ಹಾಸ್ಯ ನಟ ಕ್ರಿಸ್ ರಾಕ್ ಚಾರ್ಲಿ ಮರ್ಫಿ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದು, " ತಮಾಷೆಯ, ಅತ್ಯಂತ ನೈಜ ವ್ಯಕ್ತಿತ್ವದ ಸಹೋದರನನ್ನು ಕಳೆದುಕೊಂಡಿದ್ದೇವೆ" ಎಂದು ಟ್ವೀಟ್ ಮಾಡಿದ್ದಾರೆ. ಬ್ಯಾಸ್ಕೆಟ್ ಬಾಲ್ ನ ಮಾಜಿ ಸೂಪರ್ ಸ್ಟಾರ್ ಮ್ಯಾಜಿಕ್ ಜಾನ್ ಸನ್ ಸಹ ಟ್ವೀಟ್ ಮಾಡಿದ್ದು, ಚಾಪ್ಪೆಲ್ಲೇ'ಸ್ ಶೋ ನಲ್ಲಿ ಚಾರ್ಲಿ ಮರ್ಫಿ ಅವರ ನಟನೆಯಲ್ಲಿರುತ್ತಿದ್ದ ಹಾಸ್ಯವನ್ನು ನಾನು ಬೇರೆಲ್ಲೂ ಕಂಡಿಲ್ಲ ಎಂದಿದ್ದಾರೆ. ಹ್ಯಾಮಿಲ್ಟನ್ ನಾಟಕಕಾರ ಲಿನ್ ಮ್ಯಾನುಯಲ್ ಮಿರಾಂಡಾ ಸಹ ಟ್ವೀಟ್ ಮಾಡಿದ್ದು ಮರ್ಫಿ ಅವರ ಕಥಾನಿರೂಪಣೆ ಮರೆಯಲಾಗದ್ದು ಎಂದು ಟ್ವೀಟ್ ಮಾಡಿದ್ದಾರೆ.