ಸರ್ವಾಧಿಕಾರಿಗೆ ಮತ್ತೆ ಮುಖಭಂಗ: ಉತ್ತರ ಕೊರಿಯಾ ಕ್ಷಿಪಣಿ ಪರೀಕ್ಷೆ ವಿಫಲ!

ಅಮೆರಿಕ ವಿರುದ್ಧ ತನ್ನ ಬಲ ಪ್ರದರ್ಶನ ತೋರಿದ ಬೆನ್ನಲ್ಲೇ ಉತ್ತರ ಕೊರಿಯಾ ನಡೆಸಿದ ಕ್ಷಿಪಣಿ ಪರೀಕ್ಷೆ ವಿಫಲವಾಗಿದೆ ಎಂದು ದಕ್ಷಿಣ ಕೊರಿಯಾ ಹಾಗೂ ಅಮೆರಿಕದ ಭದ್ರತಾ ಸಂಸ್ಥೆಗಳು ವರದಿ ಮಾಡಿವೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಸಿಯೋಲ್: ಅಮೆರಿಕ ವಿರುದ್ಧ ತನ್ನ ಬಲ ಪ್ರದರ್ಶನ ತೋರಿದ ಬೆನ್ನಲ್ಲೇ ಉತ್ತರ ಕೊರಿಯಾ ನಡೆಸಿದ ಕ್ಷಿಪಣಿ ಪರೀಕ್ಷೆ ವಿಫಲವಾಗಿದೆ ಎಂದು ದಕ್ಷಿಣ ಕೊರಿಯಾ ಹಾಗೂ ಅಮೆರಿಕದ ಭದ್ರತಾ ಸಂಸ್ಥೆಗಳು ವರದಿ ಮಾಡಿವೆ.

ಅಮೆರಿಕ ತನ್ನ ಮೇಲೆ ದಾಳಿ ಮಾಡಿದರೆ ಅದಕ್ಕೆ ತಕ್ಕ ಪ್ರತ್ಯುತ್ತರ ನೀಡುವುದಾಗಿ ಹೇಳಿ ಅದರ ಬೆನ್ನಲ್ಲೇ ತನ್ನಲ್ಲಿರುವ ಅತ್ಯಾಧುನಿಕ ಕ್ಷಿಪಣಿಗಳ ಪರೇಡ್ ನಡೆಸುವ ಮೂಲಕ ವಿಶ್ವ ಸಮುದಾಯಕ್ಕೆ ಟಾಂಗ್ ನೀಡಿದ್ದ ಉತ್ತರ ಕೊರಿಯಾ,  ಇದರ ಬೆನ್ನಲ್ಲೇ ಮತ್ತೊಂದು ಖಂಡಾಂತರ ಕ್ಷಿಪಣಿಯ ಪರೀಕ್ಷೆಗೆ ಮುಂದಾಗಿತ್ತು. ಆದರೆ ಕ್ಷಿಪಣಿ ಪರೀಕ್ಷೆ ವಿಫಲವಾಗಿದ್ದು, ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಗೆ ಮುಖಭಂಗವಾಗಿದೆ ಎಂದು ಅಮೆರಿಕ ಹಾಗೂ ದಕ್ಷಿಣ ಕೊರಿಯಾ ಭದ್ರ  ಸಂಸ್ಥೆಗಳು ಹೇಳಿವೆ.

ಅಮೆರಿಕದ ಭದ್ರತಾ ಸಂಸ್ಥೆಗಳು ವರದಿ ನೀಡಿರುವಂತೆ ಉತ್ತರ ಕೊರಿಯಾದ ವಿವಾದಿತ ಸಿನ್ಫೋ ಸಮೀಪ ಹೊಸ ಮಾದರಿಯ ಕ್ಷಿಪಣಿ ಪರೀಕ್ಷೆ ನಡೆದಿದ್ದು, ಪರೀಕ್ಷೆ ವಿಫಲವಾಗಿದೆ ಎಂದು ಹೇಳಿದೆ. ಸಿನ್ಫೋ ಪ್ರದೇಶ ಜಪಾನ್ ದೇಶದ  ಸಮುದ್ರ ವ್ಯಾಪ್ತಿಯಲ್ಲಿ ಬರುವ ಪ್ರದೇಶವಾಗಿದ್ದು, ಈ ಪ್ರದೇಶದ ಮೇಲಿನ ನಿಯಂತ್ರಣಕ್ಕಾಗಿ ಉತ್ತರ ಕೊರಿಯಾ ಹವಣಿಸುತ್ತಿದ್ದು, ಇದೇ ಕಾರಣಕ್ಕಾಗಿ ಈ ವಿವಾದಿತ ಪ್ರದೇಶದಲ್ಲೇ ತನ್ನ ಹಲವು ಕ್ಷಿಪಣಿಗಳನ್ನು ಪ್ರಯೋಗಕ್ಕೆ  ಒಳಪಡಿಸಿದೆ. ಆ ಮೂಲಕ ಈ ಪ್ರದೇಶ ತನ್ನದು ಎಂಬ ಸಂದೇಶ ಸಾರಲು ಉತ್ತರ ಕೊರಿಯಾ ಮುಂದಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com