ಪಾಕ್ ನಡೆಸುತ್ತಿರುವ ದೌರ್ಜನ್ಯಕ್ಕೆ ಬೆಂಬಲ: ಚೀನಾ ವಿರುದ್ಧ ಬಲೂಚ್ ಹೋರಾಟಗಾರರ ಪ್ರತಿಭಟನೆ

ಬಲೂಚಿಸ್ತಾನದಲ್ಲಿ ಪಾಕಿಸ್ತಾನ ನಡೆಸುತ್ತಿರುವ ದೌರ್ಜನ್ಯಗಳಿಗೆ ಚೀನಾ ಸಹ ಬೆಂಬಲ ನೀಡುತ್ತಿದೆ ಎಂದು ಆರೋಪಿಸಿ ಬಲೂಚಿಸ್ತಾನ ಹೋರಾಟಗಾರರು, ಲಂಡನ್ ನಲ್ಲಿರುವ ಚೀನಾ ರಾಯಭಾರ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ.
ಚೀನಾ ವಿರುದ್ಧ ಬಲೂಚ್ ಹೋರಾಟಗಾರರ ಪ್ರತಿಭಟನೆ
ಚೀನಾ ವಿರುದ್ಧ ಬಲೂಚ್ ಹೋರಾಟಗಾರರ ಪ್ರತಿಭಟನೆ

ಲಂಡನ್: ಬಲೂಚಿಸ್ತಾನದಲ್ಲಿ ಪಾಕಿಸ್ತಾನ ನಡೆಸುತ್ತಿರುವ ದೌರ್ಜನ್ಯಗಳಿಗೆ ಚೀನಾ ಸಹ ಬೆಂಬಲ ನೀಡುತ್ತಿದೆ ಎಂದು ಆರೋಪಿಸಿ ಬಲೂಚಿಸ್ತಾನ ಹೋರಾಟಗಾರರು, ಲಂಡನ್ ನಲ್ಲಿರುವ ಚೀನಾ ರಾಯಭಾರ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ.

ಬಲೂಚ್ ನ್ಯಾಷನಲಿಸ್ಟ್ ನ ಹರ್ಬಿಯಾರ್ ಮರ್ರಿ ಸೇರಿದಂತೆ ಹಲವು ಬಲೂಚಿಸ್ತಾನ ಹೋರಾಟಗಾರರು ಅಕ್ಟೊಬರ್ 1 ರ ವರೆಗೆ ರಾಯಭಾರಿ ಕಚೇರಿ ಎದುರು ಚೀನಾ ವಿರುದ್ಧ ಪ್ರತಿಭಟನೆ ನಡೆಸುವುದಕ್ಕೆ ಅನುಮತಿ ಪಡೆದಿದ್ದಾರೆ ಎಂದು ಚೀನಾದ ಮಾಧ್ಯಮವೊಂದು ವರದಿ ಮಾಡಿದೆ. ಬಲೂಚಿಸ್ತಾನದಲ್ಲಿ ಪಾಕಿಸ್ತಾನ ನಡೆಸುತ್ತಿರುವ ದೌರ್ಜನ್ಯಗಳಿಗೆ ಬೆಂಬಲ ನೀಡುತ್ತಿರುವ ಚೀನಾ ವಿರುದ್ಧ 6 ದಿನಗಳು ಪ್ರತಿಭಟನೆ ನಡೆಸುತ್ತೇವೆ ಎಂದು ಫೈಜ್ ಮುಹಮ್ಮದ್ ಬಲೂಚ್ ಹೇಳಿದ್ದಾರೆ. ಬಲೂಚಿಸ್ತಾನಾದ ಹೋರಾಟಗಾರರ ಎಚ್ಚರಿಕೆ, ವಿರೋಧದ ಹೊರತಾಗಿಯೂ ಚೀನಾ ಬಲೂಚ್ ನ ಸಂಪನ್ಮೂಲಗಳನ್ನು ಎಗ್ಗಿಲ್ಲದೆ ಬಳಸಿಕೊಳ್ಳುತ್ತಿದೆ ಎಂದು ಫೈಜ್ ಮುಹಮ್ಮದ್ ಆರೋಪಿಸಿದ್ದಾರೆ. ಇದೆ ವೇಳೆ ಚೀನಾ ಬಲೂಚಿಸ್ಥಾನದ್ಲಲಿ ನಿರ್ಮಿಸುತ್ತಿರುವ ಚೀನಾ ಪಾಕಿಸ್ತಾನ ಎಕನಾಮಿಕ್ ಕಾರಿಡಾರ್ ನ್ನು ಸಕ ಬಲೂಚಿಸ್ತಾನದ ಹೋರಾಟಗಾರರು ವಿರೋಧಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com