ಭದ್ರತಾ ಸಿಬ್ಬಂದಿ ವೇಷ ಧರಿಸಿ ಮನಬಂದಂತೆ ಜನರಿಗೆ ಚಾಕು ಇರಿದ ದುಷ್ಕರ್ಮಿ

ಭದ್ರತಾ ಸಿಬ್ಬಂದಿಯ ವೇಷ ಧರಿಸಿ ಬಂದಿದ್ದ ದುಷ್ಕರ್ಮಿಯೊಬ್ಬ ಸಿಕ್ಕ ಸಿಕ್ಕ ಜನರಿಗೆ ಮನಬಂದಂತೆ ಚಾಕುವಿನಿಂದ ಇರಿದಿರುವ ಘಟನೆಯೊಂದು ಮಿನ್ನೇಸೋಟ ಮಾಲ್ ನಲ್ಲಿ ಶನಿವಾರ...
ಮಾಲ್ ನಲ್ಲಿನ ಪ್ರವೇಶ ದ್ವಾರದಲ್ಲಿ ನಿಂತಿರುವ ಜನ
ಮಾಲ್ ನಲ್ಲಿನ ಪ್ರವೇಶ ದ್ವಾರದಲ್ಲಿ ನಿಂತಿರುವ ಜನ
Updated on: 

ನ್ಯೂಯಾರ್ಕ್: ಭದ್ರತಾ ಸಿಬ್ಬಂದಿಯ ವೇಷ ಧರಿಸಿ ಬಂದಿದ್ದ ದುಷ್ಕರ್ಮಿಯೊಬ್ಬ ಸಿಕ್ಕ ಸಿಕ್ಕ ಜನರಿಗೆ ಮನಬಂದಂತೆ ಚಾಕುವಿನಿಂದ ಇರಿದಿರುವ ಘಟನೆಯೊಂದು ಮಿನ್ನೇಸೋಟ ಮಾಲ್ ನಲ್ಲಿ ಶನಿವಾರ ತಡರಾತ್ರಿ ನಡೆದಿದೆ.

ಘಟನೆ ವೇಳೆ 8 ಮಂದಿಗೆ ಗಾಯವಾಗಿದ್ದು, ಸೇಂಟ್ ಕ್ಲೌಡ್ ಆಸ್ಪತ್ರೆಗೆ ಗಾಯಾಳುಗಳನ್ನು ದಾಖಲು ಮಾಡಲಾಗಿದೆ. ಯಾವುದೇ ಪ್ರಾಣಹಾನಿಗಳು ಸಂಭವಿಸಿಲ್ಲ ಎಂದು ಸೇಂಟ್ ಕ್ಲೌಡ್ ಪೊಲೀಸ್ ಮುಖ್ಯಸ್ಥ ಬ್ಲೇರ್ ಆ್ಯಂಡರ್ಸನ್ ಅವರು ಹೇಳಿದ್ದಾರೆ.

ಘಟನೆ ವೇಳೆ ಪೊಲೀಸ್ ಅಧಿಕಾರಿಯೊಬ್ಬರು ಕರ್ತವ್ಯದಲ್ಲಿದ್ದರು. ಈ ವೇಳೆ ಭದ್ರತಾ ಸಿಬ್ಬಂದಿಯ ವೇಷ ಧರಿಸಿ ಚಾಕು ಹಿಡಿದು ಓಡಾಡುತ್ತಿದ್ದ ಶಂಕಿತ ವ್ಯಕ್ತಿಗೆ ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ. ದಾಳಿ ಹಿಂದಿರುವ ಉದ್ದೇಶ ಈ ವರೆಗೂ ತಿಳಿದುಬಂದಿಲ್ಲ. ಪ್ರಕರಣವನ್ನು ತನಿಖೆ ನಡೆಸಲಾಗುತ್ತಿದೆ. ಹಲ್ಲೆ ನಡೆಸಿದ ವ್ಯಕ್ತಿ ಈ ಹಿಂದೆ ಕೂಡ ಸಾಕಷ್ಟು ಸಂಚಾರ ನಿಯಮವನ್ನು ಉಲ್ಲಂಘಿಸಿದ್ದ, ಆತನ ಫೇಸ್ ಬುಕ್ ನ್ನು ಪರಿಶೀಲಿಸಲಾಗುತ್ತಿದೆ. ತನಿಖೆಗೆ ಇದು ಸಹಾಯಕವಾಗಲಿದೆ ಎಂದು ಹೇಳಿದ್ದಾರೆ.

ಘಟನೆ ಹಿಂದ ಉಗ್ರ ಸಂಘಟನೆಗಳ ಕೈವಾಡವಿದೆ ಎಂಬುದಾಗಿ ಹೇಳಲು ಸಾಧ್ಯವಿಲ್ಲ. ತನಿಖೆ ನಂತರವಷ್ಟೇ ಮಾಹಿತಿ ತಿಳಿದುಬರಲಿದೆ. ಪ್ರಸ್ತುತ ಮಾಲ್ ನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ. ಮಾಲ್ ನಲ್ಲಿದ್ದ ಜನರನ್ನು ಬಿಡುಗಡೆ ಮಾಡಲಾಗಿದೆ. ವಿಡಿಯೋಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com