'ಪಾಕ್, ಸೌದಿ, ಇರಾನ್ ನಂತಹ ಇಸ್ಲಾಮಿಕ್ ರಾಷ್ಟ್ರಗಳಿಂದ ಭಯೋತ್ಪಾದನೆಗೆ ಬೆಂಬಲ'

ಇಸ್ಲಾಂ ಗುರುತನ್ನು ಹೊಂದಿರುವ ರಾಷ್ಟ್ರಗಳಾದ ಇರಾನ್, ಪಾಕಿಸ್ತಾನ, ಸೌದಿ ಅರೇಬಿಯಾ ಆಂತರಿಕವಾಗಿ ಭಯೋತ್ಪಾದಕ ಸಂಘಟನೆಗಳಾದ ಇಸೀಸ್, ಹಮಾಸ್, ಅಲ್- ಖೈದಾ ಸೇರಿದಂತೆ ಹಲವು ಭಯೋತ್ಪಾದಕ ಸಂಘಟನೆಗಳಿಗೆ ಬೆಂಬಲ ನೀಡುತ್ತಿವೆ
ಭಯೋತ್ಪಾದನೆ
ಭಯೋತ್ಪಾದನೆ
Updated on: 

ವಾಷಿಂಗ್ ಟನ್: ಇಸ್ಲಾಂ ಗುರುತನ್ನು ಹೊಂದಿರುವ ರಾಷ್ಟ್ರಗಳಾದ ಇರಾನ್, ಪಾಕಿಸ್ತಾನ, ಸೌದಿ ಅರೇಬಿಯಾ ಆಂತರಿಕವಾಗಿ ಭಯೋತ್ಪಾದಕ ಸಂಘಟನೆಗಳಾದ ಇಸೀಸ್, ಹಮಾಸ್, ಅಲ್- ಖೈದಾ ಸೇರಿದಂತೆ ಹಲವು ಭಯೋತ್ಪಾದಕ ಸಂಘಟನೆಗಳಿಗೆ ಬೆಂಬಲ ನೀಡುತ್ತಿವೆ ಎಂದು ಅಮೆರಿಕದ ಇಸ್ಲಾಮಿಕ್ ವೇದಿಕೆಯ ನಾಯಕ ಝುಹ್ಡಿ ಜೆಸ್ಸೆರ್ ಅಮೆರಿಕ ಸಂಸದರಿಗೆ ತಿಳಿಸಿದ್ದಾರೆ.

ಇರಾನ್, ಪಾಕಿಸ್ತಾನ, ಸೌದಿ ಅರೇಬಿಯಾದ ರಾಜಕೀಯ ಚಳುವಳಿಗಳು ಹಾಗೂ ಇಸ್ಲಾಮಿಕ್ ಅಸ್ತಿತ್ವ ಭಯೋತ್ಪಾದನೆಗೆ ಒಳಗಿನಿಂದಲೇ ಬೆಂಬಲ ನೀಡುತ್ತಿದೆ ಎಂದು ಆರೋಪಿಸಿದ್ದು, ಇಸ್ಲಾಮ್ ಧರ್ಮದ ರಾಜಕೀಯದಿಂದ ಉಂಟಾಗುವ ಅಪಾಯವನ್ನು ನಿರ್ಲಕ್ಷಿಸುವುದು ಎಷ್ಟು ಅವಿವೇಕವೋ, ಇಡೀ ಮುಸ್ಲಿಂ ಸಮುದಾಯವನ್ನು ಒಬ್ಬಂಟಿಯಾಗಿಸುವುದು ಸಹ ಅಷ್ಟೇ ಅವಿವೇಕ ಎಂದು ಹೇಳಿದ್ದಾರೆ.

ಸೌದಿ, ಪಾಕಿಸ್ತಾನ, ಇರಾನ್ ದೇಶಗಳು ಇಸ್ಲಾಮ್ ನ ಆಡಳಿತ ನಡೆಸುವುದಕ್ಕಾಗಿ ಭಯೋತ್ಪಾದನೆಯನ್ನು ಬಳಸಿಕೊಳ್ಳುತ್ತಿದೆ ಎಂದು ಅಮೆರಿಕ ಸಂಸದರಿಗೆ ಅಲ್ಲಿನ ಇಸ್ಲಾಮಿಕ್ ವೇದಿಕೆಯ ನಾಯಕ  ಝುಹ್ಡಿ ಜೆಸ್ಸೆರ್ ತಿಳಿಸಿದ್ದಾರೆ. ಇನ್ನು ಭಯೋತ್ಪಾದಕ ಸಂಘಟನೆಗಳು ಹೆಚ್ಚುತ್ತಿರುವುದರ ಬಗ್ಗೆ ಅಮೆರಿಕ ಸಂಸದರೂ ಸಹ ಆತಂಕ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com