

ನ್ಯೂಯಾರ್ಕ್ : ಚಿನ್ನದ ಟಾಯ್ಲೆಟ್ ಬಳಸಲು ನ್ಯೂಯಾರ್ಕ್ ನ ವಸ್ತು ಸಂಗ್ರಹಾಲಯ ವೊಂದು ಪ್ರವಾಸಿಗರಿಗೆ ಅವಕಾಶ ಮಾಡಿಕೊಟ್ಟಿದೆ.
18 ಕ್ಯಾರೆಟ್ ಚಿನ್ನ ಬಳಸಿ ತಯಾರಿಸುವ ಈ ಚಿನ್ನದ ಕಮೋಡ್ ನ್ಯೂಯಾರ್ಕ್ ನ ಗಗ್ಗೆನ್ಹಿಮ್ ವಸ್ತು ಸಂಗ್ರಹಾಲಯದಲ್ಲಿ ಚಿನ್ನದ ಶೌಚಾಲಯ ಬಳಸಲು ಪ್ರವಾಸಿಗರಿಗೆ ಅವಕಾಶ ನೀಡಲಾಗಿದೆ.
ಇದು ಅಪ್ಪಟ ಬಂಗಾರದ ಟಾಯ್ಲೆಟ್, ಮಿರ ಮಿರ ಮಿನುಗುತ್ತಿದೆ. ಮ್ಯೂಸಿಯಂನ ನಾಲ್ಕನೇ ಮಹಡಿಯ ಸ್ನಾನದ ಮನೆಯಲ್ಲಿ ಇದನ್ನು ಇಡಲಾಗಿದ್ದು, ಪ್ರವಾಸಿಗರಿಗೆ ಮಲ, ಮೂತ್ರ ವಿಸರ್ಜಿಸಲು ಅವಕಾಶ ಕಲ್ಪಿಸಲಾಗಿದೆ.
ಇಟಲಿ ಮೂಲದ, ವಿಶ್ವಪ್ರಸಿದ್ಧ ಕಲಾವಿದ ಮಾರಿಯೊ ಕೇಟ್ಲನ್ ಈ ಶೌಚಪೀಠ ವಿನ್ಯಾಸಗೊಳಿಸಿದ್ದಾರೆ. ಅಮೆರಿಕದ ಕಲಾ ಗ್ಯಾಲರಿಯಲ್ಲಿರುವ ದುಬಾರಿ ಶೌಚಾಲಯವನ್ನು ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಿರುವುದು ಇದೇ ಮೊದಲು. ಈ ಶೌಚಗೃಹದ ಹೊರಗೆ 24 ಗಂಟೆಯೂ ಭದ್ರತಾ ಸಿಬ್ಬಂದಿ ಕಣ್ಗಾವಲು ಇದೆ.