ಭಾರತ ಜವಾಬ್ದಾರಿಯುತ ಅಣ್ವಸ್ತ್ರ ರಾಷ್ಟ್ರ, ಪಾಕ್ ಅಸ್ಥಿರ ರಾಷ್ಟ್ರ: ಅಮೆರಿಕ

ಭಾರತದ ಬಗ್ಗೆ ಅಮೆರಿಕ ರಕ್ಷಣಾ ಸಚಿವ ಅಸ್ಟೋನ್‌ ಕಾರ್ಟರ್‌ ಮೆಚ್ಚುಗೆ ವ್ಯಕ್ತಪಡಿಸಿದ್ದು, ಭಾರತ ಜವಾಬ್ದಾರಿಯುತ ಅಣ್ವಸ್ತ್ರ ರಾಷ್ಟ್ರವಾಗಿದೆ. ಆದರೆ ಪಾಕಿಸ್ತಾನ
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ವಾಷಿಂಗ್ ಟನ್: ಭಾರತ- ಪಾಕಿಸ್ತಾನದ ದ್ವಿಪಕ್ಷೀಯ ಸಂಬಂಧ ಹದಗೆಟ್ಟಿದ್ದು, ಅಂತಾರಾಷ್ಟ್ರೀಯ ಸಮುದಾಯದ ಕಣ್ಣು ಭಾರತ- ಪಾಕ್ ಮೇಲಿದೆ, ಇದೇ ವೇಳೆ ಭಾರತದ ಬಗ್ಗೆ ಅಮೆರಿಕ ರಕ್ಷಣಾ ಸಚಿವ ಅಸ್ಟೋನ್‌ ಕಾರ್ಟರ್‌ ಮೆಚ್ಚುಗೆ ವ್ಯಕ್ತಪಡಿಸಿದ್ದು, ಭಾರತ ಜವಾಬ್ದಾರಿಯುತ ಅಣ್ವಸ್ತ್ರ ರಾಷ್ಟ್ರವಾಗಿದೆ. ಆದರೆ ಪಾಕಿಸ್ತಾನದ ಅಣ್ವಸ್ತ್ರ ಇತಿಹಾಸವನ್ನು ಉದ್ವಿಗ್ನತೆಯದ್ದೆಂದು ಹೇಳಿದ್ದಾರೆ.

ಅಮೆರಿಕದ ಉತ್ತರ ಡಕೋಟಾದಲ್ಲಿನ ವಾಯುನೆಲೆಯಲ್ಲಿ ಭಾಗವಹಿಸಿ ಮಾತನಾಡಿದ ಅಮೆರಿಕ ರಕ್ಷಣಾ ಸಚಿವ ಅಸ್ಟೋನ್ ಕಾರ್ಟರ್, ಅಣ್ವಸ್ತ್ರಗಳ ಚಿತ್ರಣ, ವ್ಯಾಪ್ತಿ ಕಳೆದ 25 ವರ್ಷಗಳಲ್ಲಿ ಸಾಕಷ್ಟು ಬದಲಾಗಿದೆ. ಪಾಕಿಸ್ತಾನದ ಅಣ್ವಸ್ತ್ರಗಳು ಉದ್ವಿಗ್ನತೆಯ ಇತಿಹಾಸವನ್ನು ಹೊಂದಿದ್ದರೆ, ಭಾರತ ಜವಾಬ್ದಾರಿಯುತ ಅಣ್ವಸ್ತ್ರ ರಾಷ್ಟ್ರವಾಗಿದೆ ಎಂದು ಹೇಳಿದ್ದಾರೆ.

ಪಾಕಿಸ್ತಾನದ ಅಣ್ವಸ್ತ್ರಗಳು ನೇರವಾಗಿ ಅಮೆರಿಕಾಗೆ ಅಪಾಯಕಾರಿಯಲ್ಲದಿದ್ದರೂ, ಸ್ಥಿರತೆ ನೆಲೆಸುವಂತೆ ಮಾಡಲು ಅಮೆರಿಕ ಪಾಕಿಸ್ತಾನದೊಂದಿಗೆ ಕೆಲಸ ಮಾಡುವುದಾಗಿ ಅಸ್ಟೋನ್ ಕಾರ್ಟರ್ ತಿಳಿಸಿದ್ದಾರೆ. ಅಣ್ವಸ್ತ್ರಗಳನ್ನು ಹೆಚ್ಚಿಸಿಕೊಳ್ಳಲು ಪಾಕಿಸ್ತಾನಕ್ಕೆ ಅಮೆರಿಕ ಹೆಚ್ಚು ಸಹಾಯ ಮಾಡಿಲ್ಲದೆ ಇದ್ದರೂ, ಬೇರೆ ರಾಷ್ಟ್ರಗಳು ಸಹಾಯ ಮಾಡಿವೆ ಎಂದು ಅಸ್ಟೋನ್ ಕಾರ್ಟರ್ ಹೇಳಿದ್ದು, ಚೀನಾ ಅಣ್ವಸ್ತ್ರಗಳ ವಿಚಾರದಲ್ಲಿ ಸ್ವತಃ ವೃತ್ತಿಪರವಾಗಿ ನಡೆದುಕೊಳ್ಳುತ್ತದೆ ಎಂದಿದ್ದಾರೆ. ಇದೇ ವೇಳೆ ಉತ್ತರ ಕೊರಿಯಾ ಎಗ್ಗಿಲ್ಲದೆ ಅಣ್ವಸ್ತ್ರ ಪರೀಕ್ಷೆ ನಡೆಸುತ್ತಿರುವುದರ ಬಗ್ಗೆ ಅಸ್ಟೋನ್ ಕಾರ್ಟರ್ ಆತಂಕ ವ್ಯಕ್ತಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com