ವಿದೇಶಗಳಲ್ಲಿ ಅಕ್ರಮ ಹೂಡಿಕೆ ಆರೋಪ, ಪಾಕ್ ಪ್ರಧಾನಿ ವಿರುದ್ಧ ತನಿಖೆಗೆ ಸುಪ್ರೀಂ ಆದೇಶ

ಪನಾಮಾ ಪೇಪರ್ಸ್ ಹಗರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಅವರ ವಿರುದ್ಧ ಪಾಕ್ ಸುಪ್ರೀಂ ಕೋರ್ಟ್....
ನವಾಜ್ ಷರೀಫ್
ನವಾಜ್ ಷರೀಫ್
Updated on: 
ಇಸ್ಲಾಮಾಬಾದ್: ಪನಾಮಾ ಪೇಪರ್ಸ್ ಹಗರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಅವರ ವಿರುದ್ಧ ಪಾಕ್ ಸುಪ್ರೀಂ ಕೋರ್ಟ್ ಗುರುವಾರ ಜಂಟಿ ತನಿಖೆಗೆ ಆದೇಶಿಸಿದೆ.
ಪನಾಮಾ ಪೇಪರ್‌ ಲೀಕ್‌ ಮೂಲಕ 67 ವರ್ಷದ ಪಾಕ್‌ ಪ್ರಧಾನಿ ನವಾಜ್‌ ಷರೀಫ್ ಹಾಗೂ ಅವರ ಕುಟುಂಬದ ಅಕ್ರಮ ಹೂಡಿಗೆ ಬಹಿರಂಗವಾಗಿದ್ದು, ಈ ಬಗ್ಗೆ ತನಿಖೆ ನಡೆಸಲು ಸುಪ್ರೀಂ ಕೋರ್ಟ್ ಜಂಟಿ ತನಿಖಾ ತಂಡ ರಚಿಸಿದ್ದು, 60 ದಿನಗಳಲ್ಲಿ ವರದಿ ನೀಡುವಂತೆ ಸೂಚಿಸಿದೆ.
ತಮ್ಮ ವಿರುದ್ಧದ ಆರೋಪವನ್ನು ನವಾಜ್ ಷರೀಫ್ ಅವರು ಸ್ಪಷ್ಟವಾಗಿ ತಳ್ಳಿಹಾಕಿದ್ದರು. ಆದರೆ ಪ್ರತಿಪಕ್ಷ ನಾಯಕ ಇಮ್ರಾನ್ ಖಾನ್ ಅವರು ಷರೀಫ್ ವಿರುದ್ಧ ತನಿಖೆಗೆ ಆದೇಶಿಸಬೇಕು ಎಂದು ಕೋರ್ಟ್ ಮೊರೆ ಹೋಗಿದ್ದರು. ಅಲ್ಲದೆ ಪಾಕ್ ಪ್ರಧಾನಿ ವಿರುದ್ಧ ಬೀದಿಗಿಳಿದು ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದರು.
ನವಾಜ್ ಷರೀಫ್ ಹಾಗೂ ಅವರ ಸಂಬಂಧಿಕರು ತೆರಿಗೆ ಸ್ವರ್ಗ ರಾಷ್ಟ್ರಗಳಲ್ಲಿ ಅಕ್ರಮವಾಗಿ ಹಣ ಹೂಡಿಕೆ ಮಾಡಿರುವುದಾಗಿ ಪನಾಮಾ ದಾಖಲೆಗಳಲ್ಲಿ ಉಲ್ಲೇಖಿಸಲಾಗಿತ್ತು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com