ಮೊದಲ ಅಧ್ಯಕ್ಷೀಯ ಚರ್ಚೆಗೂ ಮುಂಚೆ 'ಚೆನ್ನಾಗಿ ನಿದ್ದೆ ಮಾಡಿ ಹಿಲರಿ' ಎಂದು ಕಾಲೆಳೆದ ಟ್ರಂಪ್
ಮುಂದಿನ ವಾರ ನಡೆಯಬೇಕಿರುವ ಮೊದಲ ಅಧ್ಯಕ್ಷೀಯ ಚರ್ಚೆಗೂ ಮುಂಚಿತವಾಗಿ "ಚೆನ್ನಾಗಿ ಮಲಗಿ ಹಿಲರಿ" ಎಂದು ಡೆಮಾಕ್ರಟಿಕ್ ಅಧ್ಯಕ್ಷೀಯ ಅಭ್ಯರ್ಥಿ ಹಿಲರಿ ಕ್ಲಿಂಟನ್ ಅವರನ್ನು ರಿಪಬ್ಲಿಕನ್ ಅಭ್ಯರ್ಥಿ
ಅಮೆರಿಕಾ ಅಧ್ಯಕ್ಷೀಯ ರಿಪಬ್ಲಿಕನ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್
ವಾಷಿಂಗ್ಟನ್: ಮುಂದಿನ ವಾರ ನಡೆಯಬೇಕಿರುವ ಮೊದಲ ಅಮೆರಿಕಾ ಅಧ್ಯಕ್ಷೀಯ ಚುನಾವಣಾ ಚರ್ಚೆಗೂ ಮುಂಚಿತವಾಗಿ "ಚೆನ್ನಾಗಿ ಮಲಗಿ ಹಿಲರಿ" ಎಂದು ಡೆಮಾಕ್ರಟಿಕ್ ಅಧ್ಯಕ್ಷೀಯ ಅಭ್ಯರ್ಥಿ ಹಿಲರಿ ಕ್ಲಿಂಟನ್ ಅವರನ್ನು ರಿಪಬ್ಲಿಕನ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಲೇವಡಿ ಮಾಡಿದ್ದಾರೆ.
ಅಧ್ಯಕ್ಷೀಯ ಚುನಾವಣೆಗೆ ಇನ್ನು ಎರಡೇ ತಿಂಗಳು ಬಾಕಿಯಿದ್ದು, ಕ್ಲಿಂಟನ್ ನೆನ್ನೆ ಯಾವುದೇ ಸಾರ್ವಜನಿಕ ಸಭೆಯಲ್ಲಿ ಕಾಣಿಸಿಕೊಂಡಿಲ್ಲ. ಇದನ್ನೇ ಪರಿಹಾಸ್ಯ ಮಾಡಿರುವ 70 ವರ್ಷದ ಟ್ರಂಪ್ "ಅವರು ಮತ್ತೊಂದು ದಿನ ರಜ ತೆಗೆದುಕೊಂಡಿದ್ದಾರೆ" ಎಂದಿದ್ದಾರೆ.
"ಹಿಲರಿ ಕ್ಲಿಂಟನ್ ಮತ್ತೊಂದು ದಿನ ರಜ ತೆಗೆದುಕೊಂಡಿದ್ದಾರೆ. ಅವರಿಗೆ ವಿಶ್ರಾಂತಿ ಬೇಕು. ಹಿಲರಿ ಚೆನ್ನಾಗಿ ನಿದ್ದೆ ಮಾಡಿ - ಚರ್ಚೆಯಲ್ಲಿ ನಿಮ್ಮನ್ನು ನೋಡುತ್ತೇನೆ!" ಎಂದು ಟ್ರಂಪ್ ಟ್ವೀಟ್ ಮಾಡಿದ್ದಾರೆ.
ಕೆಲವು ದಿನಗಳ ಹಿಂದೆ ನ್ಯುಮೋನಿಯಾ ರೋಗದಿಂದ ಬಳಲುತ್ತಿದ್ದ 68 ವರ್ಷದ ಹಿಲರಿ ಅವರನ್ನು ಟ್ರಂಪ್ ಹಾಸ್ಯ ಮಾಡುತ್ತಿರುವದು ಇದೆ ಮೊದಲೇನಲ್ಲ.
ಅಧ್ಯಕ್ಷೀಯ ಅಭ್ಯರ್ಥಿಗಳ ಚರ್ಚೆಗಳ ಮೊದಲ ಸರಣಿ ನ್ಯೂಯಾರ್ಕ್ ನಲ್ಲಿ ಸೆಪ್ಟೆಂಬರ್ 26 ರಿಂದ ಪ್ರಾರಂಭವಾಗಲಿದೆ. ಈ ಮೂರೂ ಚರ್ಚೆಗಳಲ್ಲಿ ಮಾಡುವ ಭಾಷಣ ಅಧ್ಯಕ್ಷೀಯ ಚುನಾವಣೆಯಲ್ಲಿ ಆಯ್ಕೆಗೆ ಪ್ರಮುಖ ಪರಿಣಾಮ ಬೀರುತ್ತದೆ. ನಂತರದ ಚರ್ಚೆಗಳು ಅಕ್ಟೋಬರ್ 9 ಮತ್ತು ಅಕ್ಟೋಬರ್ 19 ರಂದು ನಡೆಯಲಿವೆ.