ಟಾರ್ಗೆಟ್ ಇಸೀಸ್: ಅಮೆರಿಕಾದಿಂದ ಅಫ್ಘಾನಿಸ್ತಾನದ ಐಎಸ್ಐಎಸ್ ಟನಲ್ ಮೇಲೆ ಅತಿ ದೊಡ್ಡ ಬಾಂಬ್

ಅಫ್ಘಾನಿಸ್ತಾನದಲ್ಲಿ ಉಗ್ರರ ನೆಲೆಯನ್ನು ಗುರಿಯಾಗಿರಿಸಿಕೊಂಡು ಅಮೆರಿಕಾ ಬಾಂಬ್ ದಾಳಿ ನಡೆಸಿದ್ದು, ಅಫ್ಘಾನಿಸ್ತಾನದಲ್ಲಿರುವ ಐಎಸ್ಐಎಸ್ ಟನಲ್ ಮೇಲೆ 21, 600 ಪೌಂಡ್ ಭಾರದ ಬಾಂಬ್ ಎಸೆದಿದೆ.
ಟಾರ್ಗೆಟ್ ಇಸೀಸ್: ಅಮೆರಿಕಾದಿಂದ ಅಫ್ಘಾನಿಸ್ತಾನದ ಮೇಲೆ ಅತಿ ದೊಡ್ಡ ಬಾಂಬ್
ಟಾರ್ಗೆಟ್ ಇಸೀಸ್: ಅಮೆರಿಕಾದಿಂದ ಅಫ್ಘಾನಿಸ್ತಾನದ ಮೇಲೆ ಅತಿ ದೊಡ್ಡ ಬಾಂಬ್
Updated on: 
ಕಾಬೂಲ್: ಅಫ್ಘಾನಿಸ್ತಾನದಲ್ಲಿ ಉಗ್ರರ ನೆಲೆಯನ್ನು ಗುರಿಯಾಗಿರಿಸಿಕೊಂಡು ಅಮೆರಿಕಾ ಬಾಂಬ್ ದಾಳಿ ನಡೆಸಿದ್ದು, ಅಫ್ಘಾನಿಸ್ತಾನದಲ್ಲಿರುವ ಐಎಸ್ಐಎಸ್ ಟನಲ್ ಮೇಲೆ 21, 600 ಪೌಂಡ್ ಭಾರದ ನಾನ್ ನ್ಯೂಕ್ಲಿಯರ್ ಬಾಂಬ್ ಎಸೆದಿದೆ. 
ನಂಗರ್‌ ಹಾರ್‌ ನಲ್ಲಿ ಅಮೆರಿಕಾ ಜಿಬಿಯು-43ಬಿ ಎಂಬ ಬಾಂಬ್ ದಾಳಿ ನಡೆಸಿದ್ದು, ಎಂಸಿ-130 ವಿಮಾನದ ಮೂಲಕ ಬಾಂಬ್ ದಾಳಿ ನಡೆಸಲಾಗಿದೆ. ಬಾಂಬ್ ದಾಳಿ ನಡೆಸಲಾಗಿರುವುದರ ಬಗ್ಗೆ ಪೆಂಟಗನ್ ಅಧಿಕೃತ ಮಾಹಿತಿ ನೀಡಿದೆ. ಸಿರಿಯಾ ಸೇನಾ ನೆಲೆ ಮೇಲೆ ಅಮೆರಿಕಾ ಕ್ಷಿಪಣಿ ದಾಳಿ ನಡೆಸಿದ ಬೆನ್ನಲ್ಲೇ ಅಫ್ಘಾನಿಸ್ತಾನದಲ್ಲಿರುವ ಐಎಸ್ಐಎಸ್ ಟನಲ್ ಮೇಲೆ ಎಂಒಎಬಿ ಮದರ್ ಆಫ್ ಆಲ್ ಬಾಂಬ್ಸ್ ಎಂದು ಕರೆಯಲಾಗುವ ಅತಿ ದೊಡ್ಡ ಬಾಂಬ್ ನ್ನು ಇದೇ ಮೊದಲ ಬಾರಿಗೆ ಎಸೆದಿದೆ. 
2003 ರಲ್ಲಿ ಇರಾಕ್ ವಿರುದ್ಧ ಯುದ್ಧ ಪ್ರಾರಂಭವಾಗುವುದಕ್ಕೂ ಕೆಲವೇ ದಿನಗಳ ಮುನ್ನ ಈ ಮದರ್ ಆಫ್ ಆಲ್ ಬಾಂಬ್ಸ್ ನ್ನು ಪರೀಕ್ಷೆ ಮಾಡಲಾಗಿತ್ತು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com