಿ, ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಮತ್ತು ಇತರ ಅಧಿಕಾರಿಗಳು(ಫೋಟೋ ಕೃಪೆ-ಪಿಐಬಿ)
ಚೀನಾದ ಹಾಂಗ್ ಝೌ ನಲ್ಲಿ ನಡೆದ ದ್ವಿಪಕ್ಷೀಯ ಸಭೆಯಲ್ಲಿ ಭಾರತ ಪ್ರಧಾನಿ ನರೇಂದ್ರ ಮೋದಿ, ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಮತ್ತು ಇತರ ಅಧಿಕಾರಿಗಳು(ಫೋಟೋ ಕೃಪೆ-ಪಿಐಬಿ)
ಹಾಂಗ್ ಝೌ: ಬಾಂಧವ್ಯದ ವೃದ್ಧಿಗೆ, ದ್ವಿಪಕ್ಷೀಯ ಸಹಕಾರ ಸಂಬಂಧ ಸುಧಾರಣೆಗೆ ಭಾರತದ ಜೊತೆ ಕೆಲಸ ಮಾಡಲು ಚೀನಾ ಬಯಸುತ್ತದೆ ಎಂದು ಚೀನಾ ಪ್ರಧಾನಿ ಕ್ಸಿ ಜಿನ್ ಪಿಂಗ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹೇಳಿದ್ದಾರೆ. ಅನೇಕ ವಿಷಯಗಳಲ್ಲಿ ಭಾರತ-ಚೀನಾ ಮಧ್ಯೆ ಸಹಕಾರವಿದ್ದರೂ ಕೂಡ ಉಭಯ ನಾಯಕರು ಇಂದಿಲ್ಲಿ ಮಾತುಕತೆ ನಡೆಸಿದರು.
ಚೀನಾ ಭಾರತದೊಂದಿಗೆ ಸಂಬಂಧ ಸುಧಾರಣೆ ಮತ್ತು ಸಹಕಾರ ನಿಟ್ಟಿನಲ್ಲಿ ಕೆಲಸ ಮಾಡಲು ಬಯಸುತ್ತದೆ ಎಂದು ಉಭಯ ನಾಯಕರ ಸಭೆಯ ವೇಳೆ ಚೀನಾ ಪ್ರಧಾನಿ ತಿಳಿಸಿದ್ದಾರೆ ಎಂದು ಚೀನಾದ ಕ್ಸಿನುವಾ ಸುದ್ದಿ ಸಂಸ್ಥೆ ಉಲ್ಲೇಖಿಸಿದೆ.
ಜಿ20 ಶೃಂಗಸಭೆ ಹಾಗೂ ಮುಂದಿನ ತಿಂಗಳು ಬ್ರಿಕ್ಸ್ ನಾಯಕರ ಸಭೆಗಿಂತ ಮೊದಲು ಇಬ್ಬರೂ ನಾಯಕರು ಭೇಟಿಯಾದರು.
ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಗಳನ್ನು ಪಟ್ಟಿ ಮಾಡುವುದು ಸೇರಿದಂತೆ ಪರಮಾಣು ಪೂರೈಕೆ ಗುಂಪಿಗೆ ಭಾರತದ ಸದಸ್ಯತ್ವಕ್ಕೆ ಚೀನಾ ಅಡ್ಡಗಾಲು ಹಾಕಿದ್ದು, ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಚೀನಾ-ಪಾಕಿಸ್ತಾನ ಕಾರಿಡಾರ್ ನಿರ್ಮಾಣಕ್ಕೆ 46 ಬಿಲಿಯನ್ ಡಾಲರ್ ಗಳ ಯೋಜನೆಗೆ ಆಕ್ಷೇಪ ವ್ಯಕ್ತಪಡಿಸಿದ್ದು ಮೊದಲಾದ ಭಿನ್ನಾಭಿಪ್ರಾಯಗಳ ನಡುವೆಯೂ ಇಂದು ಭಾರತ ಪ್ರಧಾನಿ ಮತ್ತು ಚೀನಾ ಅಧ್ಯಕ್ಷರು ಮಾತುಕತೆ ನಡೆಸಿದರು.
ರಕ್ಷಣಾ ವಲಯದಲ್ಲಿ ಭಾರತ-ಅಮೆರಿಕ ಸಂಬಂಧ ವೃದ್ಧಿಯಾಗುತ್ತಾ, ಬಲಗೊಳ್ಳುತ್ತಿರುವ ಸಂದರ್ಭದಲ್ಲಿ, ಎರಡೂ ದೇಶಗಳು ಒಪ್ಪಂದದ ಜಾರಿ ವಿನಿಮಯ ಸುತ್ತೋಲೆ(ಎಲ್ಇಎಂಒಎ)ಗೆ ಸಹಿ ಹಾಕಿರುವ ಸಂದರ್ಭದಲ್ಲಿ, ಮಿಲಿಟರಿ ಸಹಕಾರ ಬಲಗೊಳ್ಳುತ್ತಿರುವುದು ಸಹಜವಾಗಿ ಚೀನಾಕ್ಕೆ ಆತಂಕ ತಂದೊಡ್ಡಿದೆ ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಾರೆ.
ನಿನ್ನೆ ರಾತ್ರಿ ಹಾಂಗ್ ಝೌಗೆ ಬಂದಿಳಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಆಸ್ಟ್ರೇಲಿಯಾದ ಪ್ರಧಾನಿ ಮಾಲ್ಕೋಮ್ ಟರ್ನ್ ಬುಲ್ ಮತ್ತು ಸೌದಿ ಅರೇಬಿಯಾ ಉಪ ಪ್ರಧಾನಿ ಮೊಹಮ್ಮದ್ ಅವರ ಜೊತೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.
ನೀತಿ ಸಮನ್ವಯ ಬಲಪಡಿಸುವಿಕೆ ಮತ್ತು ಬೆಳವಣಿಗೆಗಾಗಿ ಒಂದು ಹೊಸ ಮಾರ್ಗ ಕುರಿತು ನಡೆಯುತ್ತಿರುವ ಎರಡು ದಿನಗಳ ಜಿ20 ಶೃಂಗಸಭೆಯ ಸಮಾರೋಪ ಕಾರ್ಯಕ್ರಮದಲ್ಲಿ ಅವರು ನಾಳೆ ಭಾಗವಹಿಸಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com