
ಇಸ್ಲಾಮಾಬಾದ್: ಭಾರತೀಯ ಯೋಧರು ಮೃತಪಟ್ಟಿರುವುದಕ್ಕೆ ಪಾಕಿಸ್ತಾನ ಸೇನೆ ಬಳಿ ಖಚಿತ ಮಾಹಿತಿಯಿದ್ದು, ಭಾರತ ತನ್ನ ನಷ್ಟವನ್ನು ಮುಚ್ಚಿಡಲು ಯತ್ನಿಸುತ್ತಿದೆ ಎಂದು ಆಂತರಿಕ ಸೇವಾ ಸಾರ್ವಜನಿಕ ಸಂಪರ್ಕ ವಿಭಾಗದ ಮಹಾನಿರ್ದೇಶಕ ಲೆಫ್ಟಿನೆಂಟ್ ಜನರಲ್ ಆಸಿಮ್ ಬಾಜ್ವಾ ಅವರು ಶನಿವಾರ ಹೇಳಿದ್ದಾರೆ.
ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಉಗ್ರರ ನೆಲೆಗಳ ಮೇಲೆ ಭಾರತ ನಡೆಸಿದ ಸೀಮಿತ ದಾಳಿ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ಅಜಾಗರುಕತೆಯಿಂದಾಗಿ ಪಾಕಿಸ್ತಾನ ಸೇನೆ ಗಡಿ ದಾಟಿದಾಕ್ಷಣ ಭಾರತೀಯ ಸೇನೆ ಹೇಗೆ ಉತ್ತರ ನೀಡುತ್ತದೆಯೋ ಹಾಗೆಯೇ ಭಾರತೀಯ ಸೇನೆ ಗಡಿ ದಾಟಿದಾಲೂ ಪಾಕಿಸ್ತಾನ ಸೇನೆ ದಿಟ್ಟ ಉತ್ತರ ನೀಡಿದೆ. ಪರಿಣಾಮ ಭಾರತೀಯ ಯೋಧರು ಮೃತಪಟ್ಟಿದ್ದಾರೆ. ಈ ಬಗ್ಗೆ ಸೇನೆಯ ಬಳಿ ಖಚಿತ ಮಾಹಿತಿಯಿದೆ ಎಂದು ಹೇಳಿದ್ದಾರೆ.
ಯುದ್ಧ ಮಾಡಬೇಕೆಂಬ ಆಸಕ್ತಿ ಯಾರಿಗೂ ಇಲ್ಲ. ಆದರೆ, ಭಾರತ ತನಗಾಗಿರುವ ನಷ್ಟವನ್ನು ಮುಚ್ಚಿಡುತ್ತಿದೆ. ಭಾರತೀಯ ಸೇನೆ ಗಡಿ ದಾಟಿರುವ ಕುರಿತಂತೆ ಸೇನೆ ತನಿಖೆ ನಡೆಸುತ್ತಿದೆ ಎಂದು ತಿಳಿಸಿದ್ದಾರೆ.
Advertisement