ಭಾರತದಲ್ಲಿ ಉತ್ಪಾದನಾ ಘಟಕಗಳನ್ನು ಸ್ಥಾಪಿಸುತ್ತಿರುವ ಚೀನಾ ಕಂಪನಿಗಳು, ನೆರೆ ರಾಷ್ಟ್ರಕ್ಕೆ ಉದ್ಯೋಗ ಕಡಿತದ ಆತಂಕ!

ಚೀನಾದ ಸರ್ಕಾರಿ ಸ್ವಾಮ್ಯದ ಮಾಧ್ಯಮ, ಚೀನಾ ಸಂಸ್ಥೆಗಳು ಭಾರತದಲ್ಲಿ ಉತ್ಪಾದನಾ ಘಟಕಗಳನ್ನು ಪ್ರಾರಂಭಿಸುತ್ತಿರುವುದರ ಬಗ್ಗೆ ಆತಂಕ ವ್ಯಕ್ತಪಡಿಸಿದೆ.
ಭಾರತದಲ್ಲಿ ಉತ್ಪಾದನಾ ಘಟಕಗಳನ್ನು ಸ್ಥಾಪಿಸುತ್ತಿರುವ ಚೀನಾ ಕಂಪನಿಗಳು, ನೆರೆ ರಾಷ್ಟ್ರಕ್ಕೆ ಉದ್ಯೋಗ ಕಡಿತದ ಆತಂಕ!
ಭಾರತದಲ್ಲಿ ಉತ್ಪಾದನಾ ಘಟಕಗಳನ್ನು ಸ್ಥಾಪಿಸುತ್ತಿರುವ ಚೀನಾ ಕಂಪನಿಗಳು, ನೆರೆ ರಾಷ್ಟ್ರಕ್ಕೆ ಉದ್ಯೋಗ ಕಡಿತದ ಆತಂಕ!

ಬೀಜಿಂಗ್: ಚೀನಾದ ಪ್ರಮುಖ ಟೆಲಿಕಾಂ ಸಂಸ್ಥೆ ಹುವಾಯಿ ಭಾರತದಲ್ಲಿ ಉತ್ಪಾದನಾ ಘಟಕ ಪ್ರಾರಂಭಿಸಿರುವುದರ ಬಗ್ಗೆ ವರದಿ ಪ್ರಕಟಿಸಿರುವ ಚೀನಾದ ಸರ್ಕಾರಿ ಸ್ವಾಮ್ಯದ ಮಾಧ್ಯಮ, ಚೀನಾ ಸಂಸ್ಥೆಗಳು ಭಾರತದಲ್ಲಿ ಉತ್ಪಾದನಾ ಘಟಕಗಳನ್ನು ಪ್ರಾರಂಭಿಸುತ್ತಿರುವುದರ ಬಗ್ಗೆ ಆತಂಕ ವ್ಯಕ್ತಪಡಿಸಿದೆ.

ಚೀನಾ ಕಂಪನಿಗಳು ಉತ್ಪಾದನಾ ಘಟಕವನ್ನು ಭಾರತಕ್ಕೆ ವರ್ಗಾಯಿಸುತ್ತಿರುವುದರಿಂದ ಚೀನಾದಲ್ಲಿ ಉದ್ಯೋಗ ಕಡಿತದ ಸಮಸ್ಯೆ ಎದುರಾಗಲಿದೆ ಎಂದು ಚೀನಾ ಮಾಧ್ಯಮ ಗ್ಲೋಬಲ್ ಟೈಮ್ಸ್ ಆತಂಕ ವ್ಯಕ್ತಪಡಿಸಿದೆ. ಇತ್ತೀಚಿನ ದಿನಗಳಲ್ಲಿ ಚೀನಾ ಕಂಪನಿಗಳು ಭಾರತದಲ್ಲಿ ಉತ್ಪಾದನಾ ಘಟಕಗಳನ್ನು ಪ್ರಾರಂಭಿಸಲು ಆಸಕ್ತಿ ತೋರುತ್ತಿದ್ದು, ಭಾರತ- ಚೀನಾ ನಡುವಿನ ಆರ್ಥಿಕ ಪೈಪೋಟಿ ಮತ್ತಷ್ಟು ಹೆಚ್ಚಲಿದೆ ಎಂದು ಆತಂಕ ವ್ಯಕ್ತಪಡಿಸಿದೆ.

ಹುವಾಯಿ ಭಾರತದಲ್ಲಿ ಉತ್ಪಾದನಾ ಘಟಕ ಪ್ರಾರಂಭಿಸುವುದರ ಪರಿಣಾಮ ಚೀನಾದಲ್ಲಿ ಉದ್ಯೋಗ ಕಡಿತವಾಗಲಿದೆ, ಇದನ್ನೂ ಚೀನಾ ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಗ್ಲೋಬಲ್ ಟೈಮ್ಸ್  ಹೇಳಿದೆ. ಭಾರತದಲ್ಲಿನ ಸ್ಥಿರ ಸರ್ಕಾರ, ಸ್ಥಿರ ಬೆಳವಣಿಗೆ, ಕಡಿಮೆ ಕಾರ್ಮಿಕ ವೆಚ್ಚ ಹಲವು ಅಂತಾರಾಷ್ಟ್ರೀಯ ಹೂಡಿಕೆದಾರರನ್ನು ಆಕರ್ಷಿಸಿದೆ. ಭಾರತದಲ್ಲಿ ಹೂಡಿಕೆ ಮಾಡುವುದಕ್ಕೂ ಮುನ್ನ ಚೀನಾದ ಸಂಸ್ಥೆಗಳು ಅಲ್ಲಿನ ಕಾರ್ಮಿಕ ಕಾನೂನು ಹಾಗೂ ಭಾರತ ಸಂಸ್ಥೆಗಳ ಬಗ್ಗೆ ಅರಿತುಕೊಳ್ಳುವುದು ಒಳಿತು ಎಂದು ಗ್ಲೋಬಲ್ ಟೈಮ್ಸ್ ಚೀನಾ ಸಂಸ್ಥೆಗಳಿಗೆ ಸಲಹೆ ನೀಡಿದೆ.  ಚೀನಾ ಸಂಸ್ಥೆಗಳು ಭಾರತಕ್ಕೆ ಹೋಗುವುದರಿಂದ ಉಂಟಾಗುವ ಪರಿಣಾಮಗಳನ್ನು ಅಂಕಿಅಂಶಗಳ ಸಹಿತ ವಿವರಿಸಿರುವ ಚೀನಾದ ಮಾಧ್ಯಮ ಕಳೆದ ವರ್ಷ ಭಾರತದಲ್ಲಿ ಚೀನಾದ ನೇರ ಬಂಡವಾಳ ಹೂಡಿಕೆ 870 ಮಿಲಿಯನ್ ಡಾಲರ್ ನಷ್ಟಾಗಿದ್ದು 2014 ಕ್ಕಿಂತ ಆರು ಪಟ್ಟು ಹೆಚ್ಚಾಗಿದ್ದು, ಚೀನಾದ ಕಂಪನಿಗಳು ಉತ್ಪಾದನಾ ಘಟಕಗಳನ್ನು ಭಾರತಕ್ಕೆ ಕೊಂಡೊಯ್ದರೆ ಚೀನಾದಲ್ಲಿ ಉದ್ಯೋಗ ಕಡಿತವಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com